Advertisement

ಬೆಲೆ ಇಲ್ಲದೇ ಹುಳಿ ಕಳಕೊಂಡ ಹುಣಸೆ

05:19 PM Feb 22, 2021 | Team Udayavani |

ಕುಷ್ಟಗಿ: ಈ ಬಾರಿ ಹುಣಸೆ ಉತ್ತಮ ಇಳುವರಿ ಬಂದಿದೆಯಾದರೂ ಮಾರುಕಟ್ಟೆಯಲ್ಲಿ ಖರೀದಿದಾರರ ಕೊರತೆಯಿಂದ ಬೆಲೆ ಕುಸಿತ ಕಂಡಿದೆ. ಹುಣಸೆ ವ್ಯಾಪಾರವನ್ನೇ ನಂಬಿದ್ದ ಭಜಂತ್ರಿ ಸಮುದಾಯ ಸಂಕಷ್ಟ ಎದುರಿಸುತ್ತಿದೆ.

Advertisement

ಕಳೆದ ವರ್ಷ ಹುಣಸೆ ಉತ್ಪನ್ನ ಕಡಿಮೆ ಇತ್ತುಆದರೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 8ರಿಂದ 10 ಸಾವಿರ ರೂ. ಬೆಲೆ ಇತ್ತು. ಆದರೆ ಈ ಬಾರಿ ಉತ್ತಮ ಮಳೆಯಿಂದ ಹುಣಸೆ ಹಣ್ಣಿನಉತ್ಪನ್ನ ಹೆಚ್ಚಿದೆ. ಆರಂಭದಲ್ಲಿ ಪ್ರತಿ ಕ್ವಿಂಟಲ್‌ಗೆ 6 ಸಾವಿರ ರೂ. ಇದ್ದ ಬೆಲೆ ವಾರದಿಂದವಾರಕ್ಕೆ 500 ರೂ. ದಿಂದ 1 ಸಾವಿರ ರೂ.ಗೆ ಕುಸಿತಗೊಂಡಿದೆ.

ಕಳೆದ ವರ್ಷ ಬೆಲೆ ಇದ್ದರೂ ಉತ್ಪನ್ನ ಇರಲಿಲ್ಲ, ಆದರೆ ಈ ವರ್ಷ ಉತ್ಪನ್ನ ಹೆಚ್ಚಿದ್ದರೂಬೆಲೆ ಇಲ್ಲದೇ ರೈತರು ನಿರಾಸೆಗೊಂಡಿದ್ದಾರೆ.ಕುಷ್ಟಗಿ ಮಾರುಕಟ್ಟೆಗೆ ಇನ್ನೂ ಎರಡು ವಾರ ಹುಣಸೆ ಉತ್ಪನ್ನ ಬರುವ ಸಾಧ್ಯತೆ ಇದ್ದು,ರೈತರು, ಮಾರಾಟಗಾರರಿಗೆ ಬೆಲೆ ಮತಷ್ಟು ಕುಸಿತದ ಆತಂಕ ಶುರುವಾಗಿದೆ.

ಹುಣಸೆ ಮರಗಳನ್ನು ರೈತರಿಂದ ಗುತ್ತಿಗೆ ತೆಗೆದುಕೊಂಡಿರುವ ಮಾರಾಟಗಾರರು,ಹುಣಸೆ ಮರಗಳಲ್ಲಿರುವ ಹಣ್ಣು ಉದುರಿಸಿ,ಕುಟ್ಟಿ ನಾರು ತೆಗೆದು ಮಾರುಕಟ್ಟೆಗೆಸಾಗಿಸಲು ಹಿಂದೇಟು ಹಾಕುತ್ತಿದ್ದಾರೆ.ಹುಣಸೆ ಮರಗಳನ್ನು ಉದುರಿಸುವುದುಕಷ್ಟಕರ ಕೆಲಸವಾಗಿದ್ದು, ಪ್ರತಿ ಗಿಡಕ್ಕೆ 600ರೂ. ದಿಂದ 650 ರೂ. ಪ್ರತಿದಿನದ ಕೂಲಿ.ಹುಣಸೆ ಹಣ್ಣು ಆರಿಸುವ ಮಹಿಳೆಯರಿಗೆಅದನ್ನು ತಂದು ಬೀಜ ಬೇರ್ಪಡಿಸಿ, ನಾರು ತೆಗೆಯುವವರಿಗೆ 200ರಿಂದ 250 ರೂ. ಕೂಲಿ ಇದೆ. ಇನ್ನು ಮಾರುಕಟ್ಟೆಗೆ ಸಾಗಿಸುವಖರ್ಚು,ಮಾರುಕಟ್ಟೆಯಲ್ಲಿ ಜಾಗದ ಬಾಡಿಗೆ ಇತ್ಯಾದಿ  ಖರ್ಚುಗಳ ಪಟ್ಟಿ ಬೆಳೆಯುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಮರದಲ್ಲಿ ಹುಣಸೆ ಉತ್ಪನ್ನ ಉದುರಿಸಿದ ಖರ್ಚು ಸಹ ಕೈಗೆಟುಕದಂತಾಗಿದೆ.

ಈ ಹುಣಸೆ ಹಣ್ಣು ಎಪಿಎಂಸಿ ವ್ಯಾಪ್ತಿಯಲ್ಲಿಇಲ್ಲ. ಇಲ್ಲಿನ ಹಳೆ ಪ್ರವಾಸಿ ಮಂದಿರಬಳಿ ಪ್ರತಿವರ್ಷವೂ ಪ್ರತ್ಯೇಕ ಮಾರುಕಟ್ಟೆನಡೆಯುತ್ತಿದ್ದು, ರೈತರಿಗೆ ನಿರ್ಧರಿತ ಬೆಳೆಇಲ್ಲ. ಇಲ್ಲಿ ಮಧ್ಯವರ್ತಿಗಳು ನಿರ್ಣಯಿಸಿದಬೆಲೆಗೆ ಹುಣಸೆ ಹಣ್ಣುಗಳ ಗಂಟು ಮಾರಾಟ ಮಾಡುವ ಪರಿಸ್ಥಿತಿ ಇದೆ.

Advertisement

ಕಳೆದ ಜನವರಿಯಿಂದ ಹುಣಸೆ ಉತ್ಪನ್ನ ಮಾರುಕಟ್ಟೆಗೆ ಆವಕವಾಗಿದ್ದು, ಗುಣಮಟ್ಟದ ಆಧಾರದ ಮೇಲೆ 4 ಸಾವಿರದಿಂದ 6 ಸಾವಿರ ರೂ. ಪ್ರತಿ ಕ್ವಿಂಟಲ್‌ಗೆ ದರ ಇದೆ. ರೈತರಿಗೆ ನಷ್ಟವಾಗಿದ್ದು, ಹುಣಸೆ ಮರಗಳನ್ನು ಗುತ್ತಿಗೆ ಹಿಡಿದವರಿಗೆ ಲಾಭ ಇಲ್ಲ. ಖರೀ ದಾರರು ಬರುತ್ತಿಲ್ಲ.ಸಣ್ಣಪುಟ್ಟ ವ್ಯಾಪಾರಸ್ಥರಿಂದ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಹುಣಸೆ ಉತ್ಪನ್ನ ಹೆಚ್ಚಿದಷ್ಟು ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ನೆರವಿಗೆ ಧಾವಿಸಬೇಕು. ಕುಷ್ಟಗಿಯಲ್ಲಿ ಹುಣಸೆಗಾಗಿ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕಿದೆ.  – ಅಂಬಣ್ಣ ಭಜಂತ್ರಿ, ಹುಣಸೆ ವರ್ತಕ

ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಹುಣಸೆಮರಗಳನ್ನು ಹಿಡಿದು, ಕಾಯಿ ಉದುರಿಸಿ,ನಾರು ತೆಗೆದು, ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಖರ್ಚಿಗೆ,ಮಾರಾಟ ದರಕ್ಕೆ ಸರಿಸಮವಾಗಿದೆ. ಹುಣಸೆ ಮರಗಳಲ್ಲಿ ಹೆಚ್ಚು ಫಸಲಿನಿಂದ ಲಾಭದ ನಿರೀಕ್ಷೆಯಲ್ಲಿದ್ದೆವು. ಸದ್ಯದ ಪರಿಸ್ಥಿತಿಯಲ್ಲಿ ಹುಣಸೆ ಹಣ್ಣಿನಿಂದ ಲಾಭದ ನಿರೀಕ್ಷೆ ಕೈ ಬಿಟ್ಟಿದ್ದೇವೆ. –ಯಮನೂರಪ್ಪ ಭಜಂತ್ರಿ, ರೈತ

ಹುಣಸೆ ಹಣ್ಣು ಎಪಿಎಂಸಿ ಅಧೀನದಲ್ಲಿ ಇಲ್ಲ. ಮುಂದಿನದಿನಗಳಲ್ಲಿ ಈ ವಿಷಯವಾಗಿತಿದ್ದುಪಡಿ ತಂದು, ಎಪಿಎಂಸಿ ಅಧೀನಕ್ಕೆ ಸೇರಿಸಲು ಪ್ರಯತ್ನಿಸುವೆ.ಕುಷ್ಟಗಿಯಲ್ಲಿ ಖಾಸಗಿ ಮಾರಾಟ ವ್ಯವಸ್ಥೆಇದ್ದು, ಪ್ರತ್ಯೇಕ ಮಾರುಕಟ್ಟೆ ಇಲ್ಲವೇ ಎಪಿಎಂಸಿಯಲ್ಲಿ ಮಾರಾಟದ ವ್ಯವಸ್ಥೆ ಯೋಜಿಸಲಾಗುವುದು. ಎಂ.ಸಿದ್ದೇಶ, ಕುಷ್ಟಗಿ ತಹಶೀಲ್ದಾರ್‌

 

ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next