Advertisement

ಪಾತಾಳಕ್ಕಿಳಿದ ತರಕಾರಿ ಬೆಲೆ: ರೈತರಿಗೆ ನಿರಾಸೆ

11:59 AM Nov 29, 2020 | Suhan S |

ಚಾಮರಾಜನಗರ: ಕಳೆದ ಒಂದು ತಿಂಗಳ ‌ ಹಿಂದೆ ಗ‌ಗನಕ್ಕೇರಿದ್ದ ತರಕಾರಿ ಬೆಲೆಗಳೆಲ್ಲವೂ ಈಗ ಕುಸಿತ ಕಂಡಿದೆ. ಇದರಿಂದ ‌ ಗ್ರಾಹಕರು ತುಸು ಸಮಾಧಾನ ಹೊಂದಿದರೆ, ಬೆಳೆದ ರೈತರಿಗೆ ಭಾರಿ ನಿರಾಸೆಯಾಗಿದೆ.

Advertisement

ಸ್ಥಳೀಯ ಹಾಪ್‌ ಕಾಮ್ಸ್‌ನಲ್ಲಿ ಒಂದು ತಿಂಗಳ ಹಿಂದೆ ಬೀನ್ಸ್‌ ದರ ‌ ಕಿಲೋಗೆ 60 ರಿಂದ ‌ 80 ರೂ. ಇತ್ತು. ಈಗ 15 ರಿಂದ ‌ 20 ರೂ. ಆಗಿದೆ. ವಿಪರ್ಯಾಸವೆಂದರೆ ಇದು ಗ್ರಾಹಕನಿಗೆ ಸಿಗುವ ‌ ರೀಟೇಲ್‌ ದ ರ. ಬೀನ್ಸ್‌ ಬೆಳೆದ ರೈತ ‌ ಎಪಿಎಂಸಿಯಲ್ಲಿ ತಂದು ಮಾರಾಟ ಮಾಡಿದ ರೆ ಆತನಿಗೆ ಕೆ.ಜಿ.ಗೆ 4 ರಿಂದ 5 ರೂ.ಕೊಡಲಾಗುತ್ತದೆ.ರೈತನಿಂದ ಕೆ.ಜಿ.ಗೆ 5 ರೂ.ಗೆ ಕೊಂಡ ಬೀನ್ಸ್‌ ಮಧ್ಯವರ್ತಿಗಳು ಮಾರಾಟಗಾರರಿಗೆ ಲಾಭ ಮಾಡಿಕೊಟ್ಟು, ಗ್ರಾಹಕ ‌ ಕೈಗೆ 15 ರೂ.ಗೆ ಸಿಗುತ್ತದೆ. ಟೊಮೆಟೋ ಬೆಲೆ ತಿಂಗಳ ‌ ಹಿಂದೆ ಹಾಪ್‌ಕಾಮ್ಸ್ ನಲ್ಲಿ 25-35 ರೂ. ಇತ್ತು. ಈಗ ಸಾಧಾರಣ ಗುಣಮಟ್ಟದ ಟೊಮೆಟೋಗೆ 10 ರೂ. ಆಗಿದೆ.

ಇದೇ ಟೊಮೆಟೋವನ್ನು ಎಪಿಎಂಸಿಯಲ್ಲಿ ರೈತರಿಂದ ಹ‌ರಾಜಿನಲ್ಲಿ ಟೊಮೊಟೋಗೆ ಕೆ.ಜಿ. 3 ರೂ.ಗೆ ಸ‌ ಗ‌ಟು ಮಾರಾಟಗಾರರು ಕೊಳ್ಳುತ್ತಾರೆ. ಇನ್ನು ಸ್ವಲ್ಪ ಉತ್ತಮ ಗುಣಮ ಟ್ಟದ ಟೊಮೆಟೋವನ್ನು 5 ರೂ.ಗೆ ಕೊಳ್ಳುತ್ತಾರೆ. ಕೆಲ ದಿನಗಳ ‌ ಹಿಂದೆ ಹಸಿ ಮೆಣಸಿನಕಾಯಿ ಕಿಲೋಗೆ 50 ರಿಂದ ‌ 60 ಇತ್ತು. ಈಗ ‌ 25 ರಿಂದ 30 ರೂ. ಆಗಿದೆ. ರೈತರಿಂದ ‌ 18 ರಿಂದ ‌ 20 . ರೂಗೆ ಕೊಳ್ಳಲಾಗುತ್ತದೆ. ಬೆಂಡೆಕಾಯಿ 50 ರೂ. ಇತ್ತು. ಈಗ 30 ರೂ. ಆಗಿದೆ. ರೈತರಿಗೆ ಕಿಲೋಗೆ 12 ರೂ. ಕೊಡಲಾಗುತ್ತದೆ. ದಪ್ಪ ಈರುಳ್ಳಿ ದರ ಈಗ ಸ್ವಲ್ಪ ಕ ‌ಡಿಮೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕಿಲೋಗೆ 50-60 ರೂ. ಇದೆ. ಕ್ಯಾರೆಟ್‌60-70 ರೂ. ಇತ್ತು. ಈಗ40 ರೂ. ಆಗಿದೆ. ಹೀರೇಕಾಯಿ 40 ರೂ. ಇತ್ತು. ಈಗ 20 ರೂ. ಇದೆ. ಎಲೆ ಕೋಸು 15-20 ರೂ. ಇದ್ದು ದರ ಸ್ಥಿರವಾಗಿದೆ. ಗೆಡ್ಡೆ ಕೋಸು 40 ರೂ. ಇದೆ. ಆಲೂಗಡ್ಡೆ  60 ರೂ. ಆಗಿದೆ. ಹಿಂದೆ 40 ರೂ. ಇತ್ತು. ಬೀಟ್‌ರೂಟ್‌ 40 ರೂ. ಇತ್ತು. ಈಗ 30 ರೂ. ಆಗಿದೆ. ಮೂಲಂಗಿ 25 ರೂ. ಇತ್ತು. ಪ್ರಸ್ತುತ 15 ರೂ. ಆಗಿದೆ.

ತೆಂಗಿನಕಾಯಿ, ನುಗ್ಗೆಕಾಯಿಗೆ ಉತ್ತಮ ಬೆಲೆ: ಈಗ ಕಾರ್ತೀಕ ‌ ಮಾಸವಾದ ಕಾರಣ, ಮದುವೆ, ಗೃಹ ಪ್ರವೇಶಗಳ‌ ಸೀಸನ್‌ ಇರುವುದರಿಂದ ನುಗ್ಗೆಕಾಯಿ ದರ ಮಾತ್ರ ಕಡಿಮೆಯಾಗಿಲ್ಲ. ಕಿಲೋಗೆ 100 ರೂ. ಇದೆ. ಹಾಗೆಯೇ ತೆಂಗಿಗೆ ‌ ಕಾಯಿಗೆ 25 ರಿಂದ 30 ರೂ. ದರವಿದೆ. ರೈತ ‌ರಿಂದ 20 ರೂ.ಗೆಕೊಳ್ಳಲಾಗುತ್ತಿದೆ.

ದರ ‌ಕಡಿಮೆಯಾಗಲು ಕಾರಣ :  ತರಕಾರಿಗಳ ಬೆಲೆ ಕಡಿಮೆಯಾಗಲು, ಮಳೆ ಇಲ್ಲದಿರುವುದು ಕಾರಣ. ಒಂದು ತಿಂಗಳ ಹಿಂದಿನವರೆಗೂ ಮಳೆಯಿಂದಾಗಿ ಗೆಡ್ಡೆ ತರಕಾರಿಗಳು ಸೇರಿ, ಟೊಮೆಟೋ, ಬೀನ್ಸ್‌ ಇತ್ಯಾದಿಗಳು ಜಮೀನಿನಲ್ಲಿ ಕೊಳೆತು ಮಾರುಕಟ್ಟೆಗೆ ಹೆಚ್ಚಿನ ಆವಕ ಬಾರದೇ ದರ ಹೆಚ್ಚಳವಾಗಿತ್ತು. ಈಗ ಮಳೆ ಇಲ್ಲದ ಕಾರಣ ತರಕಾರಿಗಳ ಆವಕ ಹೆಚ್ಚಾಗಿದೆ. ಇದರ ದುರ್ಲಾಭ ಪಡೆದಿರುವ ಮಧ್ಯವರ್ತಿಗಳು ರೈತರಿಂದ ಕಡಿಮೆ ದರಕ್ಕೆ ಕೊಂಡು ಮಾರಾಟಗಾರರಿಗೆ ಮಾರುತ್ತಿದ್ದಾರೆ. ಕಷ್ಟಪಟ್ಟು ತರಕಾರಿ ಬೆಳೆದ ರೈತ, ಎಪಿಎಂಸಿಯಲ್ಲಿ ಕಡಿಮೆ ಬೆಲೆಗೆ ಮಾರುವುದಲ್ಲದೇ ಮಧ್ಯವರ್ತಿಗೆ ಶೇ. 10ರಷ್ಟು ಕಮಿಷನ್‌ ನೀಡಬೇಕು. ಹೀಗಾಗಿ ರೈತನಿಗೆ ತಾನು ಬೆಳೆದ ತರಕಾರಿಗೆ ಮಾಡಿದ ಕೃಷಿ ವೆಚ್ಚವೂ ಕೈಗೆ ಸಿಗುತ್ತಿಲ್ಲ. ಇತ್ತ ಗ್ರಾಹಕರಿಗೂ ಬೆಲೆ ಇಳಿಕೆಯ ಪ್ರಯೋಜನ ದೊರಕುತ್ತಿಲ್ಲ. ಕೇರಳ ಮಾದರಿಯಲ್ಲಿ ಸರ್ಕಾರ ಬೆಳೆಗಾರನಿಗೆ ಬೆಂಬಲ ಬೆಲೆ ನೀಡಬೇಕು. ಇಲ್ಲವೇ ಸರ್ಕಾರ ಕನಿಷ್ಠ ದರ ನಿಗದಿ ಮಾಡಿ, ಎಪಿಎಂಸಿಯಲ್ಲಿ ತಾನೇಕೊಳ್ಳಬೇಕು ಎಂಬುದು ನೊಂದ ರೈತರ ಆಗ್ರಹವಾಗಿದೆ.

Advertisement

ನಾನು 57 ಕೆ.ಜಿ. ಬೆಂಡೆಕಾಯಿಯನ್ನು ಎಪಿಎಂಸಿಗೆ ತೆಗೆದುಕೊಂಡು ಹೋಗಿದ್ದೆ. 619 ರೂ. ಸಿಕ್ಕಿತು.ಕಟಾವಿನಕೂಲಿ 400 ರೂ. ಹಾಗೂ ಸಾಗಣೆ 200 ರೂ.ಕರ್ಚು ಆಗಿ 19 ರೂ. ಸಿಕ್ಕಿತು. 24 ರೂ. ಟೀ ಗೆ ಕೊಟ್ಟೆ. ನನ್ನಕೈಯಿಂದಲೇ 5 ರೂ. ಖರ್ಚಾಯಿತು. ನನ್ನ ಶ್ರಮ ಸಮಯ ಎಲ್ಲಾ ವ್ಯರ್ಥ. ಎಚ್‌.ಸಿ. ಮಧುಸೂದನ್‌, ರೈತ, ಮಂಗಲ.

 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next