Advertisement

ವಾಯು ಮಾಲಿನ್ಯ ತಡೆದೆ ಮುಂದಾಗಿ

11:55 AM Nov 05, 2017 | |

ಹುಣಸೂರು: ಪರಿಸರ ಮಾಲಿನ್ಯ ತಡೆಯಲು ಪ್ರತಿಯೊಬ್ಬ ವಾಹನ ಸವಾರರು ಆರು ತಿಂಗಳಿಗೊಮ್ಮೆ ಕ‌ಡ್ಡಾಯವಾಗಿ ವಾಹನ ತಪಾಸಣೆಗೊಳಪಡಿಸಿಕೊಳ್ಳಬೇಕೆಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಪ್ರಭುಸ್ವಾಮಿ ತಿಳಿಸಿದರು.

Advertisement

ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಯುಮಾಲಿನ್ಯ ತಡೆ ಮಾಸಾಚರಣೆ ಆಂಗವಾಗಿ ಆಯೋಜಿಸಿದ್ದ ಅರಿವು ಜಾಥಾ ಉದ್ಘಾಟಿಸಿ ಮಾತನಾಡಿದರು. ವಾಹನಗಳು ಹೊರಸೂಸುವ ಕಾರ್ಬನ್‌ಯುಕ್ತ ವಿವಿಧ ವಿಷಾ ಅನಿಲಗಳಾದ ಕಾರ್ಬನ್‌ ಮೋನಾಕ್ಸೈಡ್‌, ಕಾರ್ಬನ್‌ ಡೈಯಾಕ್ಸೈಡ್‌, ಸಲರ್‌ಡೈಯಾಕ್ಸೈಡ್‌, ಹೈಡ್ರೋಕಾರ್ಬನ್‌ ಮುಂತಾದವುಗಳು ಹಲವಾರು ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ.

ಗರ್ಭಿಣಿಯರಲ್ಲಿ ಗರ್ಭಪಾತಕ್ಕೆ ಕಾರಣವಾಗಬಹುದು. ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಬೆಳವಣಿಗೆ ಕುಂಠಿತ, ಯುವಕರು ಮತ್ತು ವಯೋವೃದ್ಧರಿಗೆ ಶ್ವಾಸಕೋಶದ ಕ್ಯಾನ್ಸರ್‌ನಂತಹ ಕಾಯಿಲೆಗಳು ಹೆಚ್ಚುತ್ತಿವೆ ಎಂದರು. ಕ‌ಚೇರಿ ಅಧೀಕ್ಷಕ ಎಂ.ಎಲ್‌.ಎನ್‌.ಪ್ರಸಾದ್‌, ಇಲಾಖೆ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಡೀ ತಿಂಗಳು ಅರಿವು ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗುವುದೆಂದರು.

ಕಚೇರಿ ಸಿಬ್ಬಂದಿಗಳಾದ ವೆಂಕಟೇಶ್‌, ಶ್ರೀನಿವಾಸ್‌, ಶಾರದಾದೇವಿ, ಶರತ್‌ಚಂದ್ರ, ಜಾನಕಿ, ಶಿವಣ್ಣ, ಹರೀಶ್‌ ಇದ್ದರು. ಇದಕ್ಕೂ ಮುನ್ನ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು. ಗೃಹರಕ್ಷಕ ದಳದ ಸಿಬ್ಬಂದಿಗಳು, ಚಾಲನಾ ತರಬೇತಿ ಕೇಂದ್ರಗಳ ಮುಖ್ಯಸ್ಥರು, ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next