Advertisement

ಅಪೌಷ್ಟಿಕತೆ ನಿವಾರಣೆ, ಮಹಿಳಾ ಸಬಲೀಕರಣಕ್ಕೆ ಒತ್ತು

09:56 AM Mar 10, 2020 | Lakshmi GovindaRaj |

ಬೆಂಗಳೂರು: ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ರಾಜ್ಯದಲ್ಲಿ ಅಪೌಷ್ಟಿಕತೆ ನಿವಾರಣೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ “ಕಿತ್ತೂರು ರಾಣಿ ಚೆನ್ನಮ್ಮ, ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ’ ವಿತರಿಸಿ ಅವರು ಮಾತನಾಡಿದರು.

ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ, ಬಡತ ನದಲ್ಲಿರುವ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದರೆ ಮಗುವನ್ನು ಹೊರೆಯಾಗಿ ಸ್ವೀಕರಿಸುತ್ತಾರೆ. ಜನರಲ್ಲಿ ಈ ಮನಸ್ಥಿತಿ ಬದಲಾಗಬೇಕು. ಮಹಿಳೆ ಯರು ಕೀಳರಿಮೆ ಬಿಟ್ಟು ಎಲ್ಲ ಕ್ಷೇತ್ರದಲ್ಲಿಯೂ ಮುಂದಕ್ಕೆ ಬರಬೇಕು. ಮಹಿಳೆ ಯರು ಯಾವ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದರೂ ಮನೆಯನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಇದೇ ವೇಳೆ, ಜೊಲ್ಲೆ ಅವರು “ಸ್ತ್ರೀ ಶಕ್ತಿ ಗುಂಪುಗಳ ಯಶಸ್ವಿ ಕಥೆಗಳ ಅಂತರಾಳ – 15′ ಸಂಚಿಕೆ ಹಾಗೂ ಮಕ್ಕಳ ಕಲ್ಯಾಣ ಯೋಜನೆಗಳ ಎಸ್‌ಒಪಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ರಮೇಶ್‌ ಗೌಡ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ನಿರ್ದೇಶಕ ಕೆ.ಎ.ದಯಾನಂದ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ, ಗೌರವ ಸನ್ಮಾನ: ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗದಗ ಜಿಲ್ಲೆಯ ಯೋಗೀಶ್ವರ ವಿವಿದ್ದೋದ್ದೇಶ ಸಂಸ್ಥೆ, ವಿಜಯಪುರದ ದಂಡುಗುಂಡ ಬಸವೇಶ್ವರ ಶಿಕ್ಷಣ ಸಂಸ್ಥೆ, ಉತ್ತರ ಕನ್ನಡ ಜಿಲ್ಲೆಯ ಆಜಾದ್‌ ಯೂತ್‌ ಕ್ಲಬ್‌, ಬೀದರ್‌ನ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಘ, ಕೋಲಾರದ ಡಾ.ಎಚ್‌. ಮುನಿಯಪ್ಪ, ದಾವಣಗೆರೆಯ ಡಾ. ಸಿ.ಆರ್‌.ನಸೀರ್‌ ಅಹಮದ್‌, ರಾಯಚೂರು ಜಿಲ್ಲೆಯ ವಿರೇಶ್‌, ಉಡುಪಿಯ ಗುಣರತ್ನ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

50ಕ್ಕೂ ಅಧಿಕ ಮಳಿಗೆಗಳ ನಿರ್ಮಾಣ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಆಯುಷ್‌ ಇಲಾಖೆಯು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸುಮಾರು 50ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಿಸಿದ್ದು, ಇದರಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಇರುವ ಯೋಜನೆಗಳ ಬಗ್ಗೆ ತಿಳಿಸಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪುರಭವನದಿಂದ ರವಿಂದ್ರ ಕಲಾಕ್ಷೇತ್ರದವರೆಗೆ ಡೊಳ್ಳುಕುಣಿತ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ಮೆರುಗು ನೀಡಿದವು.

* ಮಹಿಳೆಯರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವ ಚಿಂತಾಮಣಿಯ ಹಾರ್ಟ್‌ ಸೆಂಟರ್‌, ವಿದ್ಯಾರಣ್ಯಪುರದ ಮಾರ್ಗದರ್ಶಿ ಮಹಿಳಾ ಸಮಾಜ, ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ, ವಿಜಯಪುರದ ಬಗಳಾಮುಖೀ ದೇವಿ ಮಹಿಳಾ ಪತ್ತಿನ ಸಹಕಾರ ಸಂಘ ನಿಯಮಿತ, ಧಾರವಾಡ ಜಿಲ್ಲೆಯ ರೇಣುಕಾ ಶಿಕ್ಷಣ ಮತ್ತು ಕಲ್ಯಾಣ ಕೇಂದ್ರ, ವಿಜಯಪುರ ಜಿಲ್ಲೆಯ ಮಂಜುಳಾ ಫೌಂಡೇಷನ್‌ ಸಂಸ್ಥೆ, ಬೆಂಗಳೂರಿನ ಡಾ.ರೇಖಾ ರಾಜೇಂದ್ರಕುಮಾರ್‌, ವಂದನಾ ಶಾಸ್ತ್ರೀ, ದಕ್ಷಿಣ ಕನ್ನಡ ಜಿಲ್ಲೆಯ ಹರಿಣಿ ಸದಾಶಿವ, ಉಡುಪಿಯ ಸಾವಿತ್ರ ಗಣೇಶ್‌, ಧಾರವಾಡದ ರತ್ನಾ ಗಂಗಪ್ಪ ಸಂಗಟಿ, ಎಸ್‌.ದೀಪಾಲಿ, ಹಾವೇರಿಯ ರಾಜೇಶ್ವರಿ ರವಿ ಸಾರಂಗಮಠ ಇವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

* ಬೆಳಗಾವಿಯ ದಾನೇಶ್ವರಿ ಮಹಿಳಾ ಸ್ವ ಸಹಾಯ ಸಂಘ, ಬೆಂಗಳೂರಿನ ಶ್ರೀನಿಧಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪು, ಚಿಕ್ಕಮಗಳೂರಿನ ಜನನಿ ನಗರ ಸ್ತ್ರೀ ಶಕ್ತಿ ಸಂಘಕ್ಕೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಯಿತು.

* ಚಿಕ್ಕಬಳ್ಳಾಪುರದ ಎ.ಸರಸಮ್ಮ, ಬೆಳಗಾವಿಯ ಡಾ. ಗುರುದೇವಿ ಹುಲೆಪ್ಪನವರಮಠ, ವಿಜಯಪುರ ಜಿಲ್ಲೆಯ ಡಾ.ಸರಸ್ಪತಿ ಚಿಮ್ಮಲಗಿ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ನೀಡಲಾಯಿತು.

* ಬೆಂಗಳೂರಿನ ಎ.ಎಸ್‌.ನಾಗರತ್ನಮ್ಮ, ಬೀದರ್‌ನ ವಿದ್ಯಾವತಿ ಇವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಹಾಗೂ ಬೆಳಗಾವಿ ಶಿಕ್ಷಣ ಕ್ಷೇತ್ರದಲ್ಲಿ ಡಾ.ಸುವರ್ಣಾ ಎಸ್‌. ಮಾದರ ಅವರಿಗೆ ಶಿಕ್ಷಣ ಕ್ಷೇತ್ರದ ಸಾಧನೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

* ಬೆಂಗಳೂರಿನ ಕೆ.ಪಿ.ಸವಿತಾ, ಹಾಸನದ ದಾಕ್ಷಾಯಿಣಿ, ದಕ್ಷಿಣ ಕನ್ನಡ ಜಿಲ್ಲೆಯ ಕಸ್ತೂರಿ, ಧಾರವಾಡ ಜಿಲ್ಲೆಯ ಸಂಗೀತಾ ವಿನೋದ ದೇವದಾಸ , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿ.ಎ.ಅಭಿನೇತ್ರಿ ಇವರಿಗೆ ಕಲಾ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು

* ತುಮಕೂರು ಜಿಲ್ಲೆಯ ಅನ್ನಪೂರ್ಣೇಶ್ವರಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ದಕ್ಷಿಣ ಕನ್ನಡದ ಭಾಗ್ಯನಿಧಿ ಸ್ತ್ರೀ ಶಕ್ತಿ ಗುಂಪು, ಉತ್ತರ ಕನ್ನಡ ಜಿಲ್ಲೆಯ ಅರುಣೋದಯ ಸ್ತ್ರೀ ಶಕ್ತಿ ಸಂಘ, ಕಲಬುರಗಿ ಚೆನ್ನಮ್ಮ ಮಹಿಳಾ ಸ್ವಸಹಾಯ ಸಂಘಕ್ಕೆ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ನೀಡಲಾಯಿತು.

* ಚಿತ್ರದುರ್ಗ ಜಿಲ್ಲೆಯ ಮಾಸ್ಟರ್‌ ಕಫೀಲ್‌ ಅಹಮದ್‌, ಬೆಳಗಾವಿಯ ಸುಖೀ ವಿ.ಉಪಾಧ್ಯೆ, ಚಿಕ್ಕಬಳ್ಳಾಪುರದ ಮಾಸ್ಟರ್‌ ಸಾತ್ವಿಕ್‌ ಅವರಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಮಹಿಳೆಯರು ಪ್ರಧಾನಿಯಾದರೆ ದೇಶದ ಚಿತ್ರಣವೇ ಬದಲಾಗಲಿದೆ. ಅದಕ್ಕೆ ಇಂದಿರಾಗಾಂಧಿಯವರೇ ಸಾಕ್ಷಿ. ಆದ್ದರಿಂದ ಮುಂದಿನ ದಿನಗಳಲ್ಲಿ ಮಹಿಳೆ ಪ್ರಧಾನಿಯಾಗಬೇಕು.
-ಉದಯ್‌ ಗರುಡಾಚಾರ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next