Advertisement

ಆಹಾರ ಅಭಾವದ ಭೀತಿಯಲ್ಲಿ ಅಮೆರಿಕ

05:20 PM Apr 15, 2020 | sudhir |

ನ್ಯೂಯಾರ್ಕ್‌: ಕೋವಿಡ್‌ ತಾಂಡವದಿಂದ ಸಂಪೂರ್ಣ ಕಂಗಾಲಾದ ಅಮೆರಿಕ ಈಗ ಆಹಾರದ ಅಭಾವದ ಸಮಸ್ಯೆಗೆ ಗುರಿಯಾಗುವ ಸಾಧ್ಯತೆಯಿದೆ. ಆಹಾರ ಉತ್ಪಾದನೆ, ಪೂರೈಕೆ ಸರಪಣಿಯಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರೇ ವೈರಸ್‌ ಸೋಂಕಿಗೆ ತುತ್ತಾಗಿರುವುದು ಇದಕ್ಕೆ ಕಾರಣ.

Advertisement

ಒಂದೆಡೆ ಉತ್ಪಾದನೆ ಮತ್ತು ಪೂರೈಕೆ ಕುಂಠಿತವಾಗಿದ್ದರೆ ಇನ್ನೊಂದೆಡೆ ಜನರು ಸಿಕ್ಕಿದ ದಿನಸಿಯನ್ನೆಲ್ಲ ಖರೀದಿಸಿ ದಾಸ್ತಾನು ಇಡುತ್ತಿದ್ದಾರೆ. ಹೀಗಾಗಿ ಅಂಗಡಿಗಳಲ್ಲಿ ದಿನಬಳಕೆಯ ಸಾಮಾನುಗಳು ಸಿಗುತ್ತಿಲ್ಲ.

ಮಾಂಸ, ತರಕಾರಿ, ದಿನಸಿ, ಹಾಲು ಸೇರಿದಂತೆ ಎಲ್ಲ ಆಹಾರ ಪೂರೈಕೆಯೂ ಕಡಿಮೆಯಾಗಿದೆ. ಮಾರುಕಟ್ಟೆ ವಿಶ್ಲೇಷಕರು ಮತ್ತು ಕಾರ್ಮಿಕ ಸಂಘಟನೆಗಳು ಕೆಲ ದಿನಗಳ ಹಿಂದೆಯೇ ಹೀಗೊಂದು ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದ್ದವು.

ಜನರು ಸುಮಾರು ಒಂದು ತಿಂಗಳ ಹಿಂದಿನಿಂದಲೇ ಸಾಮಾನು ದಾಸ್ತಾನು ಮಾಡಲು ತೊಡಗಿದ್ದರು. ಹೀಗಾಗಿ ಪೂರೈಕೆ ಜಾಲದ ಮೇಲೆ ಇನ್ನಿಲ್ಲದ ಒತ್ತಡ ಬಿದ್ದಿದೆ. ಕೊರತೆ ಇನ್ನೂ ಕೆಲ ದಿನ ಮುಂದುವರಿಯುವ ಸಾಧ್ಯತೆಯಿದೆ. ಇದು ತಾತ್ಕಾಲಿಕವಾದ ಅನನುಕೂಲತೆಯೇ ಹೊರತು ದೊಡ್ಡ ಸಮಸ್ಯೆಯೇನಲ್ಲ. ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿರುವಂತೆಯೇ ಆಹಾರ ಉತ್ಪಾದನೆಗೆ ಚುರುಕುಗೊಳ್ಳಲಿದೆ. ಜನರ ಬಳಿ ಈಗಾಗಲೇ ಸಾಕಷ್ಟು ಆಹಾರ ದಾಸ್ತಾನು ಇರುವುದರಿಂದ ಮುಗಿಬಿದ್ದು ಖರೀದಿಸುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ವಿಶ್ಲೇಷಕರು.

ಜನರು ವೈವಿಧ್ಯತೆಯನ್ನು ಬಯ ಸುತ್ತಿದ್ದಾರೆ. ಆದರೆ ಸದ್ಯಕ್ಕೆ ಇಷ್ಟೆಲ್ಲ ವೈವಿಧ್ಯತೆಯನ್ನು ಒದಗಿಸಲು ಸಾಧ್ಯ ವಾಗುತ್ತಿಲ್ಲ. ಇದನ್ನೇ ಜನರು ಆಹಾರದ ಅಭಾವ ಎಂದು ಭಾವಿಸಿರುವ ಸಾಧ್ಯತೆ ಯಿದೆ ಎನ್ನುವುದು ಅವರು ನೀಡುವ ಸಮಜಾಯಿಷಿ.
ಆದರೆ ವಾಸ್ತವ ಮಾತ್ರ ವಿಶ್ಲೇಷಕರು ಭಾವಿಸಿರುವುದಕ್ಕಿಂತ ಗಂಭೀರವಾಗಿದೆ. ಅತಿ ದೊಡ್ಡ ಆಹಾರ ಪೂರೈಕೆ ಕಂಪೆನಿಗಳ ಪೈಕಿ ಒಂದಾದ ಸ್ಮಿತ್‌ಫೀಲ್ಡ್‌ ಫ‌ುಡ್ಸ್‌ ಶಟ್‌ಡೌನ್‌ ಘೋಷಿಸಿದೆ. ಇದಕ್ಕೂ ಮೊದಲು ಹಲವು ಆಹಾರ ಕಂಪೆನಿಗಳು ಸ್ಮಿತ್‌ಫೀಲ್ಡ್‌ ಫ‌ುಡ್ಸ್‌ ಹಾದಿ ಹಿಡಿದಿದ್ದವು. ಬಹುತೇಕ ಕಂಪೆನಿಗಳು ನೌಕರರ ಮತ್ತು ಕಚ್ಚಾವಸ್ತುಗಳ ಕೊರತೆಯನ್ನು ಎದುರಿಸುತ್ತಿವೆ. ಸ್ಮಿತ್‌ಫೀಲ್ಡ್‌ ಫ‌ುಡ್ಸ್‌ ದೇಶದ ಶೇ.5 ಹಂದಿಮಾಂಸದ ಬೇಡಿಕೆಯನ್ನು ಪೂರೈಸುತ್ತಿತ್ತು.

Advertisement

ಚಿಲ್ಲರೆ ಅಂಗಡಿಗಳೂ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿವೆ. ಕಾರ್ಮಿಕರು ಕೋವಿಡ್‌-19 ನಿಂದ ಅಸ್ವಸ್ಥರಾಗಿರುವುದೇ ಇದಕ್ಕೆ ಕಾರಣ. ಹೀಗೆ ಪೂರೈಕೆ ಮತ್ತು ವಿತರಣೆ ಸರಪಣಿ ಕೋವಿಡ್‌-19 ಸಮಸ್ಯೆಗೆ ಸಿಲುಕಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಅಭಾವ ನಿಶ್ಚಿತ ಎನ್ನಲಾಗುತ್ತಿದೆ.

ಕೋವಿಡ್‌ ವ್ಯಾಪಕವಾಗುತ್ತಿದ್ದರೂ ಈ ಕಾರ್ಮಿಕರು ಅಸುರಕ್ಷಿತ ವಾತಾವರಣದಲ್ಲೇ ಕೆಲಸ ಮಾಡುತ್ತಿದ್ದರು. ಅವರಿಗೆ ಕನಿಷ್ಠ ಸರಿಯಾದ ಮಾಸ್ಕ್ಗಳನ್ನೂ ಒದಗಿಸಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next