Advertisement
ಚಿಕಿತ್ಸೆ:ಗರ್ಭಗೊರಳಿನ ಅರ್ಬುದ ಯಾವ ಹಂತದಲ್ಲಿದೆ ಎಂಬುದನ್ನು ನಿರ್ದಿಷ್ಟವಾಗಿ ಖಚಿತಪಡಿಸಿಕೊಂಡು ಯಾವ ಚಿಕಿತ್ಸೆಯನ್ನು ಕೊಡಬೇಕು ಎಂಬುದನ್ನು ತೀರ್ಮಾನಿಸಬೇಕಾಗುತ್ತದೆ.
1. ರೇಡಿಯೋಥೆರಪಿ ಅಥವಾ ವಿಕಿರಣ ಚಿಕಿತ್ಸೆ
2. ಶಸ್ತ್ರ ಚಿಕಿತ್ಸೆ
ವಿಕಿರಣ ಚಿಕಿತ್ಸೆ (Radiotherapy): ಗರ್ಭಗೊರಳಿನ ಅರ್ಬುದ ವಿಕಿರಣ ಚಿಕಿತ್ಸೆಗೆ ಬಹಳಷ್ಟು ಕರಗುತ್ತದೆ. ಹೀಗಾಗಿ ಇದೊಂದು ಉತ್ತಮ ಚಿಕಿತ್ಸಾ ವಿಧಾನವಾಗಿದೆ.ವಿಕಿರಣ ಚಿಕಿತ್ಸೆಯ ಜೊತೆ ವಾರಕ್ಕೊಮ್ಮೆ ಔಷಧಿ ಚಿಕಿತ್ಸೆಯನ್ನೂ ಸೇರಿಸುವುದರಿಂದ ಉತ್ತಮ ಫಲ ದೊರಕುತ್ತದೆ.
ಮೊದಲು ಕ್ಯಾನ್ಸರಿನ ಭಾಗ, ಅದರ ಹಬ್ಬಿರುವ ಹಂತದ ಭಾಗಗಳು ಎಲ್ಲವನ್ನೂ ವಿವಿಧ ಆಧುನಿಕ ಉಪಕರಣಗಳಿಂದ ಪತ್ತೆ ಮಾಡಲಾಗುತ್ತದೆ. ಹಂತ 1 ಮತ್ತು 2ನೆಯದ ಕ್ಕೆ ಶಾಸ್ತ್ರ ಚಿಕಿತ್ಸೆ ಮಾಡಿದ್ದಲ್ಲಿ ರೋಗವನ್ನು ಗುಣಪಡಿಸಬಹುದು. ಚಿಕಿತ್ಸೆಯ ನಂತರ, ಫಾಲೋಅಪ್ ತಪಾಸಣೆಗಳು ಬಹಳ ಮುಖ್ಯ. ಇದು ಕ್ಯಾನ್ಸರ್ ಮರುಕಳಿಸಿದಲ್ಲಿ ಬೇಗನೆ ಪತ್ತೆ ಹಚ್ಚಲು ಸಹಾಯವಾಗುತ್ತದೆ. ರೋಗಿಯನ್ನು ಸದಾ ಸಂತೋಷ ಚಿತ್ತದಲ್ಲಿ ಇರಿಸುವುದು ಬಹಳ ಮುಖ್ಯ. ನೋವಿದ್ದಾಗ, ನೋವು ಶಮನ ಮಾತ್ರೆಗಳನ್ನು ಕೊಡಬೇಕು. ಶಕ್ತಿಯುತ, ಸತ್ವಯುತ ಸಮತೋಲನ ಆಹಾರವನ್ನು ನೀಡಬೇಕು. ರೋಗಿಗೆ ತ್ರಾಸಿಗೆ ತಕ್ಕ ಚಿಕಿತ್ಸೆಯನ್ನು ಕೊಡಿಸುವಲ್ಲಿ ಸಂಬಂಧಿಕರು ಸಹಕರಿಸಬೇಕು. ನಿದ್ದೆ ಬಾರದಿದ್ದಾಗ ನಿದ್ರಾಜನಕಗಳನ್ನು ಕೊಡಿಸಬೇಕು. ಒಟ್ಟಿನಲ್ಲಿ ಕ್ಯಾನ್ಸರ್ ರೋಗಿ ಸದ್ಯ ಬದುಕನ್ನು ಸಾಗಿಸಲು ಮನೆಯವರು, ಸ್ನೇಹಿತರು, ಬೆಂಬಲ ನೀಡಬೇಕು. ಯಾವುದೇ ಕಾರಣಕ್ಕೂ ಸಹನೆಯನ್ನು ಕಳೆದುಕೊಳ್ಳದೇ ಸಂಯಮದಿಂದ ನಡೆದುಕೊಳ್ಳಬೇಕು. ರೋಗಿಯ ಖನ್ನತೆಗೆ ಒಳಗಾಗುವ ಸಾಧ್ಯತೆಗಳಿರುವುದರಿಂದ ಆಪ್ತ ಸಲಹೆ, ಸಮಾಧಾನ ಬಹಳ ಅಗತ್ಯ. ನೆನಪಿಡಿ: ಗರ್ಭಗೊರಳಿನ ಅಭುìದವನ್ನು ಪ್ರಾರಂಭದ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಸಂಪೂರ್ಣವಾಗಿ ಮಾರ್ಪಡಿಸಬಹುದು.
Related Articles
Advertisement
ಸಾಮಾನ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳೆಯರು ಪ್ರತಿವರ್ಷಕ್ಕೊಮ್ಮೆ ಸತತವಾಗಿ ಮೂರು ವರ್ಷಗಳ ವರೆಗೆ ಪಾಪ್ ಸ್ಮಿಯರ್ ಪರೀಕ್ಷೆಗೊಳಗಾದಲ್ಲಿ ತುಂಬಾ ಉಪಯುಕ್ತವಾಗುತ್ತದೆ. ಈ ಪರೀಕ್ಷೆಯಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಯಾವುದೇ ತೊಂದರೆ ಕಂಡು ಬರದಿದ್ದಲ್ಲಿ, ಆ ಬಳಿಕ ಪ್ರತಿಮೂರು ವರ್ಷಗಳಿಗೊಮ್ಮೆ ಈ ಪರೀಕ್ಷೆಗೆ ಒಳಗಾದರೆ ಸಾಕು. 60ವರ್ಷ ಕಳೆದ ನಂತರ ಪ್ರತಿ ಐದು ವರ್ಷಗಳಿಗೊಮ್ಮೆ ಪರೀಕ್ಷೆಗೊಳಗಾಗಬಹುದು. ಈ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಗರ್ಭಗೊರಳಿನ ಅಬುìದ ತಡೆಗಟ್ಟಬಹುದು. ಇತ್ತೀಚೆಗೆ ಪ್ರಚಲಿತವಾಗುತ್ತಿರುವ ಎಚ್.ಪಿ.ವಿ. ಪರೀಕ್ಷೆಗೊಳಗಾದಲ್ಲಿ , ಐದು ವರ್ಷಗಳಿಗೊಮ್ಮೆ ಆ ಪರೀಕ್ಷೆ ಮಾಡಿಸಿದರೆ ಸಾಕು.
ಮುಂಜಾಗ್ರತಾ ಕ್ರಮಗಳು:ಪ್ರಷಾಲನಾತಹಿ ಪಂಕಸ್ಯ ದೂರಾದ ಸ್ಪರ್ಶನಂ ವರಂ ಎಂಬುದು ಗರ್ಭಗೊರಳಿನ ಅಬುìದದಲ್ಲಂತೂ ನೂರಕ್ಕೆ ನೂರು ಸತ್ಯ. ಕ್ಯಾನ್ಸರ್ ಬಂದ ನಂತರ ಚಿಕಿತ್ಸೆ ಕೃಷ್ಣಕರ ಹಾಗೂ ದುಬಾರಿ ಈ ಕಾಯಿಲೆಯನ್ನು ತಡೆಗಟ್ಟಲು ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಅರಿತು ಆಚರಿಸುವುದು ಒಳ್ಳೆಯದು.
– ಹೆಚ್ಚಾಗಿ ಮಕ್ಕಳಿಗೆ 20 ವರ್ಷಗಳಾದ ನಂತರ ಮದುವೆ ಮಾಡುವುದು.
– ಅನೈತಿಕ ಲೈಂಗಿಕ ಸಂಪರ್ಕದಿಂದ ದೂರವಿರುವುದು.
– 30 ವರ್ಷಗಳಾದ ನಂತರವೇ ಗರ್ಭದರಿಸುವುದು. ಒಂದೋ ಎರಡೋ ಮಕ್ಕಳಿಗಿಂತ ಹೆಚ್ಚಾಗಿ ಹೆರದಿರುವುದು ಹಾಗೂ ಎರಡು ಮಕ್ಕಳ ನಡುವೆ ಕನಿಷ್ಟ ಮೂರು ವರ್ಷಗಳ ಅಂತರವಿರುವಂತೆ ನೋಡಿಕೊಳ್ಳುವುದು.
– ಪರಿಸರ ನೈರ್ಮಲ್ಯ, ದೈಹಿಕ ಶುಚಿತ್ವಕ್ಕೆ ಗಮನ ಕೊಡುವುದು. ಬಿಳಿ ಸೆರಗು, ಋತು ಸ್ರಾವದ ಏರುಪೇರುಗಳು ಕಂಡು ಬಂದೊಡನೆ ತಜ್ಞರ ಸಲಹೆ ಪಡೆಯುವುದು.
– ಗುಣ್ಯರೋಗ ಬಾರದೆ ಇರುವ ಹಾಗೆ ಲೈಂಗಿಕ ಜೀವನ ರತಿರೋಗ, ಉರಿಮೂತ್ರಗಳಿಗೆ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭದಲ್ಲಿಯೇ ಪಡೆಯುವುದು.
– ಹೆಣ್ಣು ಮಕ್ಕಳಿಗೆ 9ರಿಂದ 13 ವರ್ಷದೊಳಗೆ ಎರಡು ಡೋಜು ಎಚ್.ಐ.ವಿ. ಲಸಿಕೆಯನ್ನು ಕೊಡಿಸುವುದು.
– ಮಾನಸಿಕ ಒತ್ತಡ, ಆತಂಕ, ಉದ್ವೇಗಗಳಿಗೆ ಸೂಕ್ತ ಸಲಹೆ ನೀಡಿ ಪರಿಹಾರ ಸೂಚಿಸುವುದು.
– ಶೋಧನೆ ಪರೀಕ್ಷೆ (Screening test) ಗ ರ್ಭಗೊರಳಿನ ಕ್ಯಾನ್ಸರ್‌ನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಸ್ಕ್ರೀನಿಂಗ್ ಟೆಸ್ಟ್‌ಗಳಿಂದ ಸಾಧ್ಯ ಅಷ್ಟೇ ಅಲ್ಲ ಸಂಪೂರ್ಣವಾಗಿ ತಡೆಗಟ್ಟಬಹುದು.