Advertisement

ಸಂವಿಧಾನ ದುರ್ಬಳಕೆ ತಡೆಯಿರಿ: ಡಾ|ದೊಡ್ಮನಿ

12:39 PM Nov 27, 2021 | Team Udayavani |

ಜೇವರ್ಗಿ: ಬಹುಭಾಷಾ, ಬಹು ಧರ್ಮ, ಬಹು ಸಂಸ್ಕೃತಿಯುಳ್ಳ ಭಾರತದಲ್ಲಿ ರಕ್ತರಹಿತ ಕ್ರಾಂತಿ ತರುವ ಮಹೋನ್ನತ ಆದರ್ಶ ಹೊಂದಿದ ಶ್ರೇಷ್ಠ ಸಂವಿಧಾನದ ದುರ್ಬಳಕೆ ತಡೆದರೇ, ನಾವೆಲ್ಲ ಬಾಬಾ ಸಾಹೇಬ್‌ ಅಂಬೇಡ್ಕರ್‌ಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದು ಉಪನ್ಯಾಸಕ ಡಾ| ಅಶೋಕ ದೊಡ್ಮನಿ ಹೇಳಿದರು.

Advertisement

ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್‌ ಅಂಬೇಡ್ಕರ್‌ ದೇಶದ ಅಭಿವೃದ್ಧಿಗೆ ಹಾಗೂ ಇಲ್ಲಿನ ಜನರ ಬದುಕು ಚೆನ್ನಾಗಿರಲೆಂದು ಭಾರತದ ಸಂವಿಧಾನ ರಚಿಸಿದ್ದಾರೆ ಎಂದರು.

ಸಂವಿಧಾನವನ್ನು 26ನೇ ಜನವರಿ 1950ರಂದು ಭಾರತ ಒಪ್ಪಿಕೊಂಡಿತು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸಿಗಬೇಕೆಂದು ಅಂಬೇಡ್ಕರ್‌ ಉತ್ತಮ ಸಂವಿಧಾನ ರಚಿಸಿದ್ದಾರೆ. ಅಲ್ಲದೇ ದೇಶದ ಸಾಮಾಜಿಕ, ಆರ್ಥಿಕ, ಬಡತನ, ಅನಕ್ಷರತೆ, ಮೂಢನಂಬಿಕೆಗಳನ್ನು ಸರಿಪಡಿಸಲು ಅನೇಕ ಹೋರಾಟ ನಡೆಸಿದ್ದರು ಎಂದು ಹೇಳಿದರು.

ದಲಿತ ಮುಖಂಡರಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಪುಂಡಲೀಕ್‌ ಗಾಯಕ್ವಾಡ್‌, ಪ್ರಭಾಕರ ಸಾಗರ, ಬಸಣ್ಣ ಸರಕಾರ, ಸಿದ್ರಾಮ ಕಟ್ಟಿ, ಶ್ರೀಮಂತ ಧನಕರ್‌, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ದೇವಿಂದ್ರ ವರ್ಮಾ, ಶಿವಶರಣ ಮಾರಡಗಿ, ಬಾಗಣ್ಣ ಸಿದ್ನಾಳ, ಸಿದ್ಧು ಜನಿವಾರ, ಪಿರಪ್ಪ ರೆವನೂರ, ವಿಶ್ವರಾಧ್ಯ ಮಾಯೆ, ಮಹೇಶ ಕೊಕೀಲೆ, ಶರಣಪ್ಪ ಲಖಣಾಪುರ, ಸಂಗು ಹರನೂರ, ಮಿಲಿಂದ ಸಾಗರ, ಪ್ರಸನ್‌ಕುಮಾರ ಸಿಂಗೆ, ವಿಶಾಲ ಕುಲಾಲಿ, ಮೌನೇಶ ಹಂಗರಗಿ, ವಿಶ್ವ ಆಲೂರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next