Advertisement

ಮನಸೂರಲ್ಲಿ ಬಾಲ್ಯವಿವಾಹಕ್ಕೆ ತಡೆ

11:00 AM May 08, 2019 | Suhan S |

ಧಾರವಾಡ: ಮನಸೂರ ಗ್ರಾಮದ ಅಪ್ರಾಪ್ತ ವಯಸ್ಸಿನ ಯುವತಿಯೊಂದಿಗೆ ಮೇ 8 ರಂದು ನಿಗದಿಯಾಗಿದ್ದ ಬಾಲ್ಯವಿವಾಹ ತಡೆಯುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯಶಸ್ವಿಯಾಗಿದೆ.

Advertisement

ತಡಕೋಡ ಗ್ರಾಮದ ಕರೆಪ್ಪ ಮೇಲಿನಮನಿ ಅವರ ಮಗ ಬಸವರಾಜನಿಗೆ ಮನಸೂರಿನ ಅಪ್ರಾಪ್ತ ಯುವತಿಯೊಂದಿಗೆ ಮದುವೆ ಮಾಡಲು ಮೇ 8ರಂದು ನಿಶ್ಚಯ ಮಾಡಲಾಗಿತ್ತು. ಅದರಂತೆ ಎರಡೂ ಕುಟುಂಬದಲ್ಲಿ ಮದುವೆ ತಯಾರಿ ಕೂಡ ಜೋರಾಗಿಯೇ ನಡೆದಿತ್ತು. ಆದರೆ ವಧುವಿಗೆ ಇನ್ನೂ 18 ವರ್ಷ ತುಂಬಿಲ್ಲ ಎಂಬ ಮಾಹಿತಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಲುಪಿದ ಕೂಡಲೇ ಕಾರ್ಯ ಪ್ರವೃತ್ತರಾದ ಘಟಕದ ಅಧಿಕಾರಿಗಳು ಮನಸೂರಿಗೆ ತೆರಳಿದ್ದರು. ಅಲ್ಲಿ ವಧುವಿನ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಮದುವೆ ಆಗದಂತೆ ತಡೆದಿದ್ದಾರೆ. ಈ ವೇಳೆ ಮಗಳಿಗೆ ಮದುವೆ ಮಾಡಲ್ಲ ಎಂದು ಪೋಷಕರಿಂದ ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿರುವ ಘಟಕದ ಅಧಿಕಾರಿಗಳು, ಪೋಷಕರಿಗೆ ನೋಟಿಸ್‌ ನೀಡಿ ಮೇ 10ರಂದು ಮಧ್ಯಾಹ್ನ 3 ಗಂಟೆಯೊಳಗೆ ಮಗಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗುವಂತೆ ಸೂಚಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಘಟಕದ ಸಿಬ್ಬಂದಿಗಳಾದ ಮಹ್ಮದಲಿ ತಹಶೀಲ್ದಾರ, ವಿಶಾಲಾ ಕಾನಪೇಟ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ರೇಣುಕಾ ಸುಂಡಿ, ಅಂಗನವಾಡಿ ಕಾರ್ಯಕರ್ತೆ ಮಮತಾ ಮಲ್ಲಿಕಾರ್ಜುನ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next