Advertisement

ಮತ್ತೊಂದು ವಿಭಜನೆ ತಡೆಯಿರಿ: ರಾಮ್‌ ಮಾಧವ್‌

10:40 PM Dec 18, 2022 | Team Udayavani |

ಮೈಸೂರು: 1947ರ ಭಾರತ – ಪಾಕಿಸ್ಥಾನ ವಿಭಜನೆಯು ಭೂಮಿಗೆ ಸಂಬಂಧಿಸಿದ್ದಲ್ಲ. ಅದು  ಹೃದಯದ ವಿಭಜನೆಯಾಗಿದೆ. ಇದರಿಂದ ನಾವೆಲ್ಲರೂ ಪಾಠ ಕಲಿತು ದೇಶದ ಮತ್ತೊಂದು ವಿಭಜನೆಯನ್ನು ತಡೆಯಲು ಮುಂದಾಗಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಆರೆಸ್ಸೆಸ್‌ ಕಾರ್ಯಾಧ್ಯಕ್ಷ ರಾಮ್‌ ಮಾಧವ್‌ ಹೇಳಿದರು.

Advertisement

ತಾನು ಬರೆದಿದ್ದ ಪಾರ್ಟಿಶಿಯನ್‌x ಫ್ರೀಡಂ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಥನ ಮೈಸೂರು ವೈಚಾರಿಕ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಖಂಡ ಭಾರತ ನಿರ್ಮಾಣಕ್ಕಾಗಿ 130 ಕೋಟಿ ಜನರ ಹೃದಯಗಳು ಒಗ್ಗೂಡಬೇಕು. ನಮ್ಮೆಲ್ಲರ ಮನಸ್ಸುಗಳು ಒಗ್ಗೂಡಿದರೆ, ನಾವು ಕಳೆದುಕೊಂಡಿರುವ ಪ್ರದೇಶಗಳು ತಾವಾಗಿಯೇ ಅಖಂಡ ಭಾರತದ ವ್ಯಾಪ್ತಿಗೆ ಬರುತ್ತವೆ ಎಂದರು.

ಇತಿಹಾಸದಿಂದ ಪಾಠ ಕಲಿಯಬೇಕು
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವಿದ್ದೇವೆ. ಇಲ್ಲಿ ನಿಂತು, ಹಿಂದಿನ ಕಾಲಘಟ್ಟದಲ್ಲಿ ಏನು ನಡೆಯಿತು, ಏನಾಯಿತು ಎನ್ನುವುದೇ ಇತಿಹಾಸ. ಬರೆದವರ ಭಾವಕ್ಕೂ ಸೇರುವಂಥದ್ದು. ಅವರು ಅರ್ಥ ಮಾಡಿಕೊಂಡಿದ್ದನ್ನು ಬರೆದಿರಬಹುದು. ನಾವು ಆ ಕಾಲದಲ್ಲಿ ಇರಲಿಲ್ಲವಾದ್ದರಿಂದ, ನೋಡಿಲ್ಲವಾದ್ದರಿಂದ ಯಾರನ್ನೂ ಟೀಕಿಸುವುದರಿಂದ ಪ್ರಯೋಜನವಿಲ್ಲ. ಆದರೆ, ಆ ಇತಿಹಾಸದಿಂದ ಪಾಠವನ್ನು ಕಲಿಯಬೇಕಾಗುತ್ತದೆ ಎಂದು ಹೇಳಿದರು.

Advertisement

ಬ್ರಿಟಿಷರು ಧಾರ್ಮಿಕ ತಳಹದಿಯಲ್ಲಿ ಹಿಂದೂ- ಮುಸ್ಲಿಮರನ್ನು ವಿಭಜಿಸಿದ್ದರು. ಆದರೆ, ಈಗಲೂ ನಾವು ಬೇರೆ ಬೇರೆಯಾಗಿರುವುದು ಸರಿಯಲ್ಲ. ದೇಶದಲ್ಲಿರುವ ಎಲ್ಲರೂ ಒಗ್ಗೂಡಬೇಕು. ಐಕ್ಯತೆ ಕಾಪಾಡಿಕೊಳ್ಳಬೇಕು. ದೇಶವು ಒಗ್ಗೂಡುವುದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಾಗಬೇಕು. ಇದನ್ನು ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಮಾಡಲಾಗದು. ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಹೃದಯ  ಒಡೆಯುವುದನ್ನೂ ನಿಲ್ಲಿಸಬೇಕು
ಹಿಂದೂಗಳಲ್ಲೂ ಕೆಲವರು ನಾವೆಲ್ಲರೂ ಒಟ್ಟಿಗೆ ಬದುಕಲಾಗುವುದಿಲ್ಲ ಎಂದು ಭಾವಿಸಿದ್ದಾರೆ. ಇದು ದೂರಾಗಬೇಕು. ಹೃದಯಗಳನ್ನು ಒಡೆಯುವುದನ್ನೂ ನಿಲ್ಲಿಸಬೇಕು. ಅಂತಹ ಕೆಲಸ ಮಾಡುವ ಶಕ್ತಿಗಳನ್ನು ಧಿಕ್ಕರಿಸಬೇಕು. ಮನಸ್ಸುಮನಸ್ಸುಗಳ ನಡುವೆ ಸೇತುವೆ ನಿರ್ಮಿಸಬೇಕು. ಆಗ, ಆಕ್ರಮಿಸಿಕೊಂಡಿರುವ ಜಾಗಗಳೂ ನಮ್ಮದಾಗುತ್ತವೆ ಎಂದರು.

ದೇಶವು ವಿಭಜನೆಯಾಗಿದ್ದೇಕೆ ಎನ್ನುವುದನ್ನು ಈ ಪುಸ್ತಕದಲ್ಲಿ ಬರೆದಿದ್ದೇನೆ. ವಿಭಜನೆಗೆ ಮಹಾತ್ಮ ಗಾಂಧೀಜಿ ವಿರೋಧವಿತ್ತು. ಅಖಂಡ ಭಾರತ ಇರಬೇಕು ಎನ್ನುವುದು ಅವರ ಉದ್ದೇಶವಾಗಿತ್ತು ಎಂದು ಹೇಳಿದರು.

ಪತ್ರಿಕೋದ್ಯಮಿ ಕೆ.ಬಿ.ಗಣಪತಿ,  ಮಂಥನ ಮೈಸೂರು ಸಂಚಾಲಕ ವಿಶ್ವನಾಥ್‌ ಮೊದಲಾದವರು ಉಪಸ್ಥಿತರಿದ್ದರು.

ಇನ್ನೊಂದು ಪಾಕ್‌‌ ಸೃಷ್ಟಿಗೆ ಯತ್ನ
ಮೈಸೂರು: ನರಸಿಂಹರಾಜ ಕ್ಷೇತ್ರದಲ್ಲಿ ನರಸಿಂಹರಾಜ ಹೋಗಿದ್ದಾನೆ. ಟಿಪ್ಪು ರಾಜನಾಗಿದ್ದಾನೆ. ಮತ್ತೊಂದು ಪಾಕಿಸ್ಥಾನ ಸೃಷ್ಟಿಸುವ ಕೆಲಸ ಇಲ್ಲಿ ನಡೆಯುತ್ತಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದರು.

ನಗರದ ಬನ್ನಿಮಂಟಪ ಮೈದಾನದಲ್ಲಿ ರವಿ ವಾರ ನಡೆದ ಮೈಸೂರು ನಗರದ ಆರೆಸ್ಸೆಸ್‌ ಶಾಖೆಗಳ ಏಕತ್ರಿಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದೇಶ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿದ್ದು, ಮತ್ತೊಂದು ಪಾಕಿಸ್ಥಾನ ಸೃಷ್ಟಿಗೆ ಯತ್ನ ನಡೆಯುತ್ತಿದೆ ಎಂದರು.

ದೇವಸ್ಥಾನಗಳನ್ನು ನಾಶ ಮಾಡಿದ, ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಹಿಂದೂ ವಿರೋಧಿ ಟಿಪ್ಪುವನ್ನು ಹುಲಿ ಎಂದು ಕರೆಯುತ್ತಿದ್ದಾರೆ. ಜತೆಗೆ ಆತನನ್ನು ರಾಜನನ್ನಾಗಿ ಮಾಡಲು ಹೊರಟಿ¨ªಾರೆ. ಇದು ನರಸಿಂಹರಾಜ ಕ್ಷೇತ್ರಕ್ಕೆ ಸೀಮಿತವಲ್ಲ. ಇದೊಂದು ಚಿಂತನೆಯಾಗಿದ್ದು, ಇಡೀ ದೇಶದಲ್ಲಿಯೇ ಕೆಲಸ ಮಾಡುತ್ತಿದೆ. ಈ ಬಗ್ಗೆ ನಾವೆಲ್ಲ ಜಾಗರೂಕರಾಗಬೇಕು ಎಂದು ಹೇಳಿದರು.

ಹಿಂದೂ ಸಮಾಜ ಎಲ್ಲರನ್ನೂ ಗೌರವಿಸುತ್ತದೆ. ಜಗತ್ತು ಉಳಿಯಬೇಕೆಂದರೆ ಭಾರತ ಉಳಿಯ ಬೇಕು. ಭಾರತ ಉಳಿಯಬೇಕೆಂದರೆ ಹಿಂದೂ ಉಳಿಯಬೇಕು. ಹಿಂದೂಗಳನ್ನು ಉಳಿಸುವ ಕಾರ್ಯವನ್ನು ಆರೆಸ್ಸೆಸ್‌ ಮಾಡುತ್ತಿದೆ  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next