Advertisement

ಪ್ರತಿಷ್ಠಿತ ಪಕ್ಷಗಳು ಕಣದಲ್ಲಿ: ಇಂದಿನಿಂದ ನಾಮಪತ್ರ ಸಲ್ಲಿಕೆ 

09:57 AM Aug 10, 2018 | Team Udayavani |

ಉಳ್ಳಾಲ: ಕಾಂಗ್ರೆಸ್‌ ಭದ್ರ ಕೋಟೆಯಾಗಿರುವ ಉಳ್ಳಾಲದಲ್ಲಿ ಚುನಾವಣಾ ಕಣ ರಂಗೇರಿದ್ದು, ಆ. 29ರಂದು ನಡೆಯಲಿರುವ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆಯಾಗಲಿದ್ದು ಪ್ರತಿಷ್ಠಿತ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಜಾತ್ಯತೀತ ಜನತಾ ದಳ ಮತ್ತು ಸಿಪಿಐಎಂ ಪಕ್ಷಗಳು ಕಣಕ್ಕಿಳಿಯಲಿವೆ.

Advertisement

ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿರುವ ಉಳ್ಳಾಲ ನಗರಸಭೆಯ ಪ್ರಥಮ ಚುನಾವಣೆ ಇದಾಗಲಿದ್ದು, 31 ಸ್ಥಾನಗಳಲ್ಲಿ 15 ಪುರುಷರಿಗೆ ಮತ್ತು 16 ಮಹಿಳಾ ಸದಸ್ಯರಿಗೆ ಅವಕಾಶ ಇದ್ದು, 10 ಸಾಮಾನ್ಯ, 9 ಸಾಮಾನ್ಯ ಮಹಿಳೆ 1ಹಿಂದುಳಿದ ವರ್ಗ (ಬಿ,) ಮಹಿಳೆ, 1 ಹಿಂದುಳಿ¨ವರ್ಗ(ಬಿ,), 4 ಹಿಂದುಳಿದ ವರ್ಗ (ಎ.), 4 ಹಿಂದುಳಿದ ವರ್ಗ (ಎ.)ಮಹಿಳೆ , 1 ಪರಿಶಿಷ್ಟ ಪಂಗಡ, 1 ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಲಾಗಿದೆ.

ಈ ಹಿಂದಿನ ಉಳ್ಳಾಲ ಪುರಸಭೆಯಲ್ಲಿದ್ದ 27 ಕ್ಷೇತ್ರಗಳಲ್ಲಿ 17 ಕಾಂಗ್ರೆಸ್‌ 7 ಬಿಜೆಪಿ, 1 ಎಸ್‌ಡಿಪಿಐ ಮತ್ತು ಇಬ್ಬರು ಪಕ್ಷೇತರ ಸದಸ್ಯರಿದ್ದರು. ಈಗ 31 ಸ್ಥಾನಗಳಿಗೆ ನಡೆ ಯಲಿರುವ ಚುನಾವಣೆಗೆ ಆ. 10ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಆ. 17 ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕವಾಗಲಿದೆ. ಆ. 18ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಆ. 20ರಂದು ನಾಮಪತ್ರ ಹಿಂತೆಗೆದು ಕೊಳ್ಳಲು ಅವಕಾಶವಿದೆ. ಆ. 29ರಂದು ಚುನಾವಣೆ ಮತ್ತು ಆ. 1ರಂದು ಮತ ಎಣಿಕೆ ನಡೆಯಲಿದೆ.

ಅಲ್ಪಸಂಖ್ಯಾಕ ಪ್ರಾಬಲ್ಯ ಕ್ಷೇತ್ರ 
ಉಳ್ಳಾಲ ನಗರಸಭೆಯಲ್ಲಿ ಅಲ್ಪ ಸಂಖ್ಯಾಕ ಪ್ರಾಬಲ್ಯವಿದ್ದು, ಒಟ್ಟು 44,273 ಮತದಾರರಲ್ಲಿ 16,079 ಹಿಂದೂ ಮತದಾರರಿದ್ದು, 28, 194 ಅಲ್ಪಸಂಖ್ಯಾಕ ಮತದಾರರಿದ್ದಾರೆ. 31 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾಕ ಮತದಾರರು ಪ್ರಾಬಲ್ಯ ಹೊಂದಿದ್ದರೆ, 9 ಕ್ಷೇತ್ರಗಳಲ್ಲಿ ಹಿಂದೂ ಮತದಾರರ ಪ್ರಾಬಲ್ಯ ಇದೆ.

Advertisement

Udayavani is now on Telegram. Click here to join our channel and stay updated with the latest news.

Next