Advertisement

ಪ್ರತಿಷ್ಠಿತ ಭವಾನಿ ಫೌಂಡೇಶನ್‌ ಮುಂಬಯಿ ವತಿಯಿಂದ ರಕ್ತದಾನ ಶಿಬಿರ

04:31 PM Jan 20, 2019 | |

ನವಿಮುಂಬಯಿ: ಆರೋಗ್ಯ ಮತ್ತು ವಿದ್ಯೆಗೆ ನಾವು ಮೊದಲ ಆದ್ಯತೆಯನ್ನು ನೀಡಬೇಕು. ಇದು ಪ್ರತಿಯೊಬ್ಬನಿಗೂ ಅಗತ್ಯವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಜಾತಿ, ಮತ, ಧರ್ಮವನ್ನು ಮರೆತು ಸೇವೆ ಸಲ್ಲಿಸುತ್ತಿರುವ ಭವಾನಿ ಫೌಂಡೇಷನ್‌ ನಿರ್ಗತಿಕರ ಪಾಲಿನ ಬೆಳಕಾಗಿದೆ. ಉದ್ಯಮಿ, ಸಮಾಜ ಸೇವಕ ಕೆ. ಡಿ. ಶೆಟ್ಟಿ ಅವರು ತಮ್ಮ ತಾಯಿಯ ಹೆಸರಿನಲ್ಲಿ ಮಾಡುತ್ತಿರುವ ಸಮಾಜ ಸೇವೆಯನ್ನು ಕಂಡು ಸಂತೋಷವಾಗುತ್ತಿದೆ. ತಾಯ್ನಾಡಿನಂತೆ ಮರಾಠಿ ಮಣ್ಣಿನ ಮೇಲೂ ಅಗಾಧ ಪ್ರೀತಿ, ಗೌರವವನ್ನು ಹೊಂದಿರುವ ಕೆ. ಡಿ. ಶೆಟ್ಟಿ ಅವರು ತಮ್ಮ ಫೌಂಡೇಷನ್‌ ಮೂಲಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ನವಿಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತ ಡಾ| ಎನ್‌. ರಾಮಸ್ವಾಮಿ ಅವರು ನುಡಿದರು.

Advertisement

ಜ. 19 ರಂದು ಸಿಬಿಡಿ ಬೇಲಾಪುರದ ಸೆಕ್ಟರ್‌-15ರ ವಿ ಟೈಮ್ಸ್‌ ಸ್ಕೆ Ìàರ್‌ ಕಟ್ಟಡದಲ್ಲಿರುವ ಭವಾನಿ ಫೌಂಡೇಶ‌ನ್‌ನ ಕಾರ್ಯಾಲಯದಲ್ಲಿ ನಡೆದ ಭವಾನಿ ಫೌಂಡೇಷನ್‌ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಭವಾನಿ ಫೌಂಡೇಷನ್‌ ಸಂಸ್ಥೆಯು ಮಾಡುತ್ತಿರುವ ಕಾರ್ಯಗಳು ಇತರ ಸಾಮಾಜಿಕ ಸಂಸ್ಥೆಗಳಿಗೆ ಮಾದರಿಯಾಗಿದ್ದು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಮಾತ್ರ ಸಂಸ್ಥೆಗೆ ನಿಜವಾದ ಅರ್ಥ ಬರುತ್ತದೆ.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಸಕಾಲ್‌ ಪತ್ರಿಕೆ ಮುಖ್ಯ ಸಂಪಾದಕ ರಾಹುಲ್‌ ಗಡಾ³ಲೆ ಅವರು ಮಾತನಾಡಿ, ರಕ್ತದಾನ ಶಿಬಿರವನ್ನು ಆಯೋಜಿಸಿ ಭವಾನಿ ಫೌಂಡೇಷನ್‌ ಉತ್ತಮ ಸೇವೆಯನ್ನು ಮಾಡಿದೆ ಎನ್ನಲು ಹೆಮ್ಮೆಯಾಗುತ್ತದೆ. ನಾವು ರಕ್ತದಾನ ಮಾಡಿದಾಗ ಒಂದು ಜೀವವನ್ನು ಉಳಿಸಿದ ಸಂತೃಪ್ತಿ ನಮಗೆ ದೊರೆಯುತ್ತದೆ. ಇಂತಹ ಕಾರ್ಯಗಳನ್ನು ಆದಷ್ಟು ನಾವು ಹೆಚ್ಚು ಹೆಚ್ಚು ಆಯೋಜಿಸಬೇಕಾಗಿದೆ ಎಂದರು.

ಭವಾನಿ ಫೌಂಡೇಷನ್‌ನ ಜೀಕ್ಷಿತ್‌ ಕೆ. ಶೆಟ್ಟಿ ಅವರು ಭವಾನಿ ಫೌಂಡೇಷನ್‌ನ ಸಮಾಜಪರ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಸಂಸ್ಥೆಗಾಗಿ ದುಡಿಯುವ ಕಾರ್ಯಕರ್ತರನ್ನು ಅಭಿನಂದಿಸಿ ಭವಿಷ್ಯದಲ್ಲೂ ಇದೇ ರೀತಿಯ ಸಹಕಾರ ಸದಾಯಿರಲಿ ಎಂದು ನುಡಿದರು.

ಸಮಿತಿಯ ಸದಸ್ಯರಾದ ದಿನೇಶ್‌ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭವಾನಿ ಫೌಂಡೇಷನ್‌ನ ಸಿದ್ಧಿ-ಸಾಧನೆಗಳನ್ನು  ವಿವರಿಸಿದರು. ವೇದಿಕೆಯಲ್ಲಿ ಟಾಟಾ ಮೆಮೋರಿಯಲ್‌ ಆಸ್ಪತ್ರೆಯ ಡಾ| ಗೌರವ್‌ ಮತ್ತು ಡಾ| ಪ್ರಣಿತಾ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಜತೆ ಕೋಶಾಧಿಕಾರಿ ಚೈತಾಲಿ ಸುಧಾಕರ ಪೂಜಾರಿ ಇವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರೇರಣಾ ಗೌರವ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರೀತಿ ಕೋಲಿ ವಂದಿಸಿದರು. ನೀತಾ ಶೆಟ್ಟಿ, ಅಮಿತಾ ಆಚಾರ್ಯ ಸಹಕರಿಸಿದರು.

Advertisement

ಪ್ರಾರಂಭದಲ್ಲಿ ಅತಿಥಿ-ಗಣ್ಯರು  ದೀಪಪ್ರಜ್ವಲಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಭವಾನಿ ಫೌಂಡೇಷನ್‌ನ ವಿಶ್ವಸ್ಥರುಗಳಾದ ಸರಿತಾ ಕೆ. ಶೆಟ್ಟಿ, ಅಂಕಿತಾ ಜೆ. ಶೆಟ್ಟಿ ಹಾಗೂ ಸಮಿತಿಯ ಸದಸ್ಯರುಗಳಾದ ಪ್ರಕಾಶ್‌ ಶೆಟ್ಟಿ, ಕರ್ನೂರು ಮೋಹನ್‌ ರೈ, ರೋನ್ಸ್‌ ಬಂಟ್ವಾಳ್‌, ನವೀನ್‌ಚಂದ್ರ ಸನಿಲ್‌ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಶಿಬಿರದಲ್ಲಿ ಸಂಸ್ಥೆಯ ಜತೆ ಕೋಶಾಧಿಕಾರಿ ನವೀನ್‌ ಶೆಟ್ಟಿ, ಜತೆ ಕಾರ್ಯದರ್ಶಿ ಸೀಮಾ ಪವಾರ್‌, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ಸಿಬ್ಬಂದಿಗಳು, ಭವಾನಿ ಫೌಂಡೇಷನ್‌ ಇದರ ಕಾರ್ಯಕರ್ತರು, ಪರಿಸರದ ತುಳು-ಕನ್ನಡಿಗ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನೂರಾರು ಮಂದಿ ರಕ್ತದಾನಗೈದರು. 

 ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸಿ ಸುಮಾರು 250 ಕ್ಕಿಂತಲೂ ಅಧಿಕ ಯುನಿಟ್‌ ರಕ್ತವನ್ನು ಸಂಗ್ರಹಿಸಿ ನೀಡುತ್ತಿದ್ದು, ಇದು ಭವಾನಿ ಫೌಂಡೇಷನ್‌ನ ಉದ್ದೇಶವನ್ನು ನೆರವೇರಿಸಿದಂತಾಗಿದೆ. ಟಾಟಾ ಮೆಮೋರಿಯಲ್‌ ಆಸ್ಪತ್ರೆಯ ಸಿಬಂದಿಗಳ ಉಪಸ್ಥಿತಿಯಲ್ಲಿ ಜರಗುವ ಈ ರಕ್ತದಾನ ಶಿಬಿರದಲ್ಲಿ ಸಂಸ್ಥೆಯ ಕಾರ್ಯ ಕರ್ತರು, ತುಳು-ಕನ್ನಡಿಗರು ರಕ್ತದಾ ನಗೈಯುತ್ತಿರುವುದು ಸಂತೋಷದ ಸಂಗತಿ ಯಾಗಿದೆ. ಭವಾನಿ ಫೌಂಡೇಷನ್‌ ಆರೋ ಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸದಾ ಸಕ್ರಿಯ ವಾಗಿದ್ದು, ಹಿಂದುಳಿದವರನ್ನು ಮುಂದೆ ತರುವುದು ಸಂಸ್ಥೆಯ ಮುಖ್ಯ ಉದ್ದೇಶ.
  – ಕೆ. ಡಿ. ಶೆಟ್ಟಿ , ಸಂಸ್ಥಾಪಕಾಧ್ಯಕ್ಷರು,ಭವಾನಿ ಫೌಂಡೇಷನ್‌ ಮುಂಬಯಿ

ಚಿತ್ರ-ವರದಿ: ಸುಭಾಶ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next