Advertisement

ಪ್ರತಿಷ್ಠೆ

07:30 AM Mar 11, 2018 | Team Udayavani |

ದುಡಿಯೋರಿಗೆ ಹಳ್ಳಿಯಲ್ದೇ ಮತ್ತಿನ್ನೇನು ದಿಲ್ಲೀನೇ ಆಗ್ಬೇಕಾ? ಈ ಸಾಲೀಗೋಗೋ ಮಕ್ಳನ್ನು ಕಟ್ಕೊಂಡು ಅದೆಲ್ಲಿಗೋಯ್ತಿರಾ?” ಅಂತ ಅತ್ತೆ ಕೇಳಿದ್ರೆ, ಸೊಸೆಯದ್ದು ಒಂದೇ ಮಾತು, “”ಏನತ್ತೀ, ಮಳೀ ಇಲ್ಲಾ ಬೆಳೀ ಇಲ್ಲಾ. ಪ್ಯಾಟಿಗೋದ್ರೆ ಏನಾರೂ ದುಡ್ಕೊಂಡು ತಿನ್ನೋದು. ಅದ್ಕೆ ಅಲ್ವಾ ಅಳ್ಳಿ ಉಡುಗ್ರೆಲ್ಲ ಪ್ಯಾಟಿಗೋಗೋದು. ಬರಿ¤àವತ್ತೀ, ಮನೀಕಡೆ ಜೋಪಾನ” ಎನ್ನುತ್ತ ಮಕ್ಕಳಿಬ್ಬರನ್ನು ಹೊರಡಿಸಿ ದಾನಮ್ಮ ಮತ್ತವಳ ಗಂಡ ಕಾಂತು ಗಂಟುಮೂಟೆ ಕಟ್ಟಿ ಹೊರಟೇ ಬಿಟ್ರಾ.

Advertisement

ಕಾಂತುಗಿಂತಲೂ ಮೊದಲು ಪೇಟೆ ಸೇರಿದ್ದ ಶಿವಪ್ಪ ಊರಿಗೆ ಬಂದಿದ್ದಾಗ ಕಾಂತೂವಿಗೆ, “”ನೀನೂ ಬಂದುಬಿಡು ಕಾಂತೂ. ಏನಾರೂ ಕೆಲಸ ಸಿಕ್ಕಿಯೇ ಸಿಗತ್ತೆ” ಎಂದು ಪುಸಲಾಯಿಸಿದ್ದ. ಗಂಡಹೆಂಡತಿ ಇಬ್ಬರೂ ನಿರಕ್ಷರ ಕುಕ್ಷಿಗಳು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬುದಂತೂ ಇಬ್ಬರ ತಲೆಯಲ್ಲೂ ಕೂತಿತ್ತು. 

“”ಅದು ಹೊಸಾ ಅಪಾರ್ಟ್‌ಮೆಂಟು. ನಿಮ್ಮನ್ನು ಕರೆಸ್ತೀನೀಂತ ಮೇನೇಜರಿಗೆ ಹೇಳಿದ್ದೆ. ನೀವಿಬ್ರೂ ಒಮ್ಮೆ ನೋಡ್ಕೊಂಡು ಬನ್ನಿ. ಅದ್ರಲ್ಲೇ ಕೆಳಗಡೆ ಒಂದು ಕೋಣೆಯ ಮನೆಯಿದೆ. ಅಲ್ಲೇ ಇರೊದು” ಎಂದ ಶಿವಪ್ಪ. 

“”ಇಷ್ಟಗಿಷ್ಟ ಏನºಂತು ಶಿವಪ್ಪಾ? ನಾವಲ್ಲಿಗೇ ಹೋಗ್ತಿವಿ. ನೀ ಬಂದು ಒಮ್ಮೆ ಪರಿಚಯ ಮಾಡಿಸ್ಕೊಟ್ರೆ ಸಾಕು” ಎಂದಳು ದಾನಮ್ಮ. “”ಹೌದೌದು” ಎಂದ ಕಾಂತು.

ಶಿವಪ್ಪಮ್ಯಾನೇಜರಿಗೆ ಅವರಿಬ್ಬರನ್ನು ಪರಿಚಯ ಮಾಡಿಸಿಕೊಟ್ಟ. “”ಇಲ್ಲೇ ಇರಿ. ಸಂಜೆಗೆ ಅಧ್ಯಕ್ಷರು ಬಂದ ಮೇಲೆ ನಿಮೊjjತೆ ಮಾತಾಡ್ತಾರೆ. ಎಲ್ಲ ಸರಿಸರಿ ಆದ್ರೆ ನಾಳೀಂದ ಇಡೀ ಬಿಲ್ಡಿಂಗ್‌ ಗುಡಿÕà ಸಾರಿÕ ಚೊಕ್ಕ ಮಾಡ್ಬೇಕು. ಕೆಲಸ ಮಾತ್ರ ಒಬಿ°ಗೇ. ಹೆಂಗಸ್ರು ಎಲ್ಲಾದ್ರೂ ಮನೆಕೆಲ್ಸ ಹುಡುಕ್ಕೋಬೇಕು. ಗೊತ್ತಾಯ್ತಾ?” ಎಂದ ಮ್ಯಾನೇಜರ್‌.

Advertisement

ಇಬ್ಬರೂ ಒಮ್ಮೆ ಕೆಳಗಿನಿಂದ ಮೇಲಿನ ತನಕ ಹೋಗಿ ಬಂದರು. ಮಕ್ಕಳಿಬ್ಬರೂ ಅಲ್ಲೇ ಇದ್ದ ಪಾರ್ಕಿನತ್ತ ಓಡಿದರು. ನೆಲ ಸೇರಿ ನಾಲ್ಕು ಫ್ಲೋರ್‌ ಅದಾಗಲೇ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಿಟ್ಟುಹೋಗಿದ್ದರು. ನಾಲ್ಕೂ ನೆಲೆಯನ್ನು ಗುಡಿಸಿ ಸಾರಿಸಿ, ಕಸ ಎತ್ತಿ, ಗಿಡಗಳಿಗೆ ನೀರು ಹಾಕಿ, ಮಕ್ಕಳು ಆಡುವ ಪಾರ್ಕನ್ನು ಸ್ವತ್ಛಮಾಡಿ ಮುಗಿಸಬೇಕಿದ್ದರೆ ಯಾರದ್ದಾದರೂ ಸರಿಯೆ; ಸೊಂಟ ಬೀಳುವಂತಿತ್ತು. ಆದರೆ, ಕಾಂತು ಅಸಾಧ್ಯ ಕೆಲಸಗಾರ. ನಿತ್ಯವೂ ಹೊಲದಲ್ಲಿ ಹೆಣಗುತ್ತಿದ್ದ ಆತ ಹುಟ್ಟಿದ್ದೇ ಕೆಲಸ ಮಾಡೋದಕ್ಕೆ ಎಂಬಂತಿದ್ದ.

ಸರಿ, ಮರುದಿನ ಕೆಲಸ ಪ್ರಾರಂಭವಾಯಿತು. “ಇದು ಕೈಲಾಸಂ ನಾಟಕದ ಗಟ್ಟಿ ಪಾತ್ರ’ ಎಂದು ಅಂತೇವಾಸಿಗಳು ಮಾತನಾಡಿಕೊಳ್ಳುತ್ತಿದ್ದರು. ಭಾನುವಾರ ಕೂಡ ಕೆಲಸ. ಬೆಳಗ್ಗೆ ಮಕ್ಕಳಿಬ್ಬರನ್ನು ಪಕ್ಕದ ಸರಕಾರಿ ಶಾಲೆಗೆ ಬಿಡುವುದು, ಸಂಜೆಗೊಮ್ಮೆ ಕರೆತರುವುದು. ಅದಷ್ಟೇ ಆತ ಅಪಾರ್ಟ್‌ಮೆಂಟಿನಿಂದ ಹೊರಬೀಳುತ್ತಿದ್ದ ಸಮಯ. ಅಪರೂಪಕ್ಕೊಮ್ಮೆ ಊರಿಗೆ ಹೋಗುವಾಗ ಮಾತ್ರ ಎರಡು ದಿನ ರಜೆ ಹೇಳಿಹೋಗುತ್ತಿದ್ದವನು ಬರುವಾಗ ಮೂರು ದಿನಗಳಾಗಿಬಿಡುತ್ತಿತ್ತು. ಯಾಕೋ ಮೂರು ದಿನ ಮಾಡಿದ್ಯಾ ಅಂತೇನಾದರೂ ಕೇಳಿದರೆ ಆತ ಹೆಂಡತಿಯ ಮುಖ ನೋಡುತ್ತಿದ್ದ.

ಕಾಂತೂ ತುಸು ಪೆದ್ದ. ಅವನ ಪೆದ್ದುತನ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಎಲ್ಲರಲ್ಲಿಯೂ ಏನಾದರೂ ಮಾತನಾಡಿಸುತ್ತಿದ್ದ. ಮ್ಯಾನೇಜರ್‌ ಮೇಜಿನಲ್ಲಿ ಕರೆಂಟ್‌ ಬಿಲ್ಲು ಬಂದು ಕುಳಿತಿದೆ ಅನ್ನುವುದು ಗೊತ್ತಾದರೆ ಕಂಡ ಅಂತೇವಾಸಿಗಳಿಗೆಲ್ಲ, “”ಸಾರ್‌, ಕರೆಂಟು ಬಿಲ್ಲು ಬಂದಿದೆ” ಎನ್ನುತ್ತಿದ್ದ. “”ಎಲ್ಲೋ?” ಅಂತ ಯಾರಾದರೂ ಕೇಳಿದರೆ, “”ಮೇನೇಜರ್‌ ಹತ್ರ ಇದೆ ಸಾರ್‌” ಎನ್ನುತ್ತಿದ್ದ. “”ಅದನ್ನು ನೀನ್ಯಾಕೋ ಕೂಗಿ ಹೇಳ್ತಿಯಾ?” ಅಂದರೆ, “”ಸುಮ್ನೆ ಸಾರ್‌” ಅನ್ನುತ್ತಿದ್ದ.

ಅಂತೇವಾಸಿಯೊಬ್ಬರು ಏರ್‌ಪೋರ್ಟಿನಿಂದ ಕಾರಿನಲ್ಲಿ ಬಂದು ಗೇಟಿನೆದುರು ಇಳಿದಾಗ ಕಾಂತೂ ಎಲ್ಲಿದ್ದನೋ ಏನೋ, ಓಡಿ ಬಂದು, “”ಸಾರ್‌, ವಿಮಾನದಲ್ಲಿ ಬಂದ್ರಾ ಸಾರ್‌?”  
ಅವರು, “”ಹೌದೋ” ಎಂದರು.
ಇವ, “”ಸಾರ್‌, ಮೇಲಿಂದ ಹೋಗುವಾಗ ಭಯ ಆಗೋದಿಲ್ವೆ ಸಾರ್‌? ಸಮುದ್ರದ ಮೇಲಿಂದೆಲ್ಲ ಹೋಗುತ್ತಂತಲ್ಲ ಸಾರ್‌?”
ಅವರು, “”ಅದೆಲ್ಲ ಗೊತ್ತೇ ಆಗೊಲ್ಲ ಕಣೋ”
ಇವ, “”ಸಾರ್‌, ಅಲ್ಲೇ ಊಟಾನೂ ಕೊಡ್ತಾರಾ?”
ಅಷ್ಟು  ಕೇಳಿದ್ದೇ ತಡ, ದೂರದಿಂದ ದಾನಮ್ಮ, “”ರೀ, ಬನ್ರಿ ಇಲ್ಲಿ” ಎಂದಳು.
“”ಈ ದಡ್ಡನಿಗೆ ಏನೂಂತ ಉತ್ತರ ಕೊಡಲಪ್ಪಾ?” ಎಂದು ಅವರು ಮಿಸುಕಾಡುತ್ತಿರಬೇಕಾದರೆ ದಾನಮ್ಮನ ಕೂಗು ಉಸಿರಾಯಿತು.

ಕಾಂತೂನ ದಡ್ಡತನ ಕಾಯಕದಲ್ಲಿರಲಿಲ್ಲ ಎಂಬುದು ಎಲ್ಲರೂ ಆಡಿಕೊಳ್ಳುವ ಮಾತು. ನಿಜವಾಗಿ ಆತ ಬುದ್ಧಿವಂತನಾಗಿರುತ್ತಿದ್ದರೆ ಕೆಲಸಗಳ್ಳನಾಗಿರುತ್ತಿದ್ದ ಎಂದೂ ಕೆಲವರು ಆಡಿಕೊಳ್ಳುತ್ತಿದ್ದರು. ಸಂಬಳ ಕೇವಲ ಏಳು ಸಾವಿರ ರೂಪಾಯಿ. ಮನೆ ಬಾಡಿಗೆಯಿಲ್ಲ, ಕರೆಂಟಿನ ಬಿಲ್ಲಿಲ್ಲ, ನೀರಿಗೆ ಚಾರ್ಜಿಲ್ಲ ಎಂದು ಎಲ್ಲರೂ ಹೇಳುತ್ತಿದ್ದುದರಿಂದ ಕಾಂತೂ ಸಂಬಳ ಹೆಚ್ಚಿಸಿ ಅಂತ ಕೇಳುತ್ತಿರಲಿಲ್ಲ. ಕೆಲವೊಮ್ಮೆ ಕೇಳಿದರೂ ಕೇಳಬೇಕಾದವರಲ್ಲಿ ಕೇಳುತ್ತಿರಲಿಲ್ಲ. ಕೇಳಲು ಅವನಿಗೆ ಗೊತ್ತೂ ಇರಲಿಲ್ಲ. ಎಲ್ಲಾದರೂ ಕೇಳುವುದಿದ್ದರೆ ದಾನಮ್ಮ ಕೇಳಬೇಕು. ಅವಳಿಗೆ ಕೇಳುವ ಹಕ್ಕೂ ಇಲ್ಲ. ಮನೆಕೊಟ್ಟಿರುವುದು ಅವಳಿಗಲ್ಲವಲ್ಲ!

ಎರಡು ಮಕ್ಕಳ ಅಪ್ಪನಾಗುವ ತನಕವೂ ಕಾಂತೂ ಹಳ್ಳಿ ಬಿಟ್ಟು ಎಲ್ಲೂ ಹೋದವನಲ್ಲ. ನಾಲ್ಕನೆಯ ಕ್ಲಾಸು ಕಲಿತಿದ್ದಾನೆಂದು ದಾನಮ್ಮ ಹೇಳುತ್ತಿದ್ದರೂ ಒಂದಕ್ಷರ ಓದುವುದನ್ನು ಕಂಡವರಿಲ್ಲ. ಹೆಬ್ಬೆಟ್ಟು. ಆದರೆ, ಎಲ್ಲದರಲ್ಲೂ ವಿಚಿತ್ರ ಕುತೂಹಲ. 
ಒಮ್ಮೆ ಅಂತೇವಾಸಿಯಾದ ಲಿಲ್ಲಿ ಡಿಸೋಜ ತಮ್ಮ ಕಾರನ್ನು ಗೇಟಿನ ಹೊರಗೆ ತಂದು ರಸ್ತೆಯಲ್ಲೆ ನಿಲ್ಲಿಸಿ, ಕಾರಿನಿಂದ ಇಳಿದರು. ಏನೋ ಮರೆತವರಂತೆ ದಡಬಡಿಸಿ ಗೇಟಿನಿಂದ ಒಳಕ್ಕೆ ಹೋದರು. ಅಲ್ಲೇ ಇದ್ದ ಕಾಂತೂ, “”ಯಾಕೆ ಮ್ಯಾಡಮ್‌, ಏನಾಯ್ತು?” ಎಂದ. “”ಮೊಬೈಲು ಮರ್ತುಹೋಯಿತು” ಎನ್ನುತ್ತ ಲಿಲ್ಲಿ ಡಿಸೋಜ ಲಿಫ್ಟಿನ ಬಳಿ ಸಾರಿ ಗುಂಡಿ ಅದುಮಿದರು. ಕಾಂತೂ ರಸ್ತೆಯಲ್ಲಿದ್ದ ಕಾರನ್ನೂ ಅದರಲ್ಲೇ ಬಿಟ್ಟಿದ್ದ ಕೀಯನ್ನೂ ಗಮನಿಸಿದ. ಇನ್ನೊಂದು ಕಾರು ಬರುವುದಕ್ಕಿಂತ ಮೊದಲೇ ಈ ಕಾರನ್ನು ಬದಿಗೆ ಸರಿಸಿಡಬೇಕು ಅನ್ನಿಸಿತು. “ಮ್ಯಾಡಮ್‌ ಕಾರು… ಮ್ಯಾಡಮ್‌ ಕಾರು…’ ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತ ಆತ ಕಾರಿನ ಹತ್ತಿರಕ್ಕೆ ಬಂದ. ಅಪಾರ್ಟ್‌ ಮೆಂಟಿನ ಅದೆಷ್ಟೋ ಕಾರುಗಳು ನಿತ್ಯವೂ ಹೊರಟುಹೋಗುವುದೂ ಮರಳಿ ಬರುವುದೂ ಅವನ ಕಣ್ಣಿಗೆ ಬೀಳುತ್ತಿತ್ತು. ಅಷ್ಟು ಅನುಭವ ಒಂದು ಕಾರು ಓಡಿಸುವುದಕ್ಕೆ ಸಾಕಾಗುತ್ತಾ ಎಂಬುದೂ ಅವನ ದಡ್ಡ ತಲೆಗೆ ಬರಲಿಲ್ಲ. ಒಟ್ಟಿನಲ್ಲಿ ಲಿಲ್ಲಿ ಮ್ಯಾಡಮ್ಮಿನ ಕಾರನ್ನು ರಸ್ತೆಯ ಪಕ್ಕಕ್ಕೆ ಸರಿಸಬೇಕು. ಬಾಕಿಯಿದ್ದವರಿಗೆ ತೊಂದರೆ ಆಗಬಾರದು. 

ಕಾಂತೂ ಬಂದವನೇ ಸೀಟಿನಲ್ಲಿ ಕುಳಿತ. ಹಿಂದೆ ಮುಂದೆ ನೋಡದೆ ಚಾವಿ ತಿರುಗಿಸಿದ. ಮೊದಲ ಗಿಯರಿನಲ್ಲಿದ್ದ ಕಾರು ಒಮ್ಮೆಲೇ ಹಾರಿ ರಸ್ತೆಯ ಪಕ್ಕದ ತೆಂಗಿನ ಮರಕ್ಕೆ ಗುದ್ದಿ ಜಜ್ಜಿಹೋಗಿ ನಿಂತಿತು. ಕಾಂತೂಗೆ ಏನಾಯಿತೆಂದೇ ಅರಿವಾಗಲಿಲ್ಲ.  ರಸ್ತೆಯಲ್ಲಿದ್ದವರೆಲ್ಲ ಓಡಿ ಬಂದು ಕಾಂತೂವನ್ನು ಹೊರಕ್ಕೆಳೆದರು. ಅಬ್ಟಾ ! ಆತನಿಗೆ ಏನೂ ಆಗಿರಲಿಲ್ಲ. 

ಡಿಕ್ಕಿಯ ಸದ್ದಿಗೆ ಅಪಾರ್ಟ್‌ಮೆಂಟಿನವರೆಲ್ಲ ಹೊರಗೋಡಿ ಬಂದರು. ನೋಡಿದರೆ ಕಾಂತೂ! ಅವೇಶಗೊಂಡು,””ಮ್ಯಾಡಮ್‌… ಕಾರು…ಮ್ಯಾಡಮ್‌… ಕಾರು” ಎನ್ನುತ್ತ ನೆಲದಲ್ಲೇ ಒರಗಿದ್ದ. ಸೇರಿದ್ದವರೆಲ್ಲ ತಲೆಗೊಂದು ಮಾತಂದರು. “”ಯಾಕೆ, ಇನ್ನೊಬ್ಬರ ಕಾರು ಮುಟ್ಟೋಕೆ ಹೋದ? ಅವನದ್ದೆಷ್ಟು ಕೆಲಸ ಅಷ್ಟೇ ಮಾಡಬೇಕಪ್ಪಾ ! ಅವನಿಗೆ ಕೊಬ್ಬು, ಯಾರೋ ಅವನನ್ನಿಲ್ಲಿಟ್ಟು ಸಾಕ್ತಿದ್ದಾರೆ. ಕಳ್ಳ ಅವ! ನೀರು ಕದ್ದು ಮಾರ್ತಾನೆ. ಎಲತ್ರ ಸಾಲ ಕೇಳ್ತಾನೆ, ವಾಪಾಸ್‌ ಕೊಡೋದೇ ಇಲ್ಲ. ಇನ್ನವ ಇಲ್ಲಿರೋದೇ ಬೇಡ. ಈಗ್ಲೆà ಕಳಿಸ್ಬೇಕು, ಇವತ್ತು ಲಿಲ್ಲಿ ಮ್ಯಾಡಮ್‌ ಕಾರು. ನಾಳೆ ನಮ್‌ ಕಾರು. ಬೇಡ್ವೇ ಬೇಡ. ಕಳಿÕ ಅವನ್ನ !’ 

ಕಾಂತು ನಡುಗಿದ. ದಾನಮ್ಮ ಮಕ್ಕಳನ್ನು ಆತುಕೊಂಡು ಹೊರಗೋಡಿ ಬಂದಳು. “”ಯಾಕೆ ಅವರ ಕಾರು ಮುಟ್ಟೋಕೆ ಹೋದೆ?  ನಾನೇನು ಮಾಡಿ ಸಾಯ್ಲಿ…” ದಾನಮ್ಮನ ಗೋಳಿಗೆ ಮಕ್ಕಳೂ ದನಿಗೂಡಿಸಿದವು. ಲಿಲ್ಲಿ ಡಿಸೋಜ ಕಾರಿನ ಸ್ಥಿತಿನೋಡಿ ಕೆಂಡವಾದರು. ಕಾಂತೂ ಒಂದೇ ಗುನುಗುತ್ತಿದ್ದ, “” ಮ್ಯಾಡಮ್‌… ಕಾರು… ಮ್ಯಾಡಮ್‌… ಕಾರು…”

ಹಳೆಯ ಆಲ್ಟೋ ಕಾರು. ರಿಪೇರಿಗೆ ಇಪ್ಪತ್ತು ಸಾವಿರ. ಸರಿಯಿದ್ದಾಗ ಮಾರುತ್ತಿದ್ದರೂ ಅದಕ್ಕಿಂತ ಹೆಚ್ಚೇನೂ ಸಿಗುತ್ತಿರಲಿಲ್ಲ. ರಿಪೇರಿಯ ಖರ್ಚುಕೊಡೋದಕ್ಕೆ ಏಳು ಸಾವಿರ ಸಂಬಳದ ವೀರ ಒಪ್ಪಿಕೊಂಡ! ಅಲ್ಲಿಗೆ ಕೇಸು ಮುಗಿಯಿತೆಂದುಕೊಂಡರೆ ಅದು ಪ್ರಾರಂಭವಷ್ಟೇ. ಅಸೋಸಿಯೇಶನ್‌ನವರು ಸಭೆ ಕರೆದರು. ಕಾಂತೂನ ವಿಚಾರಣೆ ನಡೆಯಿತು: ಕಾಂತೂ ತಕ್ಷಣವೇ ಮನೆ ಖಾಲಿ ಮಾಡಬೇಕು! ಮಾಡದಿದ್ದರೆ ಅವನ ಸಾಮಾನು ಸರಂಜಾಮು ಎತ್ತಿ ಒಗೆಯಬೇಕು. ಪೊಲೀಸರಿಗೆ ಒಪ್ಪಿಸಬೇಕು, ಅಧಿಕಪ್ರಸಂಗಿ ಇತ್ಯಾದಿ ಮಾತುಗಳು ಅವನ ಮೇಲೆ ಎರಗಿದವು.

ಒಬ್ಬ ಸದಸ್ಯ ಪ್ರತಿರೋಧ ವ್ಯಕ್ತಪಡಿಸಿದ, “”ಅವಸರದ ತೀರ್ಮಾನ ಸರಿಯಲ್ಲ. ದಿಢೀರನೆ ಮನೆಬಿಟ್ಟು ಹೊರಟು ಹೋಗು” ಎಂದರೆ ಎಲ್ಲಿಗೆ ಹೋಗಬೇಕು? ಶಾಲೆಗೆ ಹೋಗುವ ಇಬ್ಬರು ಚಿಕ್ಕಮಕ್ಕಳು. ಅವುಗಳ ಗತಿಯೇನು? ನಮಗೂ ಮನುಷ್ಯತ್ವ ಬೇಡ್ವೆ? ನಾವೂ ಆ್ಯಕ್ಸಿಡೆಂಟ್‌ ಮಾಡೋದಿಲ್ವೆ?”

“”ತಪ್ಪು$ ಮಾಡಿದವರಿಗೆ ಶಿಕ್ಷೆ‌ ಆಗ್ಲೆà ಬೇಕು. ಇಂಥ ಹುಚ್ಚುತನಕ್ಕೆ ಮದ್ದೆರೆಯದಿದ್ದರೆ ನಾಳೆ ನಮ್ಮ ಬುಡಕ್ಕೇ ಬರುತ್ತೆ. ಕಾರು ಹೋಗಿ ಮರದ ಬದಲಿಗೆ ಜನರಿಗೆ ಡಿಕ್ಕಿ ಹೊಡೀತಿದ್ರೆ ಏನಾಗ್ತಿತ್ತು? ಎಷ್ಟು ಜನ ಸಾಯ್ತಿದ್ರು? ಇನ್ನೂ ಇಂಥವನನ್ನು ಇಟ್ಕೊàಬೇಕಾ?”
“”ಹಾಗೇನೂ ಆಗ್ಲಿಲ್ವಲ್ಲ! ರಿಪೇರಿಯ ಖರ್ಚು ಕೊಡ್ತೇನೇಂತ ಅವನೇ ಒಪ್ಪಿಕೊಂಡಿದ್ದಾನೆ” “”ಹೌದೌದು. ಕೊಡ್ತಾನೆ. ತೋಡಬೇಕು, ಎಲ್ಲಾದರೂ ನಿಧಿ ಉಂಟಾಂತ?” ದಾನಮ್ಮನ ಕಣ್ಣಲ್ಲಿ ರಕ್ತ ಹೊಮ್ಮುತ್ತಿತ್ತು. ಕಾಂತೂ ಮೂಕನಾಗಿದ್ದ. ಮಕ್ಕಳಿಬ್ಬರೂ ದೂರದಲ್ಲಿ ನಿಂತುಕೊಂಡು, “”ಅಪ್ಪನನ್ನು ಪೊಲೀಸ್‌ ಹಿಡ್ಕೊಂಡು ಹೋಗ್ತಾರಂತಲ್ಲೋ, ನಾವೇನೋ ಮಾಡೋದು?” ಅಂತೆಲ್ಲ ಮಾತನಾಡಿಕೊಳ್ಳುತ್ತಿದ್ದರು. 

ಅಧ್ಯಕ್ಷರು ಎಲ್ಲರನ್ನೂ ಮೌನವಾಗಿಸಿ ಅಪ್ಪಣೆ ಹೊರಡಿಸಿದರು, “”ನೋಡು ಕಾಂತೂ, ಎರಡು ವಾರ ಟೈಮ್‌ ಕೊಡ್ತೀವಿ. ಅಷ್ಟರಲ್ಲಿ ಬೇರೆ ಕೆಲ್ಸ ಹುಡುಕ್ಕೊಂಡು ಇಲ್ಲಿಂದ ಹೊರಡ್ಬೇಕು. ಅಷ್ಟು ದಿನ ನಮ್ಮ ಯಾವುದೇ ಕೆಲ್ಸ ನೀ ಮಾಡಕೂಡದು” ಅಲ್ಲದೆ, “”ನಾಳೇನೇ ಏಜೆನ್ಸಿಯವರಿಗೆ ಹೇಳಿ ಹೌಸ್‌ಕೀಪರನ್ನು ಕರೆಸಬೇಕು” ಎಂದು ಮ್ಯಾನೇಜರಿಗೆ ಸೂಚಿಸಿದರು. ಮಾರನೆಯ ದಿನ ಏಜೆಂಟ್‌ ಬಂದು ಒಬ್ಟಾಕೆಯನ್ನು ಇಳಿಸಿಹೋದ.   “”ದಿನಕ್ಕೆ ಒಂದು ಫ್ಲೋರ್‌ ಮಾತ್ರ ಗುಡಿಸಿ ಒರಸ್ತೇನೆ. ಕಾರ್‌ ಪಾರ್ಕಿಂಗ್‌ ಏರಿಯಾ ಗುಡಿಸುವ ಹಾಗಿಲ್ಲ. ಮನೆಮನೆಯ ಕಸ ರಾಶಿ ಹಾಕಿದ್ರೆ ನಾನು ಜವಾಬ್ದಾರಿಯಲ್ಲ. ತೊಟ್ಟಿ ತೊಳೆಯೋದು ನಾವಲ್ಲ. ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಡ್ನೂಟಿ. ಹನ್ನೊಂದು ಸಾವಿರ ತಿಂಗಳಿಗೆ ಸಂಬಳ. ಕೆಲಸ ಪ್ರಾರಂಭ. ಮೂರೇ ದಿವಸ. ಜ್ವರ ನಿಮಿತ್ತ ಹೇಳಿ ಹೋದವಳು ಐದನೆಯ ದಿನಕ್ಕೆ ಬಂದಳು. “”ನಮೂ ಜ್ವರಾ ಗಿರಾ ಬರಾಂಗಿಲ್ವಾ?” ಎಂದು ಗೊಣಗಿದಳು. 
ಬೇರೊಂದು ಏಜೆನ್ಸಿಯವರು ದಢೂತಿ ಹೆಂಗಸನ್ನು ಇಳಿಸಿಹೋದರು. ಆಕೆ ಮೆಟ್ಟಲಲ್ಲಿ ಕುಳಿತು ಫೋನು ಮಾಡೋದಕ್ಕೆ ಶುರುಮಾಡಿದರೆ ಜಪ್ಪೆಂದರೂ ಏಳುತ್ತಿರಲಿಲ್ಲ. ಮ್ಯಾನೇಜರಿಗೆ ಕುತ್ತಿಗೆಗೆ ಬಂತು. ಮಕ್ಕಳು ಸೈಕಲ್‌ ಓಡಿಸುವ, ಆಟವಾಡುವ ತಾಣವೂ ಆಗಿದ್ದ ಕಾರ್‌ ಪಾರ್ಕಿಂಗ್‌ ಏರಿಯಾ ರಸ್ತೆಗೆ ನೇರಾನೇರ ಇದ್ದುದರಿಂದ ಧೂಳೂ ಟಯರಿನ ಕೆಸರೂ ತುಂಬಿ ಕಸದ ತೊಟ್ಟಿಯೇ ಆಗಿತ್ತು. 

ಕಾಂತೂ ದೊಗಳೆ ಚಡ್ಡಿ ಹಾಕಿ ಮನೆಯ ಕತ್ತಲೆಯ ಮೂಲೆಯಲ್ಲಿ ಕುಳಿತುಕೊಂಡಿದ್ದ. ಒಂದೊಂದು ದಿನವೂ ಆ ಮನೆಯ ಕತ್ತಲೆಯನ್ನು ಹೆಚ್ಚಿಸುತ್ತಿತ್ತು. ಶಿವಪ್ಪ ಒಂದೆರಡು ಬಾರಿ ಬಂದು ಸಮಾಧಾನ ಹೇಳಿ ಹೋದ. ಕಾಂತೂ ಎಲ್ಲಾದರೂ ರಾತ್ರೋರಾತ್ರಿ ಮನೆ ಖಾಲಿ ಮಾಡಿದರೆ ತನ್ನ ಇಪ್ಪತ್ತು ಸಾವಿರಕ್ಕೆ ಯಾರು ಹೊಣೆ ಎಂಬುದು ಲಿಲ್ಲಿ ಡಿಸೋಜರ ಚಿಂತೆ. ಅದಕ್ಕಾಗಿ ದಾನಮ್ಮನನ್ನು ಮೇಲಿಂದ ಮೇಲೆ ಮನೆಗೆ ಕರೆಸಿ ವಿಚಾರಿಸುತ್ತಿದ್ದರು. ಪಾಪ ದಾನಮ್ಮ ಊರಿಗೆ ಹೋಗುವಾಗ ಬೇಕೆಂದು ಕಷ್ಟಪಟ್ಟು ಫ‌ಂಡಿಗೆ ಸೇರಿದ್ದಳು. ಅದೇ ವಾರ ಫ‌ಂಡ್‌ ಕರೆದು ಆದಷ್ಟು ಹಣಕೊಡುತ್ತೇನೆಂದೂ ಶಿವಪ್ಪ ಹತ್ತು ಸಾವಿರ ಸಾಲಮಾಡಿ ತಂದುಕೊಟ್ಟರೆ ಅದನ್ನೂ ಕೊಡುತ್ತೇನೆಂದೂ ಹೇಳಿದಾಗ ಲಿಲ್ಲಿ ಡಿಸೋಜರಿಗೆ ನೆಮ್ಮದಿಯಾಯಿತು. ಒಂದು ವಾರದಲ್ಲಿ ಇಡಿಯ ಅಪಾರ್ಟ್‌ಮೆಂಟಿನಲ್ಲಿ ಕಸದ ತೊಟ್ಟಿಗಳ ವಾಸನೆ ಹರಡತೊಡಗಿತು. ಕಸದವರು ಕಸ ಒಯ್ಯುತ್ತಿದ್ದರೇ ಹೊರತು ತೊಟ್ಟಿಗಳನ್ನು ತೊಳೆಯುತ್ತಿರಲಿಲ್ಲ. ತೊಟ್ಟಿಗಳು ಮುಖ್ಯದ್ವಾರದ ಪಕ್ಕದಲ್ಲೇ ಇದ್ದು ಅಂತೇವಾಸಿಗಳಿಗೆ ಹೋಗೋದು ಬರೋದು ಕಷ್ಟವಾಯಿತು.  ಆ ಕಡೆಯಿಂದ ದಾಟುವವರೆಲ್ಲರೂ ಮೂಗುಮುಚ್ಚಿ ಕೊಂಡೇ ದಾಟುತ್ತಿದ್ದರು. ಸಂಜೆ ಪಾರ್ಕ್‌ ನಲ್ಲಿ ಕುಳಿತುಕೊಳ್ಳುವ ಹೆಂಗಸರ, ಮಕ್ಕಳ ಸಂಖ್ಯೆಯೂ ಕಡಿಮೆಯಾಗಿತ್ತು. ಬೆಂಚಿನಲ್ಲಿ ಕುಳಿತಿದ್ದ ಒಂದಿಬ್ಬರು ಅಂತೇವಾಸಿಗಳು ಮಾತನಾಡಿಕೊಳ್ಳುತ್ತಿದ್ದರು, “”ಕಾಂತೂ ಕೆಲಸ ಮಾಡ್ತಿದ್ದಾಗ ಹೀಗಿರಲಿಲ್ಲ. ಕೆಲಸ ಅಂದ್ರೆ ಕಾಂತೂವಿನದಪ್ಪ. ಒಂದೇ ಒಂದು ದಿವಸ ತೊಟ್ಟಿ ವಾಸನೆ ಬರ್ಲಿಲ್ಲ ನೋಡಿ”   “”ಅಲ್ಲಾ, ಕಾಂತೂ ಕಾರು ಓಡಿಸಿದ್ದು ತಪ್ಪು ತಪ್ಪೆ. ಅದ‌ು ಅವನದ್ದೂ ಲಿಲ್ಲಿಯವರದ್ದೂ ಸಮಸ್ಯೆ. ಅದೀಗ ಮುಗಿಯಿ ತಲ್ಲ. ಅವನ ಹೆಂಡ್ತಿ ಅಷ್ಟೂ ದುಡ್ಡು ಸಾಲ ಎತ್ತಿ ತಂದು ಕೊಟ್ಟಳಲ್ಲ. ಎಸೋಸಿಯೇಶನ್ನಿನವರಿಗೆ ಇನ್ನೇನು ಬೇಕಂತೆ?” “”ಇನ್ನು ಮೂರೇ ದಿನ ಬಾಕಿ. ಅದ್ಯಾರೋ ಅವನ ಕಡೆಯ ಶಿವಪ್ಪಬೇರೆಲ್ಲೋ ಫ್ಲಾಟ್‌ ಕೆಲಸ ಏರ್ಪಾಟು ಮಾಡಿಕೊಟ್ಟಿದ್ದಾನಂತೆ. ಮಕ್ಕಳಿಗೆ ಶಾಲೆ ದೂರಾಗುತ್ತೆ ಅನ್ನೋದೇ ದಾನಮ್ಮನ ಚಿಂತೆ. ಅವಳೂ ಮೂರ್‍ನಾಲ್ಕು ಮನೆಗಳಲ್ಲಿ ಕೆಲ್ಸಾ ಮಾಡ್ತಾಳಲ್ಲ”  “”ಏನೇ ಆದ್ರೂ ಕಾಂತೂ ಉಳೀಬೇಕು”

ಅಪಾರ್ಟ್‌ಮೆಂಟಿನ ಹತ್ತಾರು ಮನೆಯವರು ಒಟ್ಟಾಗಿ ಮ್ಯಾನೇಜರರ ಬಳಿ ಹೋದರು. ಮ್ಯಾನೇಜರ್‌ ಅಧ್ಯಕ್ಷರ ಬಳಿ ಹೋದರು. ಅಧ್ಯಕ್ಷರು ಬೇರೆ ದಾರಿಕಾಣದೆೆ ಎಮರ್ಜೆನ್ಸಿ ಮೀಟಿಂಗ್‌ ಕರೆದರು. ಎಲ್ಲರೂ ಬಂದರು. ಯಾರೂ ಮಾತಾಡಲಿಲ್ಲ. ಕೊನೆಗೆ ಅಧ್ಯಕ್ಷರೇ ಮಾತೆತ್ತಿದರು, “”ನಾಳೆ ಒಂದೇ ದಿನ. ನಾಡಿದ್ದು ಕಾಂತೂ ಮನೆ ಖಾಲಿ ಮಾಡಬೇಕು. ಇಷ್ಟು ದಿನದಿಂದ ಏಜೆನ್ಸಿಯ ಜನ ಬಂದು ಕೆಲಸ ಮಾಡ್ತಾ ಇದ್ದಾರೆ. ಹೇಗೆ? ಹಾಗೇ ಮುಂದುವರೀಲಾ?” “”ಮತ್ತಿನ್ನೇನು? ಕಳೆದ ಮೀಟಿಂಗಿನಲ್ಲಿ ತೀರ್ಮಾನಿಸಿ ಯಾಗಿದೆ. ಇದೇನಿದು ಹೊಸ್ತು? ನಮಗೇನು ಮಾಡೋಕೆ ಬೇರೆ ಕೆಲ್ಸಾ ಇಲ್ವಾ? ಅಥವಾ ಮರ್ಯಾದೆ ಇಲ್ವಾ? ಒಬ್ಬ ಕೆಲಸದಾಳಿನ ಮೇಲೆ ನಾವು ಕೈಗೊಂಡ ತೀರ್ಪಿನ ಮೇಲೆ ಇನ್ನೊಂದು ತೀರ್ಪು? ಇದೇನು ಸುಪ್ರೀಮ್‌ ಕೋರ್ಟಾ?” “”ಇದನ್ನೊಂದು ಪ್ರತಿಷ್ಠೆಯ ಪ್ರಶ್ನೆ ಮಾಡಬೇಡಿ ಸ್ವಾಮೀ. ಕಾಂತೂ ನಮಗೇನು ಮಾಡಿದ್ದಾನೆ? ನಿಮಗೇನು ಮಾಡಿದ್ದಾನೆ? ಯಾಕೆ ಅನ್ಯಾಯವಾಗಿ ಪಾಪದವನೊಬ್ಬನ ಮೇಲೆ ಗೂಬೆ ಕೂರಿಸ್ತೀರಾ? ಅವ ಪೆದ್ದ, ಇರೊºàದು. ಆದರೆ ಕೆಟ್ಟೋನಲ್ಲ. ಯಾರಿಗಾದ್ರೂ ಆತ ಅನ್ಯಾಯ ಮಾಡಿದ್ದಾನಾ ಹೇಳಿ ನೋಡುವಾ? ಅಥವಾ ಕಾಂತೂಗಿಂತ ಒಳ್ಳೆಯ ಒಬ್ಬ ನಿಷ್ಠಾವಂತ ಕೆಲಸಗಾರ ಇದ್ರೆ ತಂದುಕೊಂಡಿ” “”ಅದಕ್ಕೆ ನಾವೇನು ಏಜೆನ್ಸಿ ಇಟ್ಟಿಲ್ಲ. ನಾವು ಹೇಳಿದ್ದು ಇವ ಜನ ಸರಿಯಿಲ್ಲಾಂತ. ಸಾಲ ಮಾಡ್ತಾನೆ. ನಮ್ಮ ನೀರನ್ನು ಹೊರಗಿನ ಅಂಗಡಿಗೆ ಮಾರ್ತಾನೆ. ಭಕ್ಷೀಸಿಗೆ”
“”ಪೂ›ವ್‌ ಮಾಡ್ಲಿಕ್ಕೆ ಸಾಧ್ಯವಾಗದ ವಿಚಾರಗಳನ್ನೆಲ್ಲ ಹೇಳಿ ಯಾಕೆ ಸಮಯ ಹಾಳು ಮಾಡ್ತೀರಾ? ಸಾಲ ತಗೊಂಡಿರೊºàದು. ನಾವು ಕೊಡ್ತಿರೋದು ಏಳು ಸಾವಿರ ಸಂಬಳ. ನಿಮ್ಮ ಹಾಗೆ ಎಪ್ಪತ್ತು ಸಾವಿರಾನಾ? ಅಥವಾ ಲಕ್ಷದ ಎಪ್ಪತ್ತು ಸಾವಿರಾನಾ? ಮೂರು ವರ್ಷಗಳಿಂದ ನಮ್ಮ ಜುಜುಬಿ ಸಂಬಳಕ್ಕೆ ಕತ್ತೆ ಥರಾ ದುಡೀತಿದಾನೆ. ಅವನ ಹೆಂಡತಿ ನಾಲ್ಕೈದು ಮನೆಗಳಲ್ಲಿ ಕೆಲ್ಸ ಮಾಡೋದಕ್ಕೆ ಬದುಕ್ತಿದ್ದಾರೆ. ಅಷ್ಟು ಸಂಬಳದಲ್ಲಿ ನೀವಾದ್ರೆ ಏನಾಗ್ತಿದ್ರಿ? ಯಾವತ್ತಾದ್ರೂ ಯೋಚಿಸಿದ್ರಾ?”

“”ಮತ್ತೆ ನಮ್ಮನ್ಯಾಕೆ ಕೇಳ್ತೀರಿ? ನೀವೇ ತೀರ್ಮಾನ ತಗೊಳ್ಳಿ” ಮೂವರು ಪದಾಧಿಕಾರಿಗಳು ಎದ್ದು ಹೊರನಡೆದರು. 
ಅಧ್ಯಕ್ಷರು, “”ದಯಮಾಡಿ ಯಾರೂ ಹೋಗ್ಬೇಡಿ. ಇದು ನಮ್ಮೆಲ್ಲರ ಜವಾಬ್ದಾರಿ. ಈ ಒಂದು ವಾರದಲ್ಲಿ ಕಾಂತೂ ನಿಮ್ಮೆಲ್ಲರ ಮನೆಗೆ ಬಂದಿದ್ದಾನೆ. ನಿಮ್ಮೆಲ್ಲರ ಕಾಲು ಹಿಡಿದು ತಪ್ಪಾಯೂ¤ಂತ ಬೇಡಿಕೊಂಡಿದ್ದಾನೆ. ಏನೋ, ಅವನ ಮಕ್ಕಳು ಪಕ್ಕದ ಸರಕಾರಿ ಶಾಲೆಗೆ ಹೋಗ್ತಿದ್ದಾವೆ. ಹೆಂಡ್ತಿ ಗಂಡ ದುಡ್ಕೊಂಡು ಹೇಗೋ ಜೀವನ ಮಾಡ್ತಿದ್ದಾರೆ. ಅಪಾರ್ಟ್‌ಮೆಂಟಿನ ಹೊರಗಡೆ ರಸ್ತೆಯಲ್ಲಿ ನಡೆದ ಒಂದು ಸಂಗತಿ. ಅದರ ನಷ್ಟವನ್ನೂ ಭರ್ತಿಮಾಡಿಕೊಟ್ಟಿದ್ದಾನೆ. ಯಾವ ತಪ್ಪು$ ಹೊರಿಸಿ ಅವನನ್ನು ಹೊರಗೆ ಕಳಿಸ್ಬೇಕು ಹೇಳಿ?” 

“”ಒಂದು ಮಾಡೊದು. ಇನ್ನುಮುಂದೆ ಇಂಥಾದ್ದೇನಾದ್ರೂ ಘಟನೆ ನಡೆದ್ರೆ ನಿರ್ದಾಕ್ಷಿಣ್ಯವಾಗಿ ಅವನನ್ನು ಕಳಿಸಿಬಿಡೋಣ. ಅಲ್ಲೀ ತನಕ ಇಲ್ಲೇ ಇರೂಂತ ತಾಕೀತು ಮಾಡೋಣ. ಏನಂತೀರಿ?” ಕೆಲವರು ತಟಸ್ಥರಾದರೆ ಮಿಕ್ಕವರೆಲ್ಲ, “”ಅದೇ ಸರಿ, ಕಾಂತೂವಿಗೊಂದು ಅವಕಾಶ ಕೊಡಿ” ಅಂದರು. 
ನಿಜವೆಂದರೆ ಕಾಂತೂವಿನ ಗೆಲುವು  ಇಇಅಪಾರ್ಟ್‌ಮೆಂಟಿನ ಗೆಲುವಾಗಿತ್ತು! 
 
ನಾ. ದಾಮೋದರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next