Advertisement

“Yakshagana’ ಅಂಚೆ ಚೀಟಿ ಬಿಡುಗಡೆ: “ದೈವಾರಾಧನೆಯ ಮಹತ್ವ ಸಾರಲು ಶೀಘ್ರ ಅಂಚೆಚೀಟಿ’

12:21 AM Feb 26, 2024 | Team Udayavani |

ಮಂಗಳೂರು: ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಯಕ್ಷಗಾನದ ಅಂಚೆ ಚೀಟಿಯು ಕರಾವಳಿಯ ಸಾಂಪ್ರದಾ ಯಿಕ ಕಲೆ ಯಕ್ಷಗಾನವನ್ನು ವಿಶ್ವದಾ ದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಅಂಚೆ ಇಲಾಖೆಯು ಎಂಆರ್‌ಪಿಎಲ್‌ ಪ್ರಾಯೋಜಕತ್ವದಲ್ಲಿ ಹೊರತಂದಿರುವ “ಯಕ್ಷಗಾನ’ಕ್ಕೆ ಸಮರ್ಪಿತ
ಸಂಸ್ಮರಣ ಅಂಚೆ ಚೀಟಿ ಯನ್ನು ರವಿವಾರ ಮಂಗಳೂರು ಪುರಭವನ ದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಡಲತಡಿಯ ಭಾರ್ಗವ ಶಿವರಾಮ ಕಾರಂತ ಹಾಗೂ ದೈವಾರಾಧನೆಯ ಮಹತ್ವವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಈ ಕುರಿತಂತೆಯೂ ಅಂಚೆ ಚೀಟಿಯನ್ನು ಕೂಡ ಹೊರತರುವಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್‌ಮಾತನಾಡಿ, ಅಂಚೆ ಚೀಟಿ ಮೂಲಕಯಕ್ಷಗಾನವನ್ನು ವಿಶ್ವಕ್ಕೆ ಪರಿಚಯ ವಾಗುತ್ತಿರುವುದು ಸೌಭಾಗ್ಯ ಎಂದರು.ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಮಾತನಾಡಿ, ಅಂಚೆ ಚೀಟಿ ರಾಯಭಾರದ ಕೆಲಸವನ್ನು ಮಾಡುತ್ತಿದೆ. ಯಕ್ಷಗಾನಕ್ಕೆ ಯುನೆಸ್ಕೋ ಸ್ಥಾನಮಾನ, ಐಸಿಸಿಆರ್‌ ಮುಖೇನ ಕಾರ್ಯಕ್ರಮಗಳು ಹಾಗೂ ಅಯೋಧ್ಯೆಯ ಪ್ರತಿಷ್ಠಾ ವಾರ್ಷಿ ಕೋತ್ಸವದ ದಿನ ಸಮಗ್ರ ರಾಮಾಯಣ ಕುರಿತು 1 ವಾರ ಯಕ್ಷಗಾನಕ್ಕೆ ಅವಕಾಶ ಸಿಗಲಿ ಎಂದು ಆಶಿಸಿದರು.

ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರ ಕಾಮಾರ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಅಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಎಂಆರ್‌ಪಿಎಲ್‌ನ ಜಿಎಂ ಡಾ| ರುಡಾಲ್ಫ್ ನೊರೋನ್ಹಾ ಮುಖ್ಯ ಅತಿಥಿಗಳಾಗಿದ್ದರು.ದಕ್ಷಿಣ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಲ್‌.ಕೆ. ದಾಸ್‌ ಪ್ರಸಾವನೆಗೈದರು. ಸುಧಾಕರ ಮಲ್ಯ ಸ್ವಾಗತಿಸಿದರು. ದೇವದಾಸ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next