ಪ್ರಾಥಮಿಕ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲೇ ಬೇಕು. ಈ ನಿಟ್ಟಿನಲ್ಲಿ
ಮುಖ್ಯಮಂತ್ರಿಯವರ ಮೇಲೆ ಒತ್ತಡ ತರುವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ
ಎಚ್.ಡಿ.ರೇವಣ್ಣ ಹೇಳಿದರು.
Advertisement
ಹಾಸನ ತಾಲೂಕು ಮೊಸಳೆ ಹೊಸಹಳ್ಳಿಯಲ್ಲಿ ಮಾತನಾಡಿ, ಹಣವಂತರ ಮಕ್ಕಳು ಮಾತ್ರ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಓದುವುದಾದರೆ ಬಡವರ ಮಕ್ಕಳು ಏನು ಮಾಡಬೇಕು? ಹಣವಂತರಿಗೆ ಇಂಗ್ಲಿಷ್ ಮಾಧ್ಯಮ, ಬಡವರಿಗೆ ಕನ್ನಡ ಮಾಧ್ಯಮ ಎಂಬ ಪರಿಸ್ಥಿತಿ ಇರಬಾರದು ಎಂದರು. ಸರ್ಕಾರ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಂಭಿಸುವುದನ್ನು ವಿರೋಧಿಸುವವರು ರಾಜ್ಯದಲ್ಲಿರುವ ಎಲ್ಲಾ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಮುಚ್ಚಿಸಲಿ. ಎಲ್ಲವೂ ಕನ್ನಡ ಮಾಧ್ಯಮದ ಶಾಲೆಗಳೇ ಇರಲಿ ಎಂದು ಸರ್ಕಾರದ ಮೇಲೆ ಒತ್ತಡ ತಂದು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ರದ್ದುಪಡಿಸಲಿ ಎಂದರು