Advertisement
ಈ ಸಂಬಂಧ ಜಾನಪದ ಲೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮುಂತಾದ ಜಿಲ್ಲೆಗಳಲ್ಲಿ ವ್ಯಾಪಿರಿಸುವ ಮೂಡಲಪಾಯ ಯಕ್ಷಗಾನ ನಿರ್ಲಕ್ಷಕ್ಕೆ ಒಳಗಾಗಿದೆ. ಈ ಕಲೆಯ ಪುನರುಜ್ಜೀವನಕ್ಕೆ ಅಕಾಡೆಮಿ ಸ್ಥಾಪಿಸಿವುದು ಅವ್ಯಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಮಾಲೋಚನೆ ಸಭೆ ನಡೆದಿದೆ. ಸಮಾಲೋಚನ ಸಭೆಯಲ್ಲಿ ಕರ್ನಾಟಕ ದಕ್ಷಿಣ ಭಾಗದ ಜಾನಪದ ವಿದ್ವಾಂಸರು, ಭಾಗವತರು, ಕಲಾವಿದರು ಭಾಗವಹಿಸಿದ್ದು, ಮೂಡಲಪಾಯ ಯಕ್ಷಗಾನ ಅಕಾಡಮಿ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Related Articles
Advertisement
ಮೊದಲು ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಸ್ತಿತ್ವದಲ್ಲಿತ್ತು. ತದ ನಂತರ ಜಾನಪದ ಮತ್ತು ಯಕ್ಷಗಾನವನ್ನು ಪ್ರತ್ಯೇಕಿಸಿ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. 2017ರಲ್ಲಿ ಬಯಲಾಟ ಅಕಾಡೆಮಿಯೂ ಸ್ಥಾಪನೆಯಗಿದ್ದು ಬಾಗಲ ಕೋಟೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೂ ಮೂಡಲಪಾಯ ಯಕ್ಷಗಾನ ಕಲೆಗೆ ಪ್ರಾಧನ್ಯತೆ ದೊರಕಿಲ್ಲ. ಮೇಲಾಗಿ ಮೂಡಲಪಾಯ ಯಕ್ಷಗಾನವನ್ನು ಬಯಲಾಟ ಅಕಾಡಮಿಗೆ ಸೇರಬೇಕೋ, ಬಯಲಾಟ ಅಕಾಡೆಮಿಗೆ ಸೇರಬೇಕೋ ಎಂಬ ಜಿಜ್ಞಾಸೆಯೂ ಇದೆ. ನಿರ್ಲಕ್ಷಕ್ಕೆ ಒಳಗಾಗಿರುವ ಮೂಡಲಪಾಯ ಜನಪದ ರಂಗಭೂಮಿಗೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ ಅಳಿವಿನ ಅಂಚಿನಲ್ಲಿರುವ ಈ ಕಲೆಯ ಬೆಳವಣಿಗೆಗೆ ಸಹಕಾರಿಯಾಗಬೇಕು, ಮೂಡಲಪಾಯ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಜಾನಪದ ವಿದ್ವಾಂಸರುಗಳಾದ ಡಾ.ಪಿ.ಕೆ.ರಾಜಶೇಖರ್, ಡಾ.ಜಯಲಕ್ಷ್ಮಿ ಸೀತಾಪುರ, ಡಾ.ಚಂದ್ರು ಕಾಳೇನಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು, ಜಾನಪದ ಲೋಕದ ಆಡಳಿತಾಧಿಕಾರಿ ಡಾ.ಕುರುವ ಬಸವರಾಜ್ ಉಪಸ್ಥಿತರಿದ್ದರು.