Advertisement

ಪ್ರೆಷರ್‌ ಕುಕ್ಕರ್‌

04:03 AM May 18, 2020 | Lakshmi GovindaRaj |

1 ಕುಕ್ಕರ್‌ನ ಪ್ರಮುಖ ಭಾಗ ಗ್ಯಾಸ್ಕೆಟ್‌. ಕುಕ್ಕರ್‌ನ ಮುಚ್ಚಳದ ಒಳಭಾಗದಲ್ಲಿ ಕೂರುವ ಗ್ಯಾಸ್ಕೆಟ್‌ ಅನ್ನು, ರಬ್ಬರ್‌ನಿಂದ ತಯಾರಿಸಿರುತ್ತಾರೆ. ಪ್ರತೀಬಾರಿ ಕುಕ್ಕರ್‌ ಬಳಸಿದಾಗಲೂ, ಗ್ಯಾಸ್ಕೆಟ್‌ ಅನ್ನು ಮರೆಯದೇ ಸ್ವಚ್ಛಗೊಳಿಸಬೇಕು.  ಕುಕ್ಕರ್‌ನ ಒಳಗೆ ಉತ್ಪತ್ತಿಯಾಗುವ ಪ್ರಷರ್‌, ಶಾಖ ಹೊರಹೋಗದಂತೆ ಇದು ತಡೆಯುತ್ತದೆ. ಅನೇಕ ಮಂದಿ, ಗ್ಯಾಸ್ಕೆಟ್‌ ಅನ್ನು ಮುಚ್ಚಳದ ಒಳಗೇ ಬಿಟ್ಟು ಮೇಲಿಂದ ಮೇಲೆ ಸ್ವಚ್ಛಗೊಳಿಸುತ್ತಾರೆ. ಆ ರೀತಿ ಮಾಡದೆ ಗ್ಯಾಸ್ಕೆಟ್‌ ಅನ್ನು  ಹೊರತೆಗೆದು ಸ್ವಚ್ಛಗೊಳಿಸಿ.

Advertisement

2 ಮುಚ್ಚಳದ ತುದಿಯಲ್ಲಿ ವಿಷಲ್‌ ಹಾಕುವ ಭಾಗದಲ್ಲಿ, ಪುಟ್ಟ ಕೊಳವೆಯನ್ನು ನೀಡಲಾಗಿರುತ್ತದೆ. ಅದರ ಮೂಲಕವೇ ವಿಷಲ್‌ ಗಾಳಿ ಹೊರ ಹೋಗುವುದು. ಅದು, ಆಹಾರ ಪದಾರ್ಥಗಳಿಂದ ಕಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ, ಕೊಳವೆಯ ಭಾಗವನ್ನು  ಸ್ವಚ್ಛಗೊಳಿಸಬೇಕು. ಹಾಗೆ ಮಾಡದಿದ್ದರೆ, ಕಾಲಕ್ರಮೇಣ ಕುಕ್ಕರ್‌ ಹಾಳಾಗುವುದು ಮಾತ್ರವಲ್ಲ, ಬೇಯಿಸಿದ ಆಹಾರದ ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ಕೊಳವೆಯನ್ನು ಸ್ವಚ್ಛಗೊಳಿಸಲು ಬಾಯಿಂದ ಗಾಳಿ ಊದಿ, ಅಡುಗೆ ಎಣ್ಣೆಯನ್ನು  ಹಾಕಬಹುದು.

3 ಸ್ಟ್ರಾಂಗ್‌ ರಾಸಾಯನಿಕಗಳನ್ನು ಹೊಂದಿದ ಡಿಶ್‌ ವಾಶರ್‌ ಅನ್ನು ಬಳಸದೇ ಇದ್ದರೆ ಉತ್ತಮ. ಸ್ಟ್ರಾಂಗ್‌ ಕ್ಲೋರಿನ್‌ ಅಥವಾ ಬೆಂಝೀನ್‌ ರಾಸಾಯನಿಕಗಳನ್ನು ಬಳಸುವುದಕ್ಕೆ ಬದಲಾಗಿ, ನೀರು- ವೈಟ್‌ ವಿನೆಗರ್‌ ಅನ್ನು ಬಳಸಿರಿ. ಕುಕ್ಕರ್‌  ಒಳಗೆ ಇವೆರಡರ ಮಿಶ್ರಣ ಮಾಡಿ, ಸ್ವಲ್ಪ ಕಾಲ ಕುದಿಸಬೇಕು. ಬೇಕಿಂಗ್‌ ಸೋಡಾ ಬಳಸುವುದರಿಂದ ಹಳೆಯ ಕಲೆಗಳು, ಗಟ್ಟಿ ಕಲೆಗಳು ಹೋಗುವವು. ನಂತರ ಸ್ಟವ್‌ ಆರಿಸಿ, ಒಂದು ಚಮಚದಷ್ಟು ಬೇಕಿಂಗ್‌ ಸೋಡ ಬೆರೆಸಿ, ಕುಕ್ಕರ್‌ ಅನ್ನು  ಕೆಲ ನಿಮಿಷಗಳ ಕಾಲ ಹಾಗೇ ಇಡಬೇಕು.

4 ಕುಕ್ಕರ್‌ ಅನ್ನು ಒಳಕ್ಕೆ ಇಡುವ ಮುನ್ನ ಪೂರ್ತಿಯಾಗಿ ಒಣಗಿಸಬೇಕು. ಕುಕ್ಕರ್‌ ಒಳಗೆ ನೀರಿನ ಪಸೆ ಇರದಂತೆ ಎಚ್ಚರ ವಹಿಸಬೇಕು. ಇಲ್ಲದೇ ಹೋದರೆ, ರಾತ್ರಿಯೆಲ್ಲಾ ಹಾಗೆಯೇ ಬಿಡುವುದರಿಂದ ಬೂಸ್ಟ್ ಹಿಡಿಯುವ ಸಾಧ್ಯತೆ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next