Advertisement

ಉಡುಪಿಯಲ್ಲಿ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಧನಸಹಾಯ ವಿತರಣೆ

09:26 AM Jul 02, 2019 | Nagendra Trasi |

ಉಡುಪಿ:ತಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು, ಎಷ್ಟೋ ಸಾರಿ ತಮ್ಮ ವೈಯಕ್ತಿಕ ಬದುಕಗಳನ್ನು ಮೀರಿ ನಿಂತು ಇಡೀ ಪ್ರಪಂಚಕ್ಕಾಗಿ, ಸಮಾಜಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪತ್ರಕರ್ತರ ದಿನಾಚರಣೆ ಇದಾಗಿದೆ ಎಂದು ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪಿ.ಎಲ್.ಧರ್ಮ ಅಭಿಪ್ರಾಯವ್ಯಕ್ತಪಡಿಸಿದರು.

Advertisement

ಅವರು ಸೋಮವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಉಡುಪಿ ಬಡಗುಬೆಟ್ಟಿನ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ್ ಸಭಾ ಭವನದಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದರು.

ಇತ್ತೀಚೆಗೆ ನಾವು ಅಂಬೇಡ್ಕರ್, ಗಾಂಧಿ, ಬೋಸ್ ಸೇರಿದಂತೆ ಹೆಚ್ಚು, ಹೆಚ್ಚು ವ್ಯಕ್ತಿಗಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಅದೇ ರೀತಿ ಪತ್ರಿಕಾ ದಿನಾಚರಣೆಯನ್ನು ಕೂಡಾ ಆಚರಿಸುತ್ತಿದ್ದೇವೆ. ಇದು ಪತ್ರಿಕೆ ಮತ್ತು ಪತ್ರಿಕಾ ಕುಟುಂಬದ ದಿನಾಚರಣೆಯೂ ಹೌದು ಎಂದರು.

ನಾವು ಪ್ರಮುಖ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ಅವುಗಳಲ್ಲಿ ನಿನ್ನೆ, ಇವತ್ತು ಮತ್ತು ನಾಳೆ. ಇಡೀ ಪತ್ರಕರ್ತರ ಕುಟುಂಬ ಏನು ಮಾಡಿದೆ ಎಂಬುದನ್ನು ಚಿಂತಿಸುವ, ಮಂಥನ ಮಾಡುವ ಅದರ ಜೊತೆಗೆ ಇವತ್ತು ಏನಾಗುತ್ತಿದೆ ಎಂಬುದನ್ನು ತಿಳಿಸುವ ವರದಿಗಳು ನಮಗೆ ಪತ್ರಿಕೆಯಲ್ಲಿ ಪ್ರಕಟವಾಗುವ ಮೂಲಕ ಸಿಗುತ್ತದೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ  ಉದಯವಾಣಿ ದೈನಿಕದ ಉಪಸಂಪಾದಕಿ ಸುಶ್ಮಿತಾ ಶೆಟ್ಟಿ, ರಮ್ಯಾ ಪ್ರೇಮಾನಂದ್ ಕಾಮತ್ ಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಪತ್ರಿಕೋದ್ಯಮ ವಿದ್ಯಾರ್ಥಿನಿಗೆ ಧನಸಹಾಯ ವಿತರಿಸಲಾಯಿತು.

ಪತ್ರಿಕಾ ದಿನಾಚರಣೆಯಲ್ಲಿ ಕಾರ್ಕಳದ ಪತ್ರಿಕಾ ವಿತರಕ ಮೊಹಮ್ಮದ್ ಇಸ್ಮಾಯಿಲ್, 2018ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಕುಲ್ ದಾಸ್ ಪೈ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ವಿಜೇತ ಉದಯವಾಣಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಛಾಯಾಗ್ರಾಹಕ ಜಿಕೆ ಹೆಗಡೆ , ಉಡುಪಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಪ್ರೆಸ್ ಕ್ಲಬ್ ಸಂಚಾಲ ನಾಗರಾಜ್ ರಾವ್, ಸಂತೋಷ್ ಸರಳೇಬೆಟ್ಟು, ದಿವಾಕರ್ ಹಿರಿಯಡ್ಕ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next