Advertisement

ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆ ಅಧಿಕಾರಿ, ಸಿಬ್ಬಂದಿಗೂ ರಾಷ್ಟ್ರಪತಿ ಪದಕ

12:23 AM Jan 26, 2020 | Lakshmi GovindaRaj |

ಬೆಂಗಳೂರು: ಪ್ರಸಕ್ತ ವರ್ಷದ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 9 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗೆ “ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಶೌರ್ಯ ಪ್ರಶಸ್ತಿ ಮತ್ತು ಶ್ಲಾಘನೀಯ ಸೇವಾ ಪದಕ’ ಲಭಿಸಿದೆ. ಹಾಗೆಯೇ ಗೃಹರಕ್ಷಕ ದಳದ ಆರು ಜನರಿಗೆ ಮತ್ತು ಪೌರ ರಕ್ಷಣೆಯ ಒಬ್ಬ ಸಿಬ್ಬಂದಿಗೆ “ಶ್ಲಾಘನೀಯ ಸೇವಾ ಪದಕ’ವನ್ನು ನೀಡಲಾಗುವುದು.

Advertisement

ಶೌರ್ಯ ಪ್ರಶಸ್ತಿ ಸೇವಾ ಪದಕ: ಜೆ.ಎಚ್‌.ರವಿಶಂಕರ್‌ (ಉಪ ನಿರ್ದೇಶಕರು, ತಾಂತ್ರಿಕ ವಿಭಾಗ), ನವೀನ್‌ ಎಂ.ಪಾವಾಡಿ, ಅಶೋಕ್‌ ಕೆ.ವಡೇರ (ಸವದತ್ತಿ ಅಗ್ನಿಶಾಮಕ ಠಾಣೆ), ಸಿದ್ದಪ್ಪ ಉಪ್ಪಾರ್‌ (ಹೊಳಲ್ಕೆರೆ ಅಗ್ನಿಶಾಮಕ ಠಾಣೆ), ಎಚ್‌.ಜಿ. ಧರಣೇಶ್‌ (ತುಮಕೂರು ಅಗ್ನಿಶಾಮಕ ಠಾಣೆ).

ಶ್ಲಾಘನೀಯ ಸೇವಾ ಪದಕ: ಆರ್‌.ಮಹೇಶ್‌ (ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಬೆಂಗಳೂರು ಪಶ್ಚಿಮ ವಲಯ), ಎಂ.ಗೋಪಾಲ (ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಉಡುಪಿ ಠಾಣೆ), ಕೆ.ರೇವಣ್ಣ ಸಿದ್ದಪ್ಪ (ಪ್ರಮುಖ ಅಗ್ನಿಶಾಮಕ, ಜಗಳೂರು ಅಗ್ನಿಶಾಮಕ ಠಾಣೆ), ಮೈದು ಕುಂ(ಪಾಂಡೇಶ್ವರ ಅಗ್ನಿಶಾಮಕ ಠಾಣೆ, ಮಂಗಳೂರು).

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ
ಮಂಗಳೂರು: ಅಕ್ಷರ ಸಂತನೆಂದೇ ಜನಮಾನಸದಲ್ಲಿ ಮನ್ನಣೆ ಗಳಿಸಿರುವ ಹರೇಕಳ ಹಾಜಬ್ಬಗೆ ಪದ್ಮಶ್ರೀ ಪುರಸ್ಕಾರ ಘೋಷಿಸಲಾಗಿದೆ. ಮಂಗಳೂರು ತಾಲೂಕಿನ ಹರೇಕಳ ಎಂಬ ತೀರಾ ಗ್ರಾಮೀ ಣ ಪ್ರದೇಶದಲ್ಲಿ ಜನಿಸಿದ ಹರೇಕಳ ಹಾಜಬ್ಬ, ಬಡತನದಿಂದ ಶಾಲೆಯ ಮೆಟ್ಟಿಲು ಹತ್ತಲಾರದೆ ಜೀವನೋಪಾಯಕ್ಕೆ ಬುಟ್ಟಿ ಯಲ್ಲಿ ಕಿತ್ತಳೆ ಮಾರುವ ಕಾಯಕ ಕೈಗೊಂಡರು.

ತಾವು ಶಿಕ್ಷಣ ದಿಂದ ವಂಚಿತರಾದರೂ ಇತರರು ಶಿಕ್ಷಣ ಪಡೆಯುವಂತಾ ಗಬೇಕು ಎಂಬ ಕನಸು ಕಂಡು, ಇದನ್ನು ನನಸು ಮಾಡುವಲ್ಲಿ ಯಶಸ್ವಿಯಾಗಿ ಹರೇಕಳದಲ್ಲಿ ಅಕ್ಷರ ಕ್ರಾಂತಿಗೆ ಕಾರಣರಾದರು. 1999ರ ಹೊತ್ತಿಗೆ ಹರೇಕಳಕ್ಕೆ ಕಿರಿಯ ಪ್ರಾಥಮಿಕ ಶಾಲೆ ಮಂಜೂರಾಯಿತು.

Advertisement

ದಾನಿಗಳ ನೆರವಿನಿಂದ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಹಾಜಬ್ಬರೇ ಒದಗಿಸಿದರು. ಹಾಜಬ್ಬರ ಅವಿರತ ಶ್ರಮದಿಂದ ಇದೀಗ ಕಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ ಮಟ್ಟಕ್ಕೆ ತಲುಪಿದೆ. ಆದರೆ ಹಾಜಬ್ಬರು ಇಂದಿಗೂ ತನ್ನ ಕಾರ್ಯದಿಂದ ವಿಮುಖರಾಗಿಲ್ಲ. ತಮಗೆ ಬಂದ ಪ್ರಶಸ್ತಿ ಮೊತ್ತವನ್ನು ಶಾಲೆಯ ಅಭಿವೃದ್ಧಿಗಾಗಿಯೇ ವಿನಿ ಯೋಗಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next