Advertisement
ಪೊಲೀಸ್ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಪೊಲೀಸರಿಗೆ ನೀಡಲಾಗುವ ಅತ್ಯುನ್ನತ ಗೌರವ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಎಡಿಜಿಪಿ ಶರತ್ ಚಂದ್ರ ಅವರಿಗೆ ಸಿಕ್ಕಿದೆ. ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಸಹಿತ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಶರತ್ ಚಂದ್ರ ಪಾತ್ರ ಪ್ರಮುಖವಾಗಿದೆ.
ರಾಜ್ಯ ಗುಪ್ತ ವಾರ್ತೆಯ ಹೆಚ್ಚುವರಿ ನಿರ್ದೇಶಕ ಲಾಭುರಾಮ್, ಪೊಲೀಸ್ ಪ್ರಧಾನ ಕಚೇರಿಯ ಪಿಆರ್‌ಸಿ ವಿಭಾಗದ ಡಿವೈಎಸ್‌ಪಿ ಎಸ್. ನಾಗರಾಜು, ಬೆಂಗಳೂರು ಕೆಎಲ್‌ಎಯ ಡಿವೈಎಸ್‌ಪಿಗಳಾದ ಪಿ. ವೀರೇಂದ್ರ ಕುಮಾರ್, ಪಿ. ಪ್ರಮೋದ್ ಕುಮಾರ್, ಕರ್ನಾಟಕ ಲೋಕಾಯುಕ್ತದ ಡಿವೈಎಸ್‌ಪಿ ಸಿದ್ದಲಿಂಗಪ್ಪ ಗೌಡ ಆರ್. ಪಾಟೀಲ್, ಬೆಂಗಳೂರು ಎನ್‌ಕ್ರೋಚ್‌ಮೆಂಟ್ ಎಸ್‌ಟಿ ಎಫ್ಎನ್‌ನ ಡಿವೈಎಸ್‌ಪಿ ಸಿ.ವಿ.ದೀಪಕ್, ಬೆಂಗಳೂರು ನಗರ ವಿಶೇಷ ವಿಭಾಗದ ಡಿವೈಎಸ್‌ಪಿ ಎಚ್.ವಿಜಯ್, ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ.ಎಸ್.ಮಂಜುನಾಥ್, ಬೆಂಗಳೂರು ಅಶೋಕನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ರಾವ್ ಗಣೇಶ್ ಜನಾರ್ದನ್, ದಾವಣಗೆರೆ ಸಂಚಾರ ವೃತ್ತ, ಪೊಲೀಸ್ ವೃತ್ತ ನಿರೀಕ್ಷಕ ಆರ್.ಪಿ.ಅನಿಲ್ , ಬೆಂಗಳೂರು ನಗರ ಸಂಚಾರ ಮತ್ತು ಯೋಜನಾ ವಿಭಾಗದ ಇನ್‌ಸ್ಪೆಕ್ಟರ್ ಮನೋಜ್ ಹೋವಳೆ, ಬೆಂಗಳೂರು 3ನೇ ಪಡೆ ಕೆಎಸ್‌ಆರ್‌ಪಿಯ ಸ್ಪೆ.ಆರ್‌ಪಿಐ ಬಿ.ಟಿ. ವರದರಾಜು, ಬೆಂಗಳೂರು 4ನೇ ಪಡೆ ಕೆಎಸ್‌ಆರ್‌ಪಿಯ ಸ್ಪೆಷಲ್ ಎಆರ್‌ಎಸ್‌ಐಗಳಾದ ಟಿ.ಎ.ನಾರಾಯಣ್ ರಾವ್, ಎಸ್.ಎಸ್ ವೆಂಕಟರಮಣ ಗೌಡ, ಬೆಂಗಳೂರು 9ನೇ ಪಡೆ ಕೆಎಸ್‌ಆರ್‌ಪಿಯ ಸ್ಪೆಷಲ್ ಎಆರ್‌ಎಸ್‌ಐ ಎಸ್.ಎಂ.ಪಾಟೀಲ್, ಬೆಂಗಳೂರು ಸಿಐಡಿಯ ಹೆಡ್‌ಕಾನ್‌ಸ್ಟೆಬಲ್ ಕೆ.ಪ್ರಸನ್ನ ಕುಮಾರ್, ತುಮಕೂರು ಸಂಚಾರ ಪಶ್ಚಿಮ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಎಚ್.ಪ್ರಭಾಕರ್, ಬೆಂಗಳೂರು ಎಸ್‌ಸಿಅರ್‌ಬಿ, ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಡಿ.ಸುಧಾ, ಬೆಂಗಳೂರು ಸಿಟಿ ಕಂಟ್ರೋಲ್ ರೂಮ್ ಹೆಡ್‌ಕಾನ್‌ಸ್ಟೆಬಲ್ ಟಿ.ಆರ್.ರವೀಂದ್ರ ಕುಮಾರ್ 2023ನೇ ಸಾಲಿನ ಗಣರಾಜ್ಯೋತ್ಸವದ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.