Advertisement

Independence Day: ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ… ಇಲ್ಲಿದೆ ಸಂಪೂರ್ಣ ವಿವರ

05:47 PM Aug 14, 2024 | Team Udayavani |

ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರಕಾರ ರಾಷ್ಟ್ರಪತಿಗಳ ಪದಕ ಘೋಷಿಸಿದೆ. ಪೊಲೀಸ್‌ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಕೇಂದ್ರ ಗೃಹ ಸಚಿವಾಲಯ ರಾಜ್ಯದ 19 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.

Advertisement

ರಾಷ್ಟ್ರಪತಿಯವರು ಪ್ರಧಾನ ಮಾಡುವ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿರುವ ಕರ್ನಾಟಕದ ರಾಜ್ಯದ 19 ಪೊಲೀಸ್‌ ಅಧಿಕಾರಿಗಳು ವಿವರ ಇಂತಿದೆ:

ಮಾನ್ಯ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಪುರಸ್ಕೃತರು
– ಎಂ.ಚಂದ್ರಶೇಖರ್, ಎಡಿಜಿಪಿ, ಆಂತರಿಕಾ ಭದ್ರತಾ ವಿಭಾಗ(ಐಎಸ್‌ಡಿ), ಬೆಂಗಳೂರು.

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:
1. ಶ್ರೀನಾಥ್ ಎಂ ಜೋಷಿ, ಎಸ್‌ಪಿ ಲೋಕಾಯುಕ್ತ
2. ಸಿ.ಕೆ ಬಾಬಾ, ಎಸ್‌ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
3. ರಾಮಗೊಂಡ ಬಿ ಬಸರಗಿ, ಎಎಸ್‌ಪಿ, ಬಳ್ಳಾರಿ ಜಿಲ್ಲೆ
4. ಎಂ.ಡಿ. ಶರತ್​, ಪೊಲೀಸ್​ ಅಧೀಕ್ಷಕರು, ಸಿಐಡಿ, ಬೆಂಗಳೂರು
5. ವಿ.ಸಿ. ಗೋಪಾಲರೆಡ್ಡಿ, ಡಿಸಿಪಿ, ಸಿಆರ್​, ಪಶ್ಚಿಮ, ಬೆಂಗಳೂರು ನಗರ
6. ಗಿರಿ ಕೆ.ಸಿ, ಡಿವೈಎಸ್‌ಪಿ, ಚನ್ನಪಟ್ಟಣ ಉಪ-ವಿಭಾಗ, ರಾಮನಗರ ಜಿಲ್ಲೆ
7. ಮುರಳೀಧರ್ ಪಿ, ಡಿವೈಎಸ್‌ಪಿ, ಚಿಂತಾಮಣಿ ಉಪ-ವಿಭಾಗ, ಚಿಕ್ಕಬಳ್ಳಾಪುರ ಜಿಲ್ಲೆ
8. ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್, ರಾಜ್ಯ ಗುಪ್ತವಾರ್ತೆ, ಕಲಬುರಗಿ
9. ಕೆ. ಬಸವರಾಜು, ಡಿವೈಎಸ್‌ಪಿ, ಐಎಸ್​ಡಿ, ಕಲಬುರಗಿ
10. ರವೀಶ್ ನಾಯಕ್, ಎಸಿಪಿ, ಸಿಸಿಆರ್​ಬಿ, ಮಂಗಳೂರು ನಗರ
11. ಎನ್​. ಮಹೇಶ್​, ಸಹಾಯಕ ನಿರ್ದೇಶಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
12. ಪ್ರಭಾಕರ್ ಜಿ, ಎಸಿಪಿ, ಸಂಚಾರ ಯೋಜನೆ, ಬೆಂಗಳೂರು ನಗರ
13. ಹರೀಶ್ ಎಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್, 11ನೇ ಪಡೆ, ಕೆಎಸ್​ಆರ್​ಪಿ, ಹಾಸನ
14. ಮಂಜುನಾಥ ಎಸ್​. ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್, ಎಫ್​ಪಿಬಿ, ದಾವಣಗೆರೆ
15. ಎಸ್. ಮಂಜುನಾಥ, ಆರ್​ಪಿಐ, 3ನೇ ಪಡೆ, ಕೆಎಸ್​ಆರ್​ಪಿ, ಬೆಂಗಳೂರು
16. ಗೌರಮ್ಮ ಜಿ., ಎಎಸ್ಐ, ಸಿಐಡಿ, ಬೆಂಗಳೂರು
17. ಮಹಬೂಬಸಾಹೇಬ ಎನ್​ ಮುಜಾವರ್​, ಸಿಎಚ್​ಸಿ, ಮನಗುಳಿ ಪೊಲೀಸ್​ ಠಾಣೆ, ವಿಜಯಪುರ ಜಿಲ್ಲೆ
18. ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್, ಡಿಸಿಆರ್​ಬಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next