Advertisement

ಅಧ್ಯಕ್ಷ ಟ್ರಂಪ್‌ ಹೇಳಿಕೆ ಸುಳ್ಳು ಅಮೆರಿಕದ ತಜ್ಞರ ಪ್ರತಿಪಾದನೆ

12:40 PM Jul 07, 2020 | mahesh |

ವಾಷಿಂಗ್ಟನ್‌: ಶೇ.99ರಷ್ಟು ಕೋವಿಡ್ ಪ್ರಕರಣಗಳು ಅಪಾಯಕಾರಿಯಲ್ಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಇತ್ತೀಚಿನ ಹೇಳಿಕೆ ಸತ್ಯಕ್ಕೆ ದೂರವಾದುದು. ವಾಸ್ತವಾಂಶವನ್ನು ಮುಚ್ಚಿಡುವ ಮತ್ತು ಈ ಸೋಂಕಿನ ತೀವ್ರತೆಯನ್ನು ಕೀಳಂದಾಜಿಸುವ ಯತ್ನ ಅವರ ಹೇಳಿಕೆಯಲ್ಲಿ ಎದ್ದು ಕಾಣುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಕೋವಿಡ್ ಗೆ ಸಂಬಂಧಿಸಿದ ಅವರ ಹೇಳಿಕೆಗಳು ವಾಸ್ತವಾಂಶಕ್ಕೆ ದೂರವಾಗಿವೆ ಎನ್ನುತ್ತಾರೆ ತಜ್ಞರು. ಆರಂಭದಿಂದಲೂ ಅವರು ದೇಶದಲ್ಲಿ ಕೋವಿಡ್ ನಿಯಂತ್ರ­ಣ­ದಲ್ಲಿದೆ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ, ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಬರುತ್ತಿದೆ. ಕಳೆದ ಶನಿವಾರ ಟ್ವೀಟ್‌ ಮಾಡಿ, ದೇಶದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಯಾರಿಗಾದರೂ, ವೆಂಟಿಲೇಟರ್‌ ಬೇಕೇ ಎಂದು ಕೇಳಿದ್ದರು. ಆದರೆ, ವಾಸ್ತವಿಕವಾಗಿ ದೇಶದ ಕೆಲ ಭಾಗಗಳಲ್ಲಿ ವೆಂಟಿಲೇಟರ್‌ಗೆ ಬೇಡಿಕೆ ಇದೆ ಎನ್ನುತ್ತಾರೆ ತಜ್ಞರು.

ಇದೇ ವೇಳೆ, ಕಳೆದೊಂದು ವಾರದ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ|ಅಂಥೋನಿ ಫೌಸಿ ತಿಳಿಸಿದ್ದಾರೆ. ಅಲ್ಲದೆ, ಕೆಲ ದಿನಗಳಲ್ಲಿ ಈ ವೈರಸ್‌ ಕಣ್ಮರೆಯಾಗಲಿದೆ ಎಂಬ ಟ್ರಂಪ್‌ ಹೇಳಿಕೆಯನ್ನು ಅವರು ಅಲ್ಲಗಳೆದಿದ್ದು, ಇಂತಹ ಹೇಳಿಕೆಗಳಿಗಿಂತ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಕ್ಕೆ ಮಾಸ್ಕ್ ಧರಿಸುವಂತಹ ಆರೋಗ್ಯಕಾರಿ ಕ್ರಮಗಳ ಜಾರಿ ಅಗತ್ಯ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next