Advertisement

ಮಂಗಳೂರಿಗೆ ರಾಷ್ಟ್ರಪತಿ ಭೇಟಿ ಖಚಿತ : ಶಿಷ್ಟಾಚಾರದಂತೆ ಅಗತ್ಯ ಕ್ರಮ: ಡಿಸಿ

02:37 AM Sep 30, 2021 | Team Udayavani |

ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಅ. 7, 8ರಂದು ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದು, ಭದ್ರತೆ ಸೇರಿದಂತೆ ಅಗತ್ಯ ಸಿದ್ಧತೆಗಳು ಆರಂಭಗೊಂಡಿವೆ.

Advertisement

ಬುಧವಾರ ಜಿಲ್ಲಾಡಳಿತದೊಂದಿಗೆ ಬೆಂಗಳೂರಿನಿಂದ ಏರ್ಪಡಿಸಲಾಗಿದ್ದ ವೀಡಿಯೋ ಸಂವಾದದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್‌ ಅವರಿಗೆ ಪೂರ್ವಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾಹಿತಿ ನೀಡಿದರು.

ರಾಷ್ಟ್ರಪತಿ ಭವನದ ನಿರ್ದೇಶನ ಹಾಗೂ ಶಿಷ್ಟಾಚಾರದಂತೆ ವಾಸ್ತವ್ಯ, ಊಟೋಪಚಾರ ಹಾಗೂ ಜತೆಗೆ ಆಗಮಿಸುವ ಅಧಿಕಾರಿಗಳು, ಸಿಬಂದಿಗೆ ವಸತಿ, ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು. ಆ್ಯಂಬುಲೆನ್ಸ್‌, ವೈದ್ಯರ ತಂಡ ಸಿದ್ಧವಿದೆ ಹಾಗೂ ಸಂಪರ್ಕ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಮುಖ್ಯವಾಗಿ ಕೋವಿಡ್‌ ನಿಯಮಾವಳಿ ಅನ್ವಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗು ವುದು. ಮೆಸ್ಕಾಂ ನಿಂದ ವಿದ್ಯುತ್‌ ಕಡಿತ ವಾಗದಂತೆ ಎಚ್ಚರ ವಹಿಸಲಾ ಗುವುದು ಎಂದು ಹೇಳಿದರು.

ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಡಿಸಿಪಿ ಹರಿರಾಮ್‌ ಶಂಕರ್‌,ಮೆಸ್ಕಾಂ ಎಂಡಿ ಪ್ರಶಾಂತ್‌ ಮಿಶ್ರ, ಎಸಿ ಮದನಮೋಹನ್‌, ಲೋಕೋಪ ಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಯಶವಂತ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಶಾಸಕರಿಂದ ಶ್ರೀ ಕಾಶೀ ಮಠಾಧೀಶರ ಭೇಟಿ

Advertisement

ರಾಷ್ಟ್ರಪತಿ ಭೇಟಿ
ರಾಷ್ಟ್ರಪತಿಯವರ ಸದ್ಯದ ಪ್ರವಾಸ ವೇಳಾಪಟ್ಟಿಯಂತೆ ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿಯ ಬಳಿಕ ಮೈಸೂರು ವಿಮಾನ ನಿಲ್ದಾಣ ದಿಂದ ಅ. 7ರಂದು ಸಂಜೆ 5.20ಕ್ಕೆ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ 6.10ಕ್ಕೆ ಆಗಮಿಸಿ 6.35ಕ್ಕೆ ನಗರಕ್ಕೆ ಆಗಮಿಸಿ ಖಾಸಗಿ ಹೊಟೇಲ್‌ ಅಥವಾ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಅ. 8ರಂದು ಬೆಳಗ್ಗೆ ಉಪಾಹಾರದ ಬಳಿಕ 10.45ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ಶೃಂಗೇರಿ ದೇವಸ್ಥಾನಕ್ಕೆ 11.40ಕ್ಕೆ ಹೋಗಿಶ್ರೀದೇವಿಯ ದರ್ಶನ ಪಡೆಯಲಿ ದ್ದಾರೆ. 3.15ಕ್ಕೆ ಶೃಂಗೇರಿಯಿಂದ ನಿರ್ಗಮಿಸಿ 3.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ, 4.10ಕ್ಕೆ ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡುವರು. ಅ. 9ರಂದು ಬೆಳಗಿನ ಉಪಾಹಾರ ಸ್ವೀಕರಿಸಿ 11 ಗಂಟೆಗೆ ಹೊರಟು 11.25ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊಸದಿಲ್ಲಿಗೆ ನಿರ್ಗಮಿಸಲಿದ್ದಾರೆ.

ಸಸ್ಯಾಹಾರಿ ಖಾದ್ಯಗಳು
ರಾಷ್ಟ್ರಪತಿಯವರು ಸಸ್ಯಾಹಾರಿ ಖಾದ್ಯಗಳನ್ನು ಸೇವಿಸಲಿದ್ದಾರೆ. ಆದ್ಯತಾ ಪಟ್ಟಿಯಲ್ಲಿ ಹಾಲು, ಹಣ್ಣು-ಹಂಪಲು, ತವಾ ಚಪಾತಿ, ಸಲಾಡ್‌, ಜ್ಯೂಸ್‌, ಗ್ರೀನ್‌ ಟೀ, ಸ್ಯಾಂಡ್‌ವಿಚ್‌ ಮುಂತಾದ ವುಗಳು ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next