ತೇಜ್‌ಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಸ್ಸಾಂನ ತೇಜ್‌ಪುರ ವಾಯುನೆಲೆಯಲ್ಲಿ ಯುದ್ಧ ವಿಮಾನದಲ್ಲಿ ತಮ್ಮ ಚೊಚ್ಚಲ ವಿಹಾರ ನಡೆಸಿದರು.
Advertisement
ಗ್ರೂಪ್ ಕ್ಯಾಪ್ಟನ್ ನವೀನ್ ಕುಮಾರ್ ತಿವಾರಿ ಅವರು ಭಾರತೀಯ ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದ ಸುಖೋಯ್-30 ಎಂಕೆಐನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆದೊಯ್ದರು.
ಅಸ್ಸಾಂಗೆ ಮೂರು ದಿನಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ಮುರ್ಮು ಅವರು ಗುವಾಹಟಿಯಿಂದ ತೇಜ್‌ಪುರ ತಲುಪಿದರು. ಏರ್ ಮಾರ್ಷಲ್ ಎಸ್‌ಪಿ ಧಾರ್ಕರ್, ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಏರ್ ಬೇಸ್‌ನಲ್ಲಿ ಬರಮಾಡಿಕೊಂಡರು.