Advertisement
ನಮ್ಮ ಇತಿಹಾಸದಲ್ಲಿ ಸಾಧಿಸದ ಹಲವು ಸಾಧನೆಗಳನ್ನು ಪೂರೈಸುವ, ಅತ್ಯಂತ ವಿಭಿನ್ನ ಹಂತದಲ್ಲಿ ನಾವಿದ್ದೇವೆ. ಎಲ್ಲರಿಗೂ ವಿದ್ಯುತ್, ಬಯಲು ಶೌಚ ನಿವಾರಣೆ, ಎಲ್ಲರಿಗೂ ಸೂರು ಒದಗಿಸುವುದು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.
Related Articles
ಸ್ವಾತಂತ್ರ್ಯೋತ್ಸವ ದಿನಾಚರಣೆಯ ನೇರ ಪ್ರಸಾರವನ್ನು ಟಿವಿ ಹಾಗೂ ಆನ್‌ಲೈನ್‌ನಲ್ಲಿ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಂಟರ್ನೆಟ್‌ನಲ್ಲಿ ಗೂಗಲ್ ಪುಟ ತೆರೆದರೆ ಸಾಕು, ಸ್ವಾತಂತ್ರ್ಯ ದಿನದ ಕಾರ್ಯಕ್ರಮ ನೇರ ಪ್ರಸಾರ ಆರಂಭವಾಗುತ್ತದೆ. ಈ ವ್ಯವಸ್ಥೆಯನ್ನು ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣಕ್ಕೂ ಮಾಡಲಾಗಿತ್ತು. ಇದರ ಜತೆಗೆ ಯೂಟ್ಯೂಬ್ ಹಾಗೂ ದೂರದರ್ಶನದಲ್ಲೂ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ದೂರದರ್ಶನದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕ್ರಮದ ನಿರೂಪಣೆಯನ್ನು ಕೆಂಪು ಕೋಟೆಯಲ್ಲೇ ಮಾಡಲಾಗುತ್ತಿದೆ.
Advertisement
ಆದಿತ್ಯ ಕುಮಾರ್ ಮತ್ತು ಔರಂಗಜೇಬ್‌ಗ ಶೌರ್ಯ ಚಕ್ರಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಮೇಜರ್ ಆದಿತ್ಯ ಕುಮಾರ್ ಹಾಗೂ ರೈಫಲ್‌ವುನ್ ಔರಂಗಜೇಬ್‌ಗ ಶೌರ್ಯಚಕ್ರ ಪುರಸ್ಕಾರ ನೀಡಲಾಗುತ್ತದೆ. ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಕಳೆದ ಜನವರಿಯಲ್ಲಿ ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಎನ್‌ಕೌಂಟರ್ ವೇಳೆ ಕಲ್ಲು ತೂರಾಟ ನಡೆಸಿದ ಮೂವರು ಸಾವನ್ನಪ್ಪಿದ್ದರು. ಮೇಜರ್ ಆದಿತ್ಯ ವಿರುದ್ಧ ಜಮ್ಮು-ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅನಂತರ ಆದಿತ್ಯ ತಂದೆ ಕರ್ನಲ್ ಕರಮ್‌ವೀರ್ ಸಿಂಗ್, ಪುತ್ರನ ಮೇಲಿನ ದೂರು ವಜಾಗೊಳಿಸುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ರೈಫಲ್‌ವುನ್ ಔರಂಗಜೇಬ್‌ಗ ಮರಣೋತ್ತರ ಶೌರ್ಯ ಚಕ್ರ ಘೋಷಿಸ ಲಾಗಿದ್ದು, ಇವರನ್ನು ಜೂನ್ 14ರಂದು ಪುಲ್ವಾಮಾದಲ್ಲಿ ಮನೆಗೆ ತೆರಳುತ್ತಿದ್ದಾಗ ಉಗ್ರರು ಅಪಹರಿಸಿ ಹತ್ಯೆಗೈದಿದ್ದರು. 131 ಸೇನಾ ಪದಕ ಘೋಷಣೆ: ದೇಶ ಕಾಯುವ ಸೇನೆ ಹಾಗೂ ಅರೆಸೇನಾ ಪಡೆಗಳ 131 ಯೋಧರಿಗೆ ವಿವಿಧ ಪುರಸ್ಕಾರಗಳನ್ನು ಘೋಷಿಸಲಾಗಿದೆ. ಓರ್ವ ಯೋಧರಿಗೆ ಕೀರ್ತಿ ಚಕ್ರ, 20 ಯೋಧರಿಗೆ ಶೌರ್ಯ, 96 ಯೋಧರಿಗೆ ಸೇನಾ ಪದ, 11 ನೌಕಾ ಪದಕ ಹಾಗೂ ಮೂರು ವಾಯು ಸೇನೆ ಪದಕಗಳನ್ನು ಪ್ರಕಟಿಸಲಾಗಿದೆ. ಸಿಪಾಯಿ ಬ್ರಹ್ಮಪಾಲ್ ಸಿಂಗ್‌ಗೆ ಮರಣೋತ್ತರ ಕೀರ್ತಿ ಚಕ್ರ ಘೋಷಿಸಲಾಗಿದೆ.