Advertisement

ಇಂದು 28 ಸಾಧಕಿಯರಿಗೆ ನಾರಿಶಕ್ತಿ ಪ್ರಶಸ್ತಿ ಪ್ರದಾನ

09:22 PM Mar 07, 2022 | Team Udayavani |

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ದೇಶದ 28 ಸಾಧಕಿಯರಿಗೆ ಮಾ.8ರ ಮಹಿಳಾ ದಿನಾಚರಣೆಯಂದು ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ರವರು ನಾರಿ ಶಕ್ತಿ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.

Advertisement

ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಲಿದ್ದಾರೆ.

2020 ಹಾಗೂ 2021ನೇ ವರ್ಷಕ್ಕೆ ತಲಾ 14 ಸಾಧಕಿಯರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಒಟ್ಟು 28 ಪ್ರಶಸ್ತಿಗಳು ಪ್ರದಾನವಾಗಲಿದೆ.

“ವಯಸ್ಸು, ಭೌಗೋಳಿಕ ಅಡೆತಡೆಗಳು, ಸಂಪನ್ಮೂಲಗಳನ್ನು ಹೊಂದಲು ಇರುವ ಅಡ್ಡಿಗಳನ್ನು ಮೀರಿ ಈ ಸಾಧಕಿಯರು ಗಣನೀಯ ಸಾಧನೆ ಮಾಡಿದ್ದಾರೆ.

ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆ, ಸಮಾಜಕ್ಕೆ ಸ್ಫೂರ್ತಿಯಾಗಿದ್ದು, ಲಿಂಗಭೇದ, ಅಸಮಾನತೆಯ ಪಿಡುಗನ್ನು ತೊಡೆದುಹಾಕಲು ಶಕ್ತವಾಗಿವೆ” ಎಂದು ಪ್ರಶಸ್ತಿಗಳನ್ನು ವಿತರಿಸುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯ ಈ ಮಹಿಳೆಯರನ್ನು ಬಣ್ಣಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next