ಮುಂಬಯಿ: 2017ರಲ್ಲಿ ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 18ನೇ ಶತಮಾನದ ಮೈಸೂರು ರಾಜ ಟಿಪ್ಪು ಸುಲ್ತಾನ್ ನನ್ನು ಹೊಗಳಿದ್ದು, ಭಾರತೀಯ ಜನತಾ ಪಕ್ಷ ಅವರು (ಕೋವಿಂದ್) ರಾಜೀನಾಮೆ ಕೊಡಲಿ ಎಂದು ಕೇಳುತ್ತದೆಯೇ ಎಂಬುದಾಗಿ ಶಿವಸೇನಾ ಮುಖಂಡ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಗೆಳೆಯನೊಂದಿಗೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜೆಎಫ್ ಬೆಡಗಿ
ಮುಂಬಯಿಯ ಕ್ರೀಡಾ ಸಮುಚ್ಛಯಕ್ಕೆ ಮಹಾರಾಷ್ಟ್ರ ಸರ್ಕಾರ 18ನೇ ಶತಮಾನದ ಮೈಸೂರು ರಾಜ ಟಿಪ್ಪು ಸುಲ್ತಾನ್ ಹೆಸರು ಇಡಲು ಮುಂದಾಗಿದ್ದು, ಇದಕ್ಕೆ ಭಾರತೀಯ ಜನತಾ ಪಕ್ಷ ಮತ್ತು ಬಜರಂಗದಳ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾವತ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.
ಕರ್ನಾಟಕ ವಿಧಾನಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟಿಪ್ಪು ಸುಲ್ತಾನ್ ಬಗ್ಗೆ ಹೊಗಳಿದ್ದರು. ಈಗ ನೀವು (ಬಿಜೆಪಿ) ರಾಷ್ಪ್ರಪತಿ ಕೋವಿಡ್ ಅವರ ರಾಜೀನಾಮೆಯನ್ನೂ ಕೇಳಬೇಕಲ್ಲವೇ? ಇದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ರಾವತ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ತಮಗೆ ಮಾತ್ರ ಇತಿಹಾಸದ ಜ್ಞಾನ ಇದೆ ಎಂದು ಬಿಜೆಪಿ ಆಲೋಚಿಸುತ್ತಿದೆ. ಪ್ರತಿಯೊಬ್ಬರು ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ, ಈ ಇತಿಹಾಸಕಾರರು ಇಲ್ಲಿಯೂ (ಮಹಾರಾಷ್ಟ್ರ) ಇತಿಹಾಸ ಬದಲಾಯಿಸಲು ಹೊರಟಿದ್ದಾರೆ. ನಮಗೆ ಟಿಪ್ಪು ಸುಲ್ತಾನ್ ಬಗ್ಗೆ ಗೊತ್ತಿದೆ. ಬಿಜೆಪಿಯಿಂದ ನಮಗೆ ಪಾಠ ಕಲಿಯಬೇಕಾಗಿಲ್ಲ ಎಂದು ರಾವತ್ ತಿರುಗೇಟು ನೀಡಿದ್ದಾರೆ.