Advertisement

ಎಲ್ಲರೂ “ಭಾರತೀಯತೆ’ಆಚರಿಸೋಣ: ರಾಷ್ಟ್ರಪತಿ ಕೋವಿಂದ್‌

12:12 AM Jan 26, 2022 | Team Udayavani |

ಹೊಸದಿಲ್ಲಿ: ಈ ಗಣರಾಜ್ಯೋತ್ಸವದಂದು ದೇಶವಾಸಿಗಳೆಲ್ಲರೂ “ಭಾರತೀಯತೆ’ಯನ್ನು ಆಚರಿಸುವಂತೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕರೆ ನೀಡಿದ್ದಾರೆ.

Advertisement

73ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ಮಾನವತೆಗೆ ಎದುರಾದ ಅತೀ ದೊಡ್ಡ ಸವಾಲನ್ನು ಅತ್ಯಂತ ದೃಢಚಿತ್ತದಿಂದ ದೇಶವು ಎದುರಿಸಿದೆ. ಇದು ಬಲಿಷ್ಠ ಹಾಗೂ ಸೂಕ್ಷ್ಮಸಂವೇದನೆಯ ಭಾರತವು ಉದಯಿಸುತ್ತಿರುವುದನ್ನು ತೋರಿಸಿದೆ’ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಕೋವಿಂದ್‌ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಇದು ರಾಷ್ಟ್ರಪತಿಯಾಗಿ ಅವರ ಕೊನೆಯ ಭಾಷಣವಾಗಿದೆ. ಪ್ರಜಾಸತ್ತೆ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಭಾರತದ ಅಡಿಪಾಯವಾಗಿದೆ. ನಮ್ಮ ಪ್ರಜಾಪ್ರಭುತ್ವದ ವೈವಿಧ್ಯತೆಯನ್ನು ಇಡೀ ಜಗತ್ತೇ ಶ್ಲಾ ಸುತ್ತದೆ. ಈ ಏಕತೆ ಮತ್ತು ಒಂದು ದೇಶ ಎಂಬ ಭಾವನೆಯನ್ನೇ ನಾವು ಪ್ರತೀ  ವರ್ಷ ಗಣರಾಜ್ಯದಿನವನ್ನಾಗಿ ಆಚರಿಸುತ್ತೇವೆ. ಈ ವರ್ಷ ಕೊರೊನಾದಿಂದಾಗಿ ಸಂಭ್ರಮವು ತಗ್ಗಿರಬಹುದು. ಆದರೆ ನಮ್ಮಲ್ಲಿನ ಶಕ್ತಿ-ಸ್ಫೂರ್ತಿ ಎಂದಿನಂತೆಯೇ ಬಲಿಷ್ಠವಾಗಿದೆ ಎಂದೂ ರಾಷ್ಟ್ರಪತಿ ಹೇಳಿದ್ದಾರೆ.

ಇದನ್ನೂ ಓದಿ:73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

ಕೊರೊನಾ ವೀರರಿಗೆ ನಮನ:  ಸೋಂಕಿನ ಸಮಯದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ವೈದ್ಯರು, ನರ್ಸ್‌ಗಳು, ಅರೆವೈದ್ಯಕೀಯ ಸಿಬಂದಿಯನ್ನು ರಾಷ್ಟ್ರಪತಿ ಶ್ಲಾ ಸಿದ್ದಾರೆ. ಕೃಷಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿನ ಸುಧಾರಣೆಯಿಂದ ಪರಿಣಾಮಕಾರಿ ಆರ್ಥಿಕ ಸಾಧನೆ ಸಾಧ್ಯವಾಗಿದೆ. ಈ ವರ್ಷ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಸಶಕ್ತೀಕರಣ ಆಗಿರುವುದು ಅತ್ಯಂತ ಖುಷಿಯ ಸಂಗತಿ ಎಂದೂ ಹೇಳಿದ್ದಾರೆ ಕೋವಿಂದ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next