Advertisement

ರಷ್ಯಾಕ್ಕೆ ಉಗ್ರ ಪಟ್ಟ ಕಟ್ಟಿ; ಅಮೆರಿಕ ಅಧ್ಯಕ್ಷ ಬೈಡನ್‌ಗೆ ಮನವಿ ಮಾಡಿದ ಉಕ್ರೇನ್‌ ಅಧ್ಯಕ್ಷ

11:53 PM Apr 16, 2022 | Team Udayavani |

ಕೀವ್‌: ಉಕ್ರೇನ್‌ ಮೇಲೆ ಯುದ್ಧ ಸಾರುವುದರ ಜತೆಗೆ ಅನೇಕ ಯುದ್ಧಾಪರಾಧಗಳನ್ನು ಮಾಡಿ ರುವ ರಷ್ಯಾವನ್ನು ಉಗ್ರವಾದಕ್ಕೆ ಪ್ರಾಯೋಜಕತ್ವ ನೀಡುವ ರಾಷ್ಟ್ರವೆಂಬ ಹಣೆಪಟ್ಟಿ ಕಟ್ಟಬೇಕು ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅಮೆರಿಕವನ್ನು ಆಗ್ರಹಿಸಿದ್ದಾರೆ.

Advertisement

ಉಕ್ರೇನ್‌ ಮೇಲಿನ ರಷ್ಯಾ ಯುದ್ಧ 52ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಶನಿವಾರದಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ರವರಿಗೆ ಕರೆ ಮಾಡಿದ ಝೆಲೆನ್‌ಸ್ಕಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, ರಷ್ಯಾಕ್ಕೆ ಉಗ್ರವಾದ ಪ್ರಾಯೋಜಕತ್ವ ನೀಡುವ ದೇಶವೆಂಬ ಹಣೆಪಟ್ಟಿ ಕಟ್ಟಬೇಕು.

ವಿಶ್ವಮಟ್ಟದಲ್ಲಿ ರಷ್ಯಾವನ್ನು ಏಕಾಂಗಿಯಾಗಿಸಲು ಅದು ನೆರವಾಗಬಹುದು ಎಂದು ಆಗ್ರಹಿಸಿದ್ದಾರೆ.ಇದಲ್ಲದೆ, ಉಕ್ರೇನ್‌ಗೆ ಅಗತ್ಯವಿರುವ ಮತ್ತಷ್ಟು ಸೇನಾ ಸವಲತ್ತುಗಳ ಬಗ್ಗೆ ಇದೇ ವೇಳೆ ಚರ್ಚೆ ನಡೆಸಲಾಯಿತು. ಝೆಲೆನ್‌ಸ್ಕಿ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಬೈಡನ್‌, ಮೊದಲು ಶಸ್ತ್ರಾಸ್ತ್ರ ಪೂರೈಕೆಗೆ ಆದ್ಯತೆ ನೀಡಬೇಕೆಂದು ಸೂಚಿಸಿದ್ದು, ರಷ್ಯಾಕ್ಕೆ ಹಣೆಪಟ್ಟಿ ಕಟ್ಟುವ ಬಗ್ಗೆ ಮುಂದೆ ನಿರ್ಧರಿಸುವುದಾಗಿ ಹೇಳಿದ್ದಾರೆ ಎಂದು ಈ ಬೆಳವಣಿಗೆಯನ್ನು ಬಲ್ಲ ಮೂಲಗಳು ತಿಳಿಸಿವೆ.

ಪರಮಾಣು ಬಳಸಬಹುದು ಜಾಗ್ರತೆ: ರಷ್ಯಾವು ಯಾವುದೇ ಕ್ಷಣದಲ್ಲಿ ತನ್ನಲ್ಲಿನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆಗಳಿವೆ. ಹಾಗಾಗಿ, ಜಗತ್ತಿನ ಎಲ್ಲ ರಾಷ್ಟ್ರಗಳು ಎಚ್ಚರಿಕೆಯಿಂದ ಇರಬೇಕು ಎಂದು ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಸಿಎನ್‌ಎನ್‌ಗೆ ನೀಡಿರುವ ಸಂದರ್ಶ ನದಲ್ಲಿ ಮಾತನಾಡಿದ ಅವರು, ಪರಮಾಣು ಶಸ್ತ್ರಾಸ್ತ್ರಗಳ ಜತೆಗೆ ರಾಸಾಯನಿಕ ಅಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಾವೇರಿ,ಗದಗ : ಸಿಡಿಲು ಬಡಿದು ಇಬ್ಬರು ಸಾವು, ಇಬ್ಬರಿಗೆ ಗಾಯ

Advertisement

ಸೇನಾ ಸಾಮಗ್ರಿ ಕಾರ್ಖಾನೆ ಮೇಲೆ ದಾಳಿ: ಉಕ್ರೇನ್‌ನ ರಾಜಧಾನಿ ಕೀವ್‌ನಗರದಲ್ಲಿರುವ ಸೇನಾ ಕಾರ್ಖಾನೆ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿವೆ. ಯುದ್ಧ ವಿಮಾನಗಳಿಗೆ ಬೇಕಾದ ಬಿಡಿಭಾಗಗಳ ತಯಾರಿ ಹಾಗೂ ರಿಪೇರಿಗಳು ಈ ಕಾರ್ಖಾನೆಯಲ್ಲಿ ನಡೆಯುತ್ತಿತ್ತು. ಇದೀಗ ಧ್ವಂಸಗೊಂಡಿದೆ ಎಂದು ಕೀವ್‌ನ ಮೇಯರ್‌ ವಿಟಾಲಿ ಕ್ಲಿಟ್ಸ್‌ಚೊRà ತಿಳಿಸಿದ್ದಾರೆ. ಅಲ್ಲದೆ, ಕೀವ್‌ ನಗರದ ಮೇಲೆ ಇನ್ನಷ್ಟು ದಾಳಿಗಳಾಗಬಹುದು ಎಂದು ಅವರು ಹೇಳಿದ್ದಾರೆ.

ಬೋರಿಸ್‌ ಜಾನ್ಸನ್‌ಗೆ ನಿಷೇಧ
ಮಹತ್ವದ ಬೆಳವಣಿಗೆಯೊಂದರಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನ ಪ್ರಧಾನಿ ಬೋರಿಸ್‌ ಜಾನ್ಸನ್‌ ಹಾಗೂ ಯು.ಕೆ. ಸರಕಾರದ ಅನೇಕ ಹಿರಿಯ ಅಧಿಕಾರಿಗಳಿಗೆ ರಷ್ಯಾ ಪ್ರವೇಶಿಸದಂತೆ ನಿಷೇಧ ಹೇರಿರುವುದಾಗಿ ಪುತಿನ್‌ ಸರಕಾರ ಪ್ರಕಟಿಸಿದೆ. ಇತ್ತೀಚೆಗೆ, ರಷ್ಯಾದ ಅಧ್ಯಕ್ಷ ಪುತಿನ್‌ ಹಾಗೂ ಉನ್ನತ ಅಧಿಕಾರಿಗಳ ಮೇಲೆ
ಯು.ಕೆ. ನಿಷೇಧ ಹೇರಿತ್ತು. ಅದಕ್ಕೆ ಪ್ರತಿಯಾಗಿ, ರಷ್ಯಾ ಈ ನಿರ್ಧಾರ ಕೈಗೊಂಡಿದೆ.

ಸಮರಾಂಗಣದಲ್ಲಿ
-ಕೀವ್‌ ನಗರದ ಮಿಲಿಟರಿ ಕಾರ್ಖಾನೆಯ ಮೇಲೆ ರಷ್ಯಾ ದಾಳಿ.
-ಮರಿಯುಪೋಲ್‌ನ “ಎಕ್ಸಿಟ್‌ ವೇ’
ಗಳನ್ನು ಮುಚ್ಚಲು ಮುಂದಾದ ರಷ್ಯಾ.
-ರಷ್ಯಾಕ್ಕೆ ಉಗ್ರವಾದಿ ಪ್ರಾಯೋಜಕತ್ವ ಹಣೆಪಟ್ಟಿ ಕಟ್ಟಲು ಉಕ್ರೇನ್‌ ಅಧ್ಯಕ್ಷರ ಆಗ್ರಹ.
-ಬೋರಿಸ್‌ ಜಾನ್ಸನ್‌ಗೆ ನಿಷೇಧ ಹೇರಿದ ರಷ್ಯಾ ಸರಕಾರ.
-24 ಗಂಟೆಗಳಲ್ಲಿ ಉಕ್ರೇನ್‌ನಿಂದ 40 ಸಾವಿರ ನಿರಾಶ್ರಿತರು ನೆರೆ ದೇಶಗಳಿಗೆ.
-ಮರಿಯೋಪೋಲ್‌ ನಗರವನ್ನು ಮತ್ತೆ ಕಟ್ಟುವೆ ಎಂದ ಉಕ್ರೇನ್‌ನ ದೈತ್ಯ ಉದ್ಯಮಿ.

Advertisement

Udayavani is now on Telegram. Click here to join our channel and stay updated with the latest news.

Next