Advertisement
ಗಂಗಾ ಕಲ್ಯಾಣ ಯೋಜನೆಯಲ್ಲಿ ಕಳೆದ 2 ವರ್ಷಗಳಲ್ಲಿ 150 ಫಲಾನುಭವಿಗಳು ಕೊರೆಸಿದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕುಡಿಯುವ ನೀರಿನ 100 ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 740 ಪರಿವರ್ತಕಗಳನ್ನು ಬದಲಾಯಿಸಿದ್ದು, ಹೆಚ್ಚುವರಿಯಾಗಿ 427 ಪರಿವರ್ತಕಗಳನ್ನು ಅಳವಡಿಸಲಾಗಿದೆ. ತಾಲೂಕಿನಲ್ಲಿ ಪರಿವರ್ತಕಗಳ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದರು.
Related Articles
Advertisement
ಬಿಸಿಯೂಟ ಸಮಸ್ಯೆ ನಿವಾರಿಸಿ: ಶಾಲಾ ಮಕ್ಕಳಿಗೆ ನೀಡುತ್ತಿರು ಬಿಸಿಯೂಟದ ಆಹಾರ ಪದಾರ್ಥಗಳಿಗೆ ಇಲಾಖೆಯಲ್ಲಿ ಮೇಲಾಧಿಕಾರಿಗಳೇ ಕತ್ತರಿ ಹಾಕುತ್ತಿದ್ದು ಕುರಿ ಕಾಯಲು ತೋಳವನ್ನು ನೇಮಿಸಿದಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಕೆಳಮಟ್ಟದ ಅಧಿಕಾರಿಗಳು ಶಾಲೆಯ ಶಿಕ್ಷಕರು ಜನಪ್ರತಿನಿಧಿಗಳಿಂದ ಆರೋಪಕ್ಕೆ ಗುರಿಯಾಗಿದ್ದಾರೆ ಎಂದು ತಾಪಂ ಉಪಾಧ್ಯಕ್ಷ ಲಿಂಗರಾಜು ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಭೋಜನಾಯ್ಕ ತಾಲೂಕಿನ ಅನೇಕ ಶಾಲೆಗಳಿಗೆ ಬಿಸಿಯೂಟದ ಆಹಾರ ಪದಾರ್ಥ ಗಳನ್ನು ನೀಡುವಾಗ ಕಡಿಮೆ ಪ್ರಮಾಣದಲ್ಲಿ ಸ್ಥಳೀಯ ಅಧಿಕಾರಿಗಳು ನೀಡುತ್ತಾರೆ. ನಮ್ಮ ಗ್ರಾಮದ ಶಾಲೆಗೆ ಆಹಾರ ಪದಾರ್ಥ ಬಂದಾಗ 38ಕೇಜಿ ಅಕ್ಕಿ ,4ಕೇಜಿ ಬೆಳೆ ಕಡಿಮೆ ಇದ್ದಿದ್ದು ಕಂಡು ಬಂದಿದೆ.
ಈ ಬಗ್ಗೆ ಶಿಕ್ಷಣ ಇಲಾಖೆ ಜಿಲ್ಲೆಯ ಮೇಲಾಧಿಕಾರಿ ಅವರಿಗೆ ದೂರವಾಣಿ ಮೂಲಕ ಹೇಳಿದಾಗ ಶಿಕ್ಷಕರಿಗೆ ಮೇಲಾಧಿಕಾರಿಗಳೇ ಬೆದರಿಕೆ ಹಾಕಿ ಕೊಟ್ಟಿದ್ದನ್ನ ಬೇಯಿಸಿ ಹಾಕಿ ಇಲ್ಲದ ಉಸಾಬರಿ ನಿಮಗೇಕೆ? ತಾಪಂ ಸದಸ್ಯರಿಗೇಕೆ ಈ ವಿಚಾರ ಮುಟ್ಟಿಸಿದ್ದೀರಿ ಎಂದು ಬಿಸಿಯೂಟದ ಮೇಲಾಧಿಕಾರಿಗಳೇ ಶಿಕ್ಷಕರನ್ನು ಬೆದರಿಸಿದ್ದಾರೆ. ಇಂತಹ ಅಧಿಕಾರಿಗಳು ಇಲಾಖೆಯಲ್ಲಿ ಇರುವವರೆಗೆ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆ ಎಲ್ಲಿ ಸಫಲವಾಗಲು ಸಾಧ್ಯ ಎಂದು ಪ್ರಶ್ನಿಸಿದರು.
ಮಕ್ಕಳಿಗೆ ಸರ್ಕಾರ ನೀಡುವ ಆಹಾರ ಪದಾರ್ಥಗಳಿಗೆ ಕನ್ನ ಹಾಕುತ್ತಿದ್ದರೂ ಯಾವುದೇ ಶಿಕ್ಷಕರು ಈ ಬಗ್ಗೆ ದೂರಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಉಪಾಧ್ಯಕ್ಷರು ಹಾಗೂ ಸದಸ್ಯರು ಒತ್ತಾಯಿಸಿದರು. ಸಾಮಾನ್ಯಸಭೆಯಲ್ಲಿ ತಾಪಂಉಪಾಧ್ಯಕ್ಷ ಶ್ಯಾನೇಗೆರೆ ಲಿಂಗರಾಜು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ತಮ್ಮ ಇಲಾಖೆಯ ಪ್ರಗತಿ ಕುರಿತು ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಕುಡಿಯುವ ನೀರಿನ ಸಮಸ್ಯೆ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಟ್ಯಾಂಕರ್ ಮೂಲಕ ಕಳೆದ 3 ವರ್ಷಗಳಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ನಲ್ಲಿ ಪೂರೈಕೆ ಮಾಡಿದ ಬಾಬ್ತು 5.46 ಕೋಟಿ ರೂ . ಖರ್ಚು ಮಾಡಲಾಗಿದೆ. ಇನ್ನೂ 1. 77 ಕೋಟಿ ರೂ. ಬಾಕಿ ಹಣವನ್ನು ನೀಡಬೇಕಾಗಿದೆ.
ಈಗ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಇದರಿಂದ ಗ್ರಾಮೀಣ ಜನರಿಗೆ ಕುಡಿಯುವ ನೀರನ್ನು ಪೂರೈಸುವುದು ಹೇಗೆ ಎಂದು ಸದಸ್ಯ ನೇರ್ಲಿಗೆ ವಿಜಯಕುಮಾರ್, ಜಾವಗಲ್ ಪ್ರಭಾಕರ್ ಕೊಳಗುಂದ ಬಸವರಾಜು, ಜೆ.ಪಿ.ಪುರ ಮಹೇಶ್ವರಪ್ಪ, ಕರಗುಂದ ಪ್ರಕಾಶ್ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತಾಪಂ ಇಒ ಕೃಷ್ಣಮೂರ್ತಿ, ಗ್ರಾಮೀಣ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಿದ್ದು, ಇದರಲ್ಲಿ ಯಾವುದೇ ರೀತಿ ಲೋಪ ಎಸಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಆಕ್ಷೇಪಣೆ ಮಾಡಿಲ್ಲ. ಬದಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಯನ್ನು ನಿಲ್ಲಿಸಿ ಕೊಳವೆ ಬಾವಿಗಳಿಂದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಈಗಾಗಲೇ ಬಾಕಿ ಉಳಿದಿರುವ ಹಣವನ್ನು ಪರಿಶೀಲನೆ ನಡೆಸಿ ನೀಡಲಾಗುತ್ತದೆ ಯಾವುದೇ ಕಾರಣಕ್ಕೆ ತಡೆಹಿಡಿಯುವುದಿಲ್ಲ ಎಂದರು.