Advertisement

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

10:45 PM Apr 16, 2024 | Team Udayavani |

ಧಾರವಾಡ: ಮದ್ಯ ಶೋಧನೆಗೆ ಹೋದವರಿಗೆ ಕಂತೆ-ಕಂತೆಯಾಗಿ ಕೋಟಿಗಟ್ಟಲೇ ನಗದು ಹಣ ಪತ್ತೆಯಾದ ಘಟನೆ ನಗರದ ದಾಸನಕೊಪ್ಪ ವೃತ್ತದ ಬಳಿಯ ನಾರಾಯಣಪೂರ 2ನೇ ಮುಖ್ಯ ರಸ್ತೆಯ ಅರ್ನಾ ರೆಸಿಡೆನ್ಸಿಯಲ್ಲಿ ಮಂಗಳವಾರ ನಡೆದಿದೆ.

Advertisement

ಚುನಾವಣೆ ಹಿನ್ನಲೆಯಲ್ಲಿ ಅರ್ನಾ ರೆಸಿಡೆನ್ಸಿಯ 2ನೇ ಪ್ಲೋರ್‌ನಲ್ಲಿ ಇರುವ 303 ನಂಬರ್ ಮನೆಯಲ್ಲಿ ಮದ್ಯ ದಾಸ್ತಾನು ಮಾಡಲಾಗಿದೆ ಎಂಬ ಅನಾಮಧೇಯ ಕರೆಯೊಂದು ಅಬಕಾರಿ ಇಲಾಖೆಗೆ ಬಂದಿದೆ. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಅಧಿಕಾರಿಗಳು ತಂಡವು ಮದ್ಯ ಶೋಧನೆ ಕೈಗೊಂಡಿದೆ. ಈ ವೇಳೆ ಮದ್ಯದ ಬದಲು ಕೋಟಿಗಟ್ಟಲೇ ಕಂತೆ-ಕಂತೆಯಷ್ಟು ನಗದು ಹಣ ಪತ್ತೆಯಾಗಿದೆ. ಹೀಗಾಗಿ ಈ ಬಗ್ಗೆ ಹು-ಧಾ ಪಶ್ಚಿಮ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಪ್ರಿಯಾಂಗಾ ಎಂ. ಅವರಿಗೆ ಮಾಹಿತಿ ಕೊಡಲಾಗಿದೆ. ಈ ಮಾಹಿತಿ ಅನ್ವಯ ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿ ತಂಡದ ಅಽಕಾರಿಗಳೊಂದಿಗೆ ಆಗಮಿಸಿದಲ್ಲದೇ ಹಣದ ಮಾಹಿತಿ ಕಲೆ ಹಾಕಿದ್ದಾರೆ. ಆದರೆ 10 ಲಕ್ಷಕ್ಕಿಂತ ಮೀರಿದ ಹಣ ಪತ್ತೆಯಾದ ಕಾರಣ ಈ ಬಗ್ಗೆ ಐಟಿ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ.

ಇದರ ಅನ್ವಯ ಐಟಿ ಅಽಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿದ್ದು, ಹಣ ಹಸ್ತಾಂತರ ಪ್ರಕ್ರಿಯೆ ಕೈಗೊಂಡಿದ್ದಾರೆ. ಇನ್ನು ರಾಜ್ಯ ಕಾಂಗ್ರೆಸ್ ನಾಯಕರೊಬ್ಬರ ಆಪ್ತ ಉದ್ಯಮಿ, ಗುತ್ತಿಗೆದಾರ ಯು.ಬಿ.ಶೆಟ್ಟಿ ಅವರ ಸಹಾಯಕ ಬಸವರಾಜ ದತ್ತಾ ಈ ಹಣದೊಂದಿಗೆ ಸಿಕ್ಕಿ ಬಿದ್ದಿದ್ದಾರೆ.

18 ಕೋಟಿಗೂ ಅಧಿಕಾರ ?: ರೆಸಿಡೆನ್ಸಿಯಲ್ಲಿ ಬಾಡಿಗೆ ಮನೆ ಮಾಡಲಾಗಿದ್ದು, ಈ ಮನೆಯಲ್ಲಿ ಮೂರು ಲಾಕರ್, ಒಂದು ಟೇಬಲ್, ಕುರ್ಚಿ ಬಿಟ್ಟರೆ ಬೇರೇನೂ ಇಲ್ಲ. ಆಗಾಗ ಬಸವರಾಜ ದತ್ತಾ ಈ ಮನೆಗೆ ಭೇಟಿ ನೀಡುತ್ತಿದಲ್ಲದೇ ವಾಸವಾಗಿದ್ದಾರೆ. ಅನಾಮಧೇಯ ಕರೆಯ ಮೇರೆಗೆ ಮದ್ಯ ಶೋಧನೆಗೆ ಬಂದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮೂರು ಲಾಕರ್‌ಗಳಲ್ಲಿ ಕೋಟಿ ಕೋಟಿಯಷ್ಟು ಹಣ ಪತ್ತೆಯಾಗಿದೆ. 18 ಕೋಟಿ ಹಣ ಇರುವ ಬಗ್ಗೆ ಬಸವರಾಜ ದತ್ತಾ ಅಧಿಕಾರಿಗಳಿಗೆ ಅಽಕೃತ ಮಾಹಿತಿ ನೀಡಿದ್ದು, ಆದರೆ ಅಽಕಾರಿಗಳ ಅಂದಾಜಿನ ಪ್ರಕಾರ ಅದಕ್ಕಿಂತಲೂ ಹೆಚ್ಚು ಹಣ ಇದೆ ಎನ್ನಲಾಗಿದೆ. ಹೀಗಾಗಿ ಸಿಕ್ಕಿರುವ ಕೋಟಿಗಟ್ಟಲೇ ನಗದು ಹಣವನ್ನು ಹಣ ಎಣಿಸುವ ಯಂತ್ರಗಳ ಸಹಾಯದಿಂದ ಲೆಕ್ಕ ಹಾಕುವ ಕಾರ್ಯದಲ್ಲಿ ಐಟಿ ಅಧಿಕಾರಿಗಳು ತೊಡಗಿಕೊಂಡಿದ್ದು, ಸ್ಥಳದಲ್ಲಿ ಚುನಾವಣಾ ಅಧಿಕಾರಿಗಳೂ ಇದ್ದಾರೆ. ಇದಲ್ಲದೇ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಲ್ಲದೇ, ಬಂದೋಬಸ್ತ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next