ನವದೆಹಲಿ/ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಪ್ರಸಿದ್ಧ “ಗೀತಾ ಪ್ರಸ್’ ನ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ (87) ಭಾನುವಾರ ನಿಧನರಾಗಿದ್ದಾರೆ.
15 ದಿನಗಳಿಂದ ಅವರು ಅನಾರೋಗ್ಯಪೀಡಿತರಾಗಿದ್ದರು. ಅವರು ವಾರಾಣಸಿಯಲ್ಲಿರುವ ಹರೀಶ್ವರ ಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆಯೆಯನ್ನೂ ನಡೆಸಲಾಗಿದೆ.
40 ವರ್ಷಗಳ ಕಾಲ ಅವರು ಧಾರ್ಮಿಕ ಕ್ಷೇತ್ರದ ವಿವಿಧ ಪತ್ರಿಕೆಗಳಿಗೆ ಅವರು ಸಂಪಾದಕರಾಗಿದ್ದರು. ಇದರ ಜತೆಗೆ ನಾಲ್ಕು ದಶಕಗಳ ಕಾಲ ಗೀತಾ ಪ್ರಸ್‌ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಜಗತ್ತಿನಾದ್ಯಂತ ಅದರ ಪ್ರಕಟಣೆಗಳು ಜನಪ್ರಿಯವಾಗುವಂತೆ ಮಾಡಿದ್ದರಲ್ಲಿ ಅವರ ಕೊಡುಗೆ ಇದೆ.
ಇದನ್ನೂ ಓದಿ :ನನಗೆಷ್ಟೇ ನೋವಾದ್ರೂ ಮುಜುಗರ ತರುವ ಹೇಳಿಕೆ ನೀಡಲಿಲ್ಲ: ಸಚಿವ ಶಂಕರ್
ಖೇಮ್ಕಾ ನಿಧನದ ಬಗ್ಗ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. “ಖೇಮ್ಕಾ ಹಲವಾರು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸನಾತನ ಸಾಹಿತ್ಯವನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಅವರ ಅಗಲುವಿಕೆಯ ದುಃಖ ಭರಿಸಲು ಕುಟುಂಬ ಸದಸ್ಯರಿಗೆ ಶಕ್ತಿ ಸಿಗಲಿ’ ಎಂದು ಟ್ವೀಟ್ ಮಾಡಿದ್ದಾರೆ.