ಮಾಲೆ: ಭಾರತಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಮಾಲ್ದೀವ್ಸ್ ಅಧ್ಯಕ್ಷ ಮೊಹಮದ್ ಮುಯಿಜ್ಜು ಅವರು ತಮ್ಮ ದೇಶದಲ್ಲಿ ಭಾರತದ ಯುಪಿಐ ಪಾವತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ್ದಾರೆ. ಈ ಮೂಲಕ ಭಾರತದ ಜತೆಗಿನ ಸಂಬಂಧವನ್ನು ಸುಧಾರಿಸುವ ಪ್ರಯತ್ನವನ್ನು ನಡೆಸಿದ್ದಾರೆ.
ದ್ವೀಪ ರಾಷ್ಟ್ರದಲ್ಲಿ ಯುಪಿಐ ಅನು ಷ್ಠಾನವನ್ನು ಟ್ರೇಡ್ ನೆಟ್ ಮಾಲ್ದೀವ್ಸ್ ಕಾರ್ಪೋರೇಶನ್ ಲಿಮಿಟೆಡ್‌ಗೆ ವಹಿಸಿದ್ದಾರೆ. ಈ ನಡೆ ದೇಶ ವಾಸಿಗಳ ಆರ್ಥಿಕ ಸಶಕ್ತೀಕರಣಕ್ಕೆ ನೆರವಾಗಲಿದೆ ಎಂದು ಕೂಡ ಅವರು ತಿಳಿಸಿದ್ದಾರೆ. ಮಾಲ್ದೀವ್ಸ್ ದೇಶದ ಆರ್ಥಿಕ ಬೆಳವಣಿಗೆ ವಿದೇಶಿ ಪ್ರವಾಸಿಗರ ಮೇಲೆ ಅವಲಂಬಿತ ವಾಗಿದ್ದು ಶೇ.30ರಷ್ಟು ಜಿಡಿಪಿ ಇದರಿಂದಲೇ ಹರಿದುಬರುತ್ತಿದೆ.
ಆದರೆ ಕಳೆದ ವರ್ಷ ಅಧಿಕಾರಕ್ಕೆ ಬಂದ ಮುಯಿಜ್ಜು ಭಾರತ ವಿರೋಧಿ ನೀತಿ ಹೊಂದಿದ್ದರು. ಇದರಿಂದಾಗಿ ಆ ದೇಶಕ್ಕೆ ಭಾರತೀಯ ಪ್ರವಾಸಿಗರು ಭೇಟಿ ಕೊಡುವುದು ಗಣನೀಯವಾಗಿ ಕಡಿತ ವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಪ್ರವಾಸಿಗರನ್ನು ಮತ್ತೆ ದೇಶದತ್ತ ಸೆಳೆಯು ವುದು ಈ ಹಿಂದಿನ ಉದ್ದೇಶವಾಗಿದೆ. ಮಾಲ್ದೀವ್ಸ್‌ನಲ್ಲಿ ಡಿಜಿಟಲ್ ಮೂಲ ಸೌಕರ್ಯ ವೃದ್ಧಿಗೆ ನೆರವಾಗಲು ಇದನ್ನು ಜಾರಿ ಮಾಡಲಾಗಿದೆ.