Advertisement

ರಾಷ್ಟ್ರಪತಿ ಕೋವಿಂದ್‌ರ ಟಿಪ್ಪು ರಾಕೆಟ್‌ಗೆ ಬಿಜೆಪಿ ಕಕ್ಕಾಬಿಕ್ಕಿ

06:00 AM Oct 26, 2017 | Harsha Rao |

ಬೆಂಗಳೂರು: ಟಿಪ್ಪು ಸುಲ್ತಾನ್‌ ಜಯಂತಿಯ ವಿಚಾರದಲ್ಲಿ ಕಾಂಗ್ರೆಸ್‌ -ಬಿಜೆಪಿ ನಡುವೆ ನಡೆಯುತ್ತಿರುವ ವಾಕ್ಸಮರದ ಮಧ್ಯೆಯೇ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಟಿಪ್ಪು ಗುಣಗಾನ ಮಾಡಿದ್ದಾರೆ. 

Advertisement

ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ಬುಧವಾರ ಜಂಟಿ ಅಧಿ ವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, “ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಟಿಪ್ಪು ಸುಲ್ತಾನ್‌’ ಎಂದು ಶ್ಲಾ ಸಿದ್ದಾರೆ. ಇದಷ್ಟೇ ಅಲ್ಲ, ಮೈಸೂರು ರಾಕೆಟ್‌ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಯುದ್ಧ ಭೂಮಿಯಲ್ಲಿ ಮೊದಲ ಬಾರಿಗೆ ಬಳಕೆ ಮಾಡಿದ ಕೀರ್ತಿಯೂ ಟಿಪ್ಪು ಸುಲ್ತಾನ್‌ಗೆ ಸಲ್ಲುತ್ತದೆ ಎಂದು ಕೋವಿಂದ್‌ ಅವರು ಟಿಪ್ಪು ಸಾಧನೆಯನ್ನು ಕೊಂಡಾಡಿದ್ದಾರೆ. ಟಿಪ್ಪು ಬಳಸಿದ ಮೇಲಷ್ಟೇ ಐರೋಪ್ಯ ದೇಶಗಳಲ್ಲಿ ಈ ತಂತ್ರಜ್ಞಾನ ಬಳಕೆ ಮಾಡಲಾಯಿತು ಎಂದೂ ಹೇಳಿದರು.

ರಾಷ್ಟ್ರಪತಿ ಮಾತಿನಿಂದ ಖುಷಿ ಗೊಂಡ ಕಾಂಗ್ರೆಸ್‌, ಜೆಡಿಎಸ್‌ ಸದ ಸ್ಯರು ಮೇಜು ಕುಟ್ಟಿ ಸ್ವಾಗತಿಸಿದರೆ, ಅನಿ ರೀಕ್ಷಿತವಾಗಿ ಎದುರಾದ “ಟಿಪ್ಪು ಬಣ್ಣನೆ’ ಬಿಜೆಪಿ ಸದಸ್ಯರಿಗೆ ಶಾಕ್‌ ನೀಡಿತು. 

ಇದರ ಜತೆಗೆ ಸದ್ಯ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಇನ್ನೊಂದು ವಿವಾದ “ಲಿಂಗಾಯತ’ದ ಬಗ್ಗೆಯೂ ಮಾತನಾಡಿದ ಕೋವಿಂದ್‌, ಸಮಾಜ ಸುಧಾರಣೆಯ “ಲಿಂಗಾಯತ’ ಚಳವಳಿ ಬಸವಾಚಾರ್ಯರ ನೇತೃತ್ವದಲ್ಲಿ ನಡೆದದ್ದು ಕರ್ನಾಟಕದಲ್ಲೇ. ಈ ಎಲ್ಲವೂ ದೇಶ ನಿರ್ಮಾಣಕ್ಕೆ ನೀಡಿದ ಕೊಡುಗೆಗಳೇ ಎಂದು ಬಣ್ಣಿಸಿದರು.

ಮಹಾವೀರ ಜೈನ, ಗೌತಮ ಬುದ್ಧ ಸ್ವೀಕರಿಸಿದ ನಾಡಿದು. ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರು ಮಠ ಸ್ಥಾಪಿ ಸಿದ್ದು, ಕಲಬುರಗಿ ಸೂಪಿ ಸಂಸ್ಕೃತಿಯ ಕೇಂದ್ರವಾಗಿರುವುದು ಈ ನಾಡಿನ ವೈಶಿಷ್ಟ é ಎಂದು ಕೊಂಡಾಡಿದರು. 

Advertisement

ರಾಷ್ಟ್ರಪತಿಯವರು ತಮ್ಮ ಭಾಷಣ ದಲ್ಲಿ ವಿಜಯನಗರ ಸಾಮ್ರಾಜ್ಯ ಆಳಿದ ಶ್ರೀಕೃಷ್ಣದೇವರಾಯ, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅವರನ್ನು ಸ್ಮರಿಸಿಕೊಂಡರು. ಸೇನಾ ಮುಖ್ಯಸ್ಥರಾಗಿದ್ದ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ, ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರು ಕರ್ನಾಟಕದ ಮಕ್ಕಳು ಎಂದು ಬಣ್ಣಿಸಿದರು.

ಹೆಮ್ಮೆಯ ಕ್ಷಣ: ಕರ್ನಾಟಕ ವಿಧಾನಸಭೆ, ವಿಧಾನಪರಿಷತ್‌ ಬಗ್ಗೆಯೂ ಮೆಚ್ಚುಗೆ ಸೂಚಿಸಿದ ರಾಷ್ಟ್ರಪತಿ ಯವರು ನಾನು ರಾಷ್ಟ್ರಪತಿಯಾದ ಅನಂತರ ಮೊದಲ ಭೇಟಿ ಇದಾಗಿದ್ದು, ವಿಧಾನಸೌಧ ವಜ್ರ ಮಹೋತ್ಸವದಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡು ತ್ತಿರುವುದು ಹೆಮ್ಮೆ ಎಂದರು.

1956ರ ಅಕ್ಟೋಬರ್‌ನಲ್ಲಿ ದೇಶದ ಮೊದಲ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ್‌ ಅವರು ಉದ್ಘಾಟಿಸಿದ್ದ ವಿಧಾನಸೌಧದಲ್ಲಿ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ  ಬಂದಿರುವುದು ನನಗೆ ಸಂತಸ ತಂದಿದೆ. ನಾನು ರಾಜೇಂದ್ರ ಪ್ರಸಾದ್‌ ಅವರ ಮಾರ್ಗದಲ್ಲೇ ಸಾಗುತ್ತೇನೆ ಎಂದರು.

ದೇವೇಗೌಡರ ಹೆಸರೇ ಇಲ್ಲ: ಭಾಷಣ ಸಂದರ್ಭ ವಿಧಾನ ಸೌಧ ನಿರ್ಮಾಣಕ್ಕೆ ಕಾರಣರಾದವರು, ರಾಜ್ಯಕ್ಕೆ ವಿಶೇಷ ಕೊಡುಗೆ ನೀಡಿದ ಮುಖ್ಯಮಂತ್ರಿಗಳ ಹೆಸರನ್ನೂ ರಾಷ್ಟ್ರಪತಿ ಕೋವಿಂದ್‌ ನೆನಪಿಸಿಕೊಂಡರು. ಆದರೆ  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಹೆಸರೇ ಕಣ್ಮರೆಯಾಗಿದ್ದುದು ಜೆಡಿಎಸ್‌ ಸದಸ್ಯರ ಆಕ್ರೋ ಶಕ್ಕೂ ಕಾರಣವಾಯಿತು. ಬಳಿಕ ಅವರೇ ನೆನಪಿಸಿ ಕೊಂಡು, ನನ್ನ ಸ್ನೇಹಿತರೂ ಆಗಿರುವ ದೇವೇಗೌಡರನ್ನು ಮರೆಯುವು ದುಂಟೇ ಎಂದರು. 

ಭಾಷಣ ಸಿದ್ಧಪಡಿಸಿದ್ದು ಯಾರು?: ವಿಶೇಷ ಜಂಟಿ ಆಧಿವೇಶನದಲ್ಲಿ ರಾಷ್ಟ್ರಪತಿ ಮಾಡಿದ ಭಾಷಣ ಈಗ ವಿವಾದಕ್ಕೆ ಕಾರಣವಾಗಿದ್ದು, ಭಾಷಣದ ಪ್ರತಿ ಸಿದ್ಧಪಡಿಸಿ ದವರ್ಯಾರು ಎಂಬ ಪ್ರಶ್ನೆ ಎದ್ದಿದೆ.  ಟಿಪ್ಪು ಸುಲ್ತಾನ್‌ ಹೊಗಳಿಕೆ, ಲಿಂಗಾಯತ ಚಳವಳಿ ಪ್ರಸ್ತಾವ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹೆಸರು ಬಿಟ್ಟಿರುವ ಅಂಶಗಳ ಹಿನ್ನೆಲೆಯಲ್ಲಿ ಭಾಷಣ ರಾಜ್ಯ ಸರಕಾರ ಸಿದ್ಧಪಡಿಸಿತಾ? ರಾಜಭವನದಲ್ಲಿ ಸಿದ್ಧಗೊಂಡಿತಾ? ಅಥವಾ ರಾಷ್ಟ್ರಪತಿ ಕಚೇರಿಯಲ್ಲಿ ಸಿದ್ಧವಾಗಿದ್ದಾ ಎಂಬ ಪ್ರಶ್ನೆಗಳು ಮೂಡಿವೆ.

ಸಾಮಾನ್ಯವಾಗಿ ರಾಷ್ಟ್ರಪತಿ ಅವರ ಪ್ರವಾಸ ಕಾರ್ಯ ಕ್ರಮದಲ್ಲಿ ಭಾಗಿಯಾಗುವ ಸಮಾರಂಭದ ಸಂದರ್ಭಕ್ಕೆ ತಕ್ಕಂತೆ ಭಾಷಣ ಸಿದ್ಧಪಡಿಸಲಾಗುತ್ತದೆ. ರಾಜ್ಯ ಸರಕಾರದ ಕಾರ್ಯಕ್ರಮವಾದರೆ ಸರಕಾರದ ಮುಖ್ಯ ಕಾರ್ಯದರ್ಶಿ ಅಥವಾ ಇತರ ಇಲಾಖೆ ಗಳಿಂದ ಮಾಹಿತಿ ಪಡೆಯಲಾಗುತ್ತದೆ. ಖಾಸಗಿಯವರ ಕಾರ್ಯಕ್ರಮವಾದರೂ ಸಂಬಂಧಪಟ್ಟ ಸಂಘ – ಸಂಸ್ಥೆಗಳಿಂದ ಕೆಲವೊಂದು ಮಾಹಿತಿ ಪಡೆದು ಭಾಷಣ ತಯಾರಿಸಲಾಗುತ್ತದೆ. ಆದರೆ ವಜ್ರ ಮಹೋತ್ಸವದಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣ ರಾಜ್ಯ ಸರಕಾರವೇ ಸಿದ್ಧಗೊಳಿಸಿತ್ತು ಎಂಬುದು ವಿಪಕ್ಷ ಬಿಜೆಪಿ ವಾದ. ಟಿಪ್ಪು ಜಯಂತಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ವಿಪಕ್ಷ ಬಿಜೆಪಿಗೆ ಮುಜುಗರವಾಗುವಂತೆ ಟಿಪ್ಪು ಸುಲ್ತಾನ್‌ ವಿಚಾರ ಪ್ರಸ್ತಾವವಾಗಿ ಬ್ರಿಟೀಷರ ವಿರುದ್ಧ ವೀರ ಮರಣ ಅಪ್ಪಿದವರು ಎಂದು ಹೇಳಿರುವ ಅಂಶ ಇರುವುದು ಈ ಅನುಮಾನ ಬರಲು ಕಾರಣ.

ಈ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಕೇಳಿದಾಗ, ರಾಜ್ಯ ಸರಕಾರದಿಂದ ರಾಷ್ಟ್ರಪತಿ ಭವನ ಕೇಳುವ ಮಾಹಿತಿ ಒದಗಿಸಲಾಗುವುದು ಅಷ್ಟೇ. ಭಾಷಣ ಸಿದ್ಧಗೊಳ್ಳುವುದು ರಾಷ್ಟ್ರಪತಿ ಭವನದಲ್ಲೇ. ರಾಜ್ಯ ಸರಕಾರ ಭಾಷಣ ಸಿದ್ಧಪಡಿಸಿಕೊಡುವುದಿಲ್ಲ ಎಂದು ಹೇಳಿದರು.

ಮತ್ತೂಂದೆಡೆ ರಾಷ್ಟ್ರಪತಿಯವರು ಮಾಡಿದ ಭಾಷಣ ರಾಜಭವನದಲ್ಲಿ ಸಿದ್ಧಗೊಂಡಿತ್ತು. ಹೀಗಾಗಿಯೇ 11 ಗಂಟೆಗೆ ನಿಗದಿಯಾಗಿದ್ದ ರಾಷ್ಟ್ರಪತಿ ಅವರ ಭಾಷಣ 15 ನಿಮಿಷ ತಡವಾಗಿ ಪ್ರಾರಂಭವಾಯಿತು. ರಾಷ್ಟ್ರಪತಿ ಅವರು ವಿಧಾನಸಭೆ ಸಭಾಂಗಣ ಪ್ರವೇಶಿಸಿ ಆಸನದಲ್ಲಿ ಆಸೀನರಾದ ಅನಂತರ ಭಾಷಣದ ಪ್ರತಿ ಬಂದಿತು. ತರಾತುರಿಯಲ್ಲಿ ಭಾಷಣ ಸಿದ್ಧಪಡಿಸಿದಂತಿತ್ತು ಎಂದೂ ಹೇಳಲಾಗಿದೆ.

ಕುಮಾರಸ್ವಾಮಿ ಅವರಿಗೇ ಸಿಗದ ಆಸನ: ಫೋಟೋ ಸೆಷನ್‌ನಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಆಸನದ ವ್ಯವಸ್ಥೆ ಮಾಡದಿರುವುದೂ ಬಹಿರಂಗವಾ ಯಿತು. ವಿಧಾನಸೌಧ-ವಿಕಾಸಸೌಧ ಮಧ್ಯೆ ಆಯೋಜಿಸಿದ್ದ ಫೋಟೋ ಸೆಷನ್‌ಗಾಗಿ ಸಿಎಂ, ವಿಪಕ್ಷ ನಾಯಕರಾದಿ ಎಲ್ಲರ ಹೆಸರು ಆಸನಗಳ ಮೇಲೆ ಅಂಟಿಸಿತ್ತಾದರೂ 
ಎಚ್‌.ಡಿ. ಕುಮಾರಸ್ವಾಮಿ ಹೆಸರು ಅಂಟಿಸಿರಲಿಲ್ಲ.

ಜಂಟಿ ಅಧಿವೇಶನ ಮುಗಿಸಿ ಹೊರಬಂದ ಕುಮಾರ ಸ್ವಾಮಿ ಅವರು, ಫೋಟೋ ಸೆಷನ್‌ಗೆಂದು ಬಂದು ತಮಗೆ ಮೀಸಲಿಟ್ಟ ಜಾಗದ ಬಗ್ಗೆ ನೋಡಿದರು. ಆದರೆ ಹೆಸರು ಇಲ್ಲದೇ ಹೋಗಿದ್ದರಿಂದ ಬೇಸರಗೊಂಡು ಅಲ್ಲಿಂದ ಹೊರಗೆ ಹೋಗಲು ಸಿದ್ಧವಾದರು. ಆಗ ಅಧಿಕಾರಿಗಳು ಬಂದು ಮಿಸ್‌ ಪ್ಲೇಸ್‌ ಆಗಿದೆ, ವ್ಯವಸ್ಥೆ ಮಾಡುತ್ತೇವೆ ಕುಳಿತುಕೊಳ್ಳಿ ಎಂದರೂ ಕೇಳದೇ ಅಲ್ಲಿಂದ ಹೊರನಡೆದರು.  ವಜ್ರ ಮಹೋತ್ಸವ ಕಾರ್ಯಕ್ರಮದ ವೆಚ್ಚದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಒಂದು ಗ್ಲಾಸ್‌ ನೀರು ಸಹ ಕುಡಿಯುವುದಿಲ್ಲ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಅದೇ ರೀತಿ ತಮ್ಮ ಸದಸ್ಯರೊಂದಿಗೆ ನೀರು ಸಹ ಸೇವಿಸದೆ ಕಾರ್ಯಕ್ರಮಕ್ಕೆ ಬಂದು ವಾಪಸ್ಸಾದರು. 

ಗೌಡರಿಗೆ ಕರೆ ಮಾಡಿದ ಮಾತನಾಡಿದ ರಾಷ್ಟ್ರಪತಿ: ರಾಷ್ಟ್ರಪತಿ ಕೋವಿಂದ್‌ ಅವರು ಬುಧವಾರ ಸಂಜೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಕುಶಲೋಪರಿ ವಿಚಾರಿಸಿದರು.  ವಜ್ರ ಮಹೋತ್ಸವ ಸಮಾ ರಂಭದಲ್ಲಿ ತಮ್ಮನ್ನು ಭೇಟಿ ಮಾಡಲು ಉತ್ಸುಕನಾಗಿದ್ದೆ ಎಂದು ಹೇಳಿದರಲ್ಲದೆ, ಭಾಷಣದಲ್ಲಿ ಕಣ್ತಪ್ಪಿನಿಂದ ನಿಮ್ಮ ಹೆಸರು ಸೇರಿರಲಿಲ್ಲ. ಇದರಲ್ಲಿ ಅನ್ಯ ಕಾರಣ ಇಲ್ಲ ಎಂದರು. ಇದಕ್ಕೆ ದೇವೇಗೌಡರು ತಾವು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇಂತಹ ಸಣ್ಣ ಪ್ರಮಾದ ಸಹಜ ಎಂದರು ಎನ್ನಲಾಗಿದೆ.

ಭಾಷಣ ನಾವು ಸಿದ್ಧಪಡಿಸಿಲ್ಲ: ಸಿಎಂ
ರಾಜ್ಯ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣ ರಾಜ್ಯ ಸರಕಾರ ಸಿದ್ಧಪಡಿಸಿದ್ದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರಕಾರದ ವತಿಯಿಂದ ರಾಷ್ಟ್ರಪತಿಯವರ ಭಾಷಣ ಸಿದ್ಧಪಡಿಸಿಯೂ ಇಲ್ಲ, ರಾಷ್ಟ್ರಪತಿ ಭವನಕ್ಕೆ ಯಾವುದೇ ಟಿಪ್ಪಣಿಯನ್ನೂ ನಾವು ಕಳುಹಿಸಿಲ್ಲ ಎಂದಿದ್ದಾರೆ. 

ಇದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣವಲ್ಲ. ಇದು ರಾಷ್ಟ್ರಪತಿಯವರು ರಾಜ್ಯ ವಿಧಾನ ಮಂಡಲದ ಸದಸ್ಯರನ್ನು ಒಳಗೊಂಡಂತೆ ಇತರ ಗಣ್ಯಾತಿಗಣ್ಯರನ್ನು ಉದ್ದೇಶಿಸಿ ಮಾಡಿದ ಭಾಷಣ. ರಾಷ್ಟ್ರಪತಿಯವರ ಸ್ವಂತ ಭಾಷಣ. ಅವರು ಸತ್ಯವನ್ನೇ ಹೇಳಿ¨ªಾರೆ. ಈ ಕುರಿತು ಕೆಲವರು ಅನಗತ್ಯವಾಗಿ ವಿವಾದ ಸೃಷ್ಟಿಸಲು ಹೊರಟಿ¨ªಾರೆ. ಇದು ವಿಷಾದನೀಯ ಎಂದರು.

ರಾಷ್ಟ್ರಪತಿ ಭಾಷಣದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಹೆಸರು ಕೈ ಬಿಟ್ಟಿರುವುದಕ್ಕೆ ಜೆಡಿಎಸ್‌ ನಾಯಕರು ಅಸಮಾಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಆ ವಿಚಾರಕ್ಕೂ ರಾಜ್ಯ ಸರಕಾರಕ್ಕೂ ಸಂಬಂಧವಿಲ್ಲ. ನಾವು ಭಾಷಣ ಸಿದ್ಧಪಡಿಸಿಲ್ಲ ಎಂದು ಪುನರುತ್ಛರಿಸಿದರು. ದೇವೇಗೌಡರ ಹೆಸರನ್ನು ಉದ್ದೇಶ ಪೂರ್ವಕವಾಗಿ ಬಿಟ್ಟಿರಲು ಸಾಧ್ಯವಿಲ್ಲ, ಎಂದರು.

Advertisement

Udayavani is now on Telegram. Click here to join our channel and stay updated with the latest news.

Next