Advertisement

ಗಾಲ್ವನ್‌ ಹುತಾತ್ಮರಿಗೆ ಶೌರ್ಯ ಗೌರವ ಪ್ರದಾನ

06:33 PM Nov 23, 2021 | Team Udayavani |

ನವದೆಹಲಿ:ಲಡಾಖ್‌ನ ಪೂರ್ವ ಭಾಗದ ಗಾಲ್ವನ್‌ನಲ್ಲಿ 2020ನಲ್ಲಿ ಚೀನಾ ವಿರುದ್ಧ ನಡೆದ ಹೋರಾಟದಲ್ಲಿ ಹುತಾತ್ಮರಾಗಿದ್ದ ದಿ.ಕ.ಬಿಕುಮಲ್ಲ ಸಂತೋಷ್‌ ಬಾಬು ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಗೌರವ ಪ್ರದಾನ ಮಾಡಲಾಗಿದೆ.

Advertisement

ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂಗ ಸಂತೋಷ್‌ ಬಾಬು ಅವರ ಪತ್ನಿ ಬಿ.ಸಂತೋಷಿ ಮತ್ತು ತಾಯಿ ಮಂಜುಳಾ ಗೌರವ ಸ್ವೀಕರಿಸಿದರು.

ಕ.ಸಂತೋಷ್‌ ಬಾಬು ಅವರು 16 ಬಿಹಾರ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಶೌರ್ಯಪ್ರಶಸ್ತಿಗಳ ಪೈಕಿ ಪರಮ ವೀರಚಕ್ರ ಮೊದಲ ಅತ್ಯುನ್ನತ ಗೌರವವಾಗಿದೆ. ಮಹಾವೀರ ಚಕ್ರ ಎರಡನೇ ಅತ್ಯುನ್ನತ ಗೌರವವಾಗಿದೆ.

ನೈಬ್‌ ಸುಬೇದಾರ್‌ ನುದುರಮ್‌ ಸೊರೇನ್‌, ಹವಾಲ್ದಾರ್‌ ಕೆ.ಪಳನಿ, ನಾಯ್ಕ ದೀಪಕ್‌ ಸಿಂಗ್‌ ಸಿಂಗ್‌ ಮತ್ತು ಸಿಪಾಯಿ ಗುರುತೇಜ್‌ ಸಿಂದ್‌ ಅವರು ಕೂಡ ಚೀನಾದ ಕಿಡಿಗೇಡಿತನದಿಂದ ಹುತಾತ್ಮರಾಗಿದ್ದರು. ಅವರೆಲ್ಲರಿಗೆ ಮರಣೋತ್ತರವಾಗಿ ವೀರ ಚಕ್ರ ಗೌರವ ಪ್ರದಾನ ಮಾಡಲಾಗಿದೆ.

Advertisement

ಇದನ್ನೂ ಓದಿ:ರಾಜ್ಯದಲ್ಲಿ ಕೈಗೆ ಮತ್ತೆ ಚುಕ್ಕಾಣಿ: ಸತೀಶ ವಿಶ್ವಾಸ

ನೈಬ್‌ ಸೊರೆನ್‌ ಅವರ ಪತ್ನಿ ಲಕ್ಷ್ಮೀಮಣಿ ಸೊರೇನ್‌, ಹವಾಲ್ದಾರ್‌ ಪಳನಿ ಅವರ ಪತ್ನಿ ವನತಿ ದೇವಿ, ನಾಯ್ಕ ದೀಪಕ್‌ ಸಿಂಗ್‌ ಅವರ ಪತ್ನಿ ರೇಖಾ ಸಿಂಗ್‌, ಸಿಪಾಯಿ ಗುರುತೇಜ್‌ ಸಿಂಗ್‌ ಅವರ ತಾಯಿ ಪ್ರಕಾಶ್‌ ಕೌರ್‌ ಮತ್ತು ತಂದೆ ವಿರ್ಸಾ ಸಿಂಗ್‌ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಂದ ಗೌರವ ಸ್ವೀಕರಿಸಿದ್ದಾರೆ. ಈ ಹೋರಾಟದಲ್ಲಿ ದೇಶದ ಒಟ್ಟು ಇಪ್ಪತ್ತು ಮಂದಿ ವೀರ ಯೋಧರು ಪ್ರಾಣಾರ್ಪಣೆ ಮಾಡಿದ್ದರು.

16 ಮಂದಿ ಹಾಲಿ ಮತ್ತು ನಿವೃತ್ತ ಸೇನಾಧಿಕಾರಿಗಳಿಗೆ ಪರಮ ವಿಶಿಷ್ಟ ಸೇವಾ ಮೆಡಲ್‌, ಇಬ್ಬರು ಅಧಿಕಾರಿಗಳಿಗೆ ಉತ್ತಮ ಯುದ್ಧ ಸೇವಾ ಮೆಡಲ್‌, 25 ಮಂದಿ ಹಾಲಿ ಮತ್ತು ನಿವೃತ್ತ ಸೇನಾಧಿಕಾರಿಗಳಿಗೆ ಅತಿ ವಿಶಿಷ್ಟ ಸೇವಾ ಮೆಡಲ್‌

Advertisement

Udayavani is now on Telegram. Click here to join our channel and stay updated with the latest news.

Next