Advertisement

ಚೀಟಿ ಆಧಾರದ ಮೇಲೆ ಅಧ್ಯಕ್ಷ ಸಾನ ನಿರ್ಧಾರ

06:41 PM Feb 16, 2021 | Suhan S |

ಸಾಗರ: ನೇರವಾಗಿ ಪಕ್ಷದ ಚಿನ್ಹೆಯಡಿ ಸ್ಪರ್ಧೆ ನಡೆಯದಿದ್ದರೂ ತಾಲೂಕಿನಎಡಜಿಗಳೇಮನೆ ಗ್ರಾಪಂನಲ್ಲಿನ ಹತ್ತು ಸ್ಥಾನಗಳ ಪೈಕಿ ಒಂಬತ್ತರಲ್ಲಿಬೆಂಬಲಿಗರನ್ನೇ ಗೆಲ್ಲಿಸಿಕೊಳ್ಳುವಲ್ಲಿಬಿಜೆಪಿ ಯಶಸ್ವಿಯಾದರೂ,

Advertisement

ಚೀಟಿಯಲ್ಲಿ ನಿರ್ಧಾರವಾದ ಮೀಸಲಾತಿಯ ಹಿನ್ನೆಲೆಯಲ್ಲಿ ಅಧ್ಯಕ್ಷಸ್ಥಾನವನ್ನು ಕಾಂಗ್ರೆಸ್‌ ಒಲವಿನಸದಸ್ಯರಿಗೆ ಬಿಟ್ಟುಕೊಡಬೇಕಾದಬೆಳವಣಿಗೆಗೆ ಸೋಮವಾರ ಸಾಕ್ಷಿಯಾಗಬೇಕಾಯಿತು. ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಬೆಂಬಲ ಘೋಷಿಸಿದ ಐವರುಗೆಲುವು ಸಾಧಿಸಿದ್ದಲ್ಲದೆ, ಬಿಜೆಪಿ ತಮ್ಮನ್ನು ಬೆಂಬಲಿಸದಿರುವುದರಿಂದ ಅಸಮಾಧಾನಗೊಂಡಿದ್ದ ನಾಲ್ವರು ಕಾರ್ಯಕರ್ತರು ಬಂಡಾಯದ ರೂಪದಲ್ಲಿ ಚುನಾವಣೆಯಲ್ಲಿ ನಿಂತು ಜಯಭೇರಿ ಬಾರಿಸಿದ್ದರು.

ಚುನಾವಣೆಯ ನಂತರ ಇವರನ್ನೂ ಪಕ್ಷದಲ್ಲಿ ಗುರುತಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಚೀಟಿ ಮೂಲಕ ಅಧ್ಯಕ್ಷ ಸ್ಥಾನಕ್ಕೆ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಹಿಂದುಳಿದ ಜಾತಿಮಹಿಳೆಗೆ ಎಡಜಿಗಳೇಮನೆಯ ಮೀಸಲಾತಿ ಒಲಿದಿತ್ತು. ಆದರೆಬಿಜೆಪಿ ತಮ್ಮವರೆಂದುಕೊಂಡಿರುವಒಂಬತ್ತು ಜನರಲ್ಲಿ ಯಾರಿಗೂ ಈ ಮೀಸಲಾತಿ ಅನ್ವಯಿಸದಿರುವುದ ರಿಂದಅಪ್ರಯತ್ನಪೂರ್ವಕವಾಗಿ ಕಾಂಗ್ರೆಸ್‌ಬೆಂಬಲಿತರಾದ ಮಾನಸ ಅಧ್ಯಕ್ಷರಾಗಿಆಯ್ಕೆಯಾದರು. ಬಿಜೆಪಿಯ ಗಿರೀಶ್‌ಎನ್‌. ಹೆಗಡೆ ಹಕ್ರೆ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗುವುದಕ್ಕೆ ತೃಪ್ತಿ ಪಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next