Advertisement

ಆಸ್ರಣ್ಣ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸಮ್ಮಾನ

08:45 AM Aug 21, 2017 | Harsha Rao |

ಕಟೀಲು: ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕಟೀಲು ದುರ್ಗೆಯ ಪ್ರಸಾದ ನೀಡಿ “ದುರ್ಗೆಯನ್ನು ನಂಬಿ – ಎಲ್ಲವೂ ಸರಿಹೋಗುತ್ತದೆ’ ಎಂದು ಸಂತೈಸುವ ಮೂಲಕ ಅವರಲ್ಲಿ ಶಕ್ತಿ ತುಂಬುತ್ತಿದ್ದ ದಿ| ಗೋಪಾಲಕೃಷ್ಣ ಆಸ್ರಣ್ಣ ಅವರು ಓರ್ವ ಮಹಾನ್‌ ಸಾಧಕ ಶಕ್ತಿ ಎಂದು ಮುಂಬಯಿಯ ಭವಾನಿ ಶಿಪ್ಪಿಂಗ್‌ ಸಂಸ್ಥೆಯ ಮುಖ್ಯಸ್ಥ ಕುಸುಮೋದರ ಡಿ. ಶೆಟ್ಟಿ ಹೇಳಿದರು.

Advertisement

ಅವರು ಶನಿವಾರ ಕಟೀಲಿನಲ್ಲಿ ದಿ| ಗೋಪಾಲಕೃಷ್ಣ ಆಸ್ರಣ್ಣ ಅವರ 25ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸಂಸ್ಮರಣಾ ಭಾಷಣಗೈದರು.ಸಗ್ರಿ ಗೋಪಾಲಕೃಷ್ಣ ಸಾಮಗ ಶುಭಾಶಂಸನೆಗೈದರು. ಆದಾನಿ ಗ್ರೂಪ್‌ ಆಫ್‌ ಕಂಪೆ‌ನಿಯ ಕಿಶೋರ್‌ ಆಳ್ವ, ಶಾಸಕ ಅಭಯಚಂದ್ರ ಜೈನ್‌, ಮುಂಬಯಿ ಉದ್ಯಮಿ ಐಕಳ ಹರೀಶ್‌ ಶೆಟ್ಟಿ, ಮಾಜಿ ಸಚಿವರಾದ ಅಮರನಾಥ ಶೆಟ್ಟಿ , ನಾಗರಾಜ ಶೆಟ್ಟಿ ,
ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌, ಮುಂಬಯಿ ಉದ್ಯಮಿಗಳಾದ ಸುರೇಶ್‌ ಭಂಡಾರಿ, ಚಂದ್ರಹಾಸ ರೈ, ಸತೀಶ್‌ ಶೆಟ್ಟಿ , ಉದ್ಯಮಿ ಶ್ರೀಪತಿ ಭಟ್‌, ಧರ್ಮದರ್ಶಿ ಹರಿಕೃಷ್ಣ ಪುನರೂರು, ಉದ್ಯಮಿ ರಾಜೇಶ್‌ ಮಂಗಳೂರು, ಕದ್ರಿ ಗೋಪಾಲನಾಥ್‌, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್‌ ಕಲ್ಕೂರ, ಭುವನಾಭಿರಾಮ ಉಡುಪ, ಸುಧೀರ್‌ ಶೆಟ್ಟಿ ಕಟೀಲು, ಮೋಹನ್‌ ಮೆಂಡನ್‌, ದೊಡ್ಡಯ್ಯ ಮೂಲ್ಯ, ಲೋಕಯ್ಯ ಕೊಂಡೇಲ, ಜಯಂತಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ ಉಪಸ್ಥಿತರಿದ್ದರು.

ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿ, ಸತೀಶ್‌ ರಾವ್‌ ವಂದಿಸಿದರು. ಗುರುಪ್ರಸಾದ್‌ ಭಟ್‌, ಶ್ರೀವತ್ಸ ಸಮ್ಮಾನ ಪತ್ರ ವಾಚಿಸಿದರು. ರಮ್ಯಾ ರವಿತೇಜ ನಿರ್ವಹಿಸಿದರು.

ಪ್ರಶಸ್ತಿ ಪ್ರದಾನ
ಮಂಗಳಾದೇವಿ ದೇವಸ್ಥಾನದ ರಮಾನಾಥ ಹೆಗ್ಡೆ ಅವರಿಗೆ ಮೊಕ್ತೇಸರ ಸಮ್ಮಾನ, ಶಿಬರೂರು ವೇ|ಮೂ| ವೇದವ್ಯಾಸ ತಂತ್ರಿ ದಂಪತಿಗೆ ಅರ್ಚಕರ ನೆಲೆಯಲ್ಲಿ ಸಮ್ಮಾನ, ಕದ್ರಿ ಆಸ್ರಣ್ಣ ಅಭಿಮಾನಿಗಳು ಕೊಡ ಮಾಡುವ ಆಸ್ರಣ್ಣ ಪ್ರಶಸ್ತಿಯನ್ನು ಕಲಾವಿದ ಕೃಷ್ಣ ಮೂಲ್ಯ ಕೈರಂಗಳ ಅವರಿಗೆ, ಮುಂಬಯಿಯ ಸುರೇಶ್‌ ಭಂಡಾರಿ ಅವರು ಕೊಡಮಾಡುವ ಕಲಾವಿದ ಪ್ರಶಸ್ತಿಯನ್ನು ಸಂಜಯ ಕುಮಾರ ಗೋಣಿಬೀಡು ದಂಪತಿಗೆ ನೀಡಲಾಯಿತು.

Advertisement

ಸಾಧಕರಿಗೆ ಆಸ್ರಣ್ಣ ಅನುಗ್ರಹ ಪ್ರಶಸ್ತಿ
ವಿ. ಮಾಧವ ರಾವ್‌ ಅಬುಧಾಬಿ ಅವರು ರಾಜ ಪುರೋಹಿತ ವೇ| ಮೂ| ಗಣಪತಿ ಆಚಾರ್ಯ ಮಂಗಳೂರು, ಕೈಯೂರು ಕೃಷ್ಣ ಕುಮಾರ್‌, ಸಾಹಿತಿ ಶಕುಂತಲಾ ಭಟ್‌, ನಾಟಕಕಾರ ನವೀನ್‌ ಡಿ. ಪಡೀಲ್‌,  ಪ್ರಕಾಶ್‌ ಶೆಟ್ಟಿ ಸುರತ್ಕಲ್‌ ಮುಂಬಯಿ, ರಾಮಚಂದ್ರ ಭಟ್‌ ಮುಚ್ಚಾರು, ಯಕ್ಷಗಾನ ಉದಯೋನ್ಮುಖ ಕಲಾವಿದರಾದ ದೇವಿಪ್ರಸಾದ ಆಳ್ವ, ಗಣೇಶ ಭಟ್‌, ಕುಸುಮೋದರ ಕುಲಾಲ್‌, ಲೋಕೇಶ್‌ ಮುಚ್ಚಾರು, ಚಂದ್ರಶೇಖರ ಬನಾರಿ, ಪೂರ್ಣೇಶ ಆಚಾರ್ಯ, ಚೈತನ್ಯಕೃಷ್ಣ ಪದ್ಯಾಣ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next