ಸಾಧ್ಯಾಸಾಧ್ಯತೆಗಳನ್ನು ಅರಿತುಕೊಳ್ಳಲು ಕಾನೂನು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್, ಹೈಕೋರ್ಟ್‌ಗೆ ಭೇಟಿ ನೀಡುವುದು ಅಗತ್ಯ ಎಂದು ಹೈಕೋರ್ಟ್ ನ್ಯಾಯಾಧೀಶರಾದ ಇಂಗಲಗುಪ್ಪೆ ಸೀತಾರಾಮಯ್ಯ ಇಂದ್ರೇಶ್ ಹೇಳಿದರು.
Advertisement
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ರವಿವಾರ ಜರಗಿದ ರಾಷ್ಟ್ರೀಯ ಕಾನೂನು ಹಬ್ಬ “ಲೆಕ್ಸ್ ಅಲ್ಟಿಮಾ-2024’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಷಯಗಳನ್ನು ಕಲಿಯುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ಬಹುಮಾನಗಳತ್ತ ಚಿತ್ತ ಹರಿಸದೆ ಸಿಗುವ ಅವಕಾಶವನ್ನು ಬಳಸಿಕೊಳ್ಳಬೇಕು. ತಮ್ಮ ವೃತ್ತಿ ಜೀವನಕ್ಕೆ ಕಾನೂನು ಹಬ್ಬಗಳು ಬಾಗಿಲು ತೆರೆಸುತ್ತವೆ ಎಂದು ಹೇಳಿದರು.
Related Articles
ಎಂ. ಭಟ್, ಶ್ರೀವರ ಪಿ., ಭಾರ್ಗವಿ ಶಬರಾಯ, ಅಶ್ವಥಿ ಕೃಷ್ಣ ಎಂ.ಪಿ. ಉಪಸ್ಥಿತರಿದ್ದರು.
Advertisement
ವೈಕುಂಠ ಬಾಳಿಗ ಲಾ ಕಾಲೇಜಿಗೆ ಸಮಗ್ರ ಪ್ರಶಸ್ತಿಮೂರು ದಿನ ನಡೆದ ಕಾನೂನು ಹಬ್ಬದಲ್ಲಿ 43 ಕಾನೂನು ಕಾಲೇಜುಗಳ 162 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಣಕು ನ್ಯಾಯಾಲಯ, ಜಾಮೀನು ಅರ್ಜಿ ಸ್ಪರ್ಧೆ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಕಾನೂನು ರಸಪ್ರಶ್ನೆ, ಶಾಸನ ರಚನೆ, ಕಾನೂನು ಸಲಹೆ, ತೀರ್ಪು ಬರೆಯುವ ಸ್ಪರ್ಧೆ, ಕಾನೂನು ಚರ್ಚೆ ಸಹಿತ ವಿವಿಧ ಸ್ಪರ್ಧೆಗಳಲ್ಲಿ ವೈಕುಂಠ ಬಾಳಿಗ ಲಾ ಕಾಲೇಜು ಉಡುಪಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಹಾಗೂ ಬಿಎಂಎಸ್ ಲಾ ಕಾಲೇಜು ಬೆಂಗಳೂರು ರನ್ನರ್ ಪ್ರಶಸ್ತಿಯನ್ನು ಹಂಚಿಕೊಂಡವು.