ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದಲ್ಲಿ ಅವಕಾಶವಿರುವ ಕಡೆ ನದಿ, ಹೊಳೆ, ಕೆರೆಗಳಲ್ಲಿ ಗಾಳ ಹಾಕಿ ಮೀನು ಹಿಡಿಯುವ ಪದ್ಧತಿ ಉತ್ತೇಜನಕ್ಕೆ ಅವಕಾಶ ಕಲ್ಪಿಸಲು ಹಾಗೂ ಸ್ಪರ್ಧೆಗಳನ್ನು ಆಯೋಜಿಸಲು ಮೀನುಗಾರಿಕೆ ಇಲಾಖೆ ಸಜ್ಜಾಗಿದೆ. ಪ್ರಾಯೋಗಿಕವಾಗಿ ನಗರದ ಸ್ಯಾಂಕಿ ಕೆರೆಯಲ್ಲಿ ತಿಂಗಳಲ್ಲಿ ಗಾಳ ಹಾಕುವ ವ್ಯವಸ್ಥೆಗೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಿದೆ. ಈ ಪ್ರಯೋಗ ಯಶಸ್ವಿಯಾದರೆ ನಗರದ ಆಯ್ದ ಕೆರೆ ಸೇರಿದಂತೆ ರಾಜ್ಯದ ಇತರೆಡೆಯೂ ಹಂತ ಹಂತವಾಗಿ ವಿಸ್ತರಿಸಿ ಕ್ರೀಡಾ ಮೀನುಗಾರಿಕೆಯನ್ನು ಉತ್ತೇಜಿಸಲು ಸಿದ್ಧತೆ ನಡೆಸಿದೆ.
ಈ ಹವ್ಯಾಸ ಮೊದಲಿನಿಂದಲೂ ಇದ್ದು, ಕೆರೆ, ಹೊಳೆಗಳಿಗೆ ಕಲುಷಿತ ನೀರು ಸೇರ್ಪಡೆಯಿಂದ ಈ ಹವ್ಯಾಸಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಇದೀಗ ಮತ್ತೆ ಈ ಪದ್ಧತಿಯನ್ನು ಪ್ರೋತ್ಸಾಹಿಸಲು ಇಲಾಖೆ ಮುಂದಾಗಿದೆ. ರಾಜ್ಯದ ನದಿ, ಹೊಳೆ, ಕೆರೆಗಳ ಪೈಕಿ ಆಯ್ದ ಕಡೆ ಇಲಾಖೆಯಿಂದಲೇ ಗಾಳ ಹಾಕುವ ಪದ್ಧತಿಗೆ ಅವಕಾಶ ಕಲ್ಪಿಸುವುದು. ಈಗಾಗಲೇ ಕೆರೆಗಳನ್ನು ಸ್ಥಳೀಯ ಟ್ರಸ್ಟ್ ಇಲ್ಲವೇ ಯಾವುದಾದರೂ ಸಂಸ್ಥೆಗೆ ನಿರ್ವಹಣೆಗೆ ನೀಡಿದ್ದರೂ ಅದರಲ್ಲಿ ಗಾಳ ಹಾಕುವ ಪದ್ಧತಿಗೆ ಅವಕಾಶ ಒದಗಿಸುವುದು.
ಆ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಜತೆಗೆ ಕ್ರೀಡಾ ಮೀನುಗಾರಿಕೆ ಉತ್ತೇಜಿಸುವುದು ಯೋಜನೆಯ ಉದ್ದೇಶವಾ ಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ. ಗಾಳ ಹಾಕುವ ಪದ್ಧತಿಯಡಿ ಹಿಡಿದ ಮೀನು ಗಳನ್ನು ಮತ್ತೆ ವಾಪಸ್ ನೀರಿಗೆ ಬಿಡಬೇಕು. ಇಲ್ಲವೇ ಹಿಡಿದವರೇ ಶುಲ್ಕ ಪಾವತಿಸಿ ಕೊಂಡೊಯ್ಯಲು ಅವಕಾಶ ನೀಡಬೇಕೆ. ಶುಲ್ಕ ವ್ಯವಸ್ಥೆ ಹೇಗಿರಬೇಕು. ಅಗತ್ಯವಿರುವ ಕಡೆ ಇಲಾಖೆಯಿಂ ದಲೇ ಮೀನುಗಳನ್ನು ಒದಗಿಸುವುದು.
ಸಮಯದಲ್ಲಿ ಅವಕಾಶ ನೀಡಬೇಕು. ಸ್ಥಳೀಯ ಪರಿಸರಕ್ಕೆ ಹಾನಿಯಾಗದಂತೆ ವಹಿಸಬೇಕಾದ ಎಚ್ಚರಿಕೆಗಳೇನು ಎಂಬುದು ಸೇರಿದಂತೆ ಇತರೆ ಅಂಶಗಳ ಬಗ್ಗೆ ಚರ್ಚಿಸಿ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ ಎಂದು ತಿಳಿಸಿವೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರ ಗಳಲ್ಲಿ ಕೆರೆಗಳಿಗೆ ಒಳಚರಂಡಿ ನೀರು ರ್ಪಡೆಯಿಂ ದ ಎಲ್ಲ ಕಡೆ ಗಾಳ ಹಾಕುವ ಪದ್ಧತಿ ವ್ಯವಸ್ಥೆ ಕಲ್ಪಿಸುವುದು ಕಷ್ಟ ಸಾಧ್ಯ.
ಚರಂಡಿ ನೀರು ಸೇರ್ಪಡೆ ಪ್ರಮಾಣ ಮಿತಿ ಯೊಳಗಿದ್ದರೆ ಅವಕಾಶ ಕಲ್ಪಿಸಬಹುದು. ಈ ಬಗ್ಗೆ ಪರಿಶೀಲನೆ ನಡೆಸಿಯೇ ಅವಕಾಶ ನೀಡಲಾಗುತ್ತದೆ. ಆದರೆ ಸಂರಕ್ಷಿತ ಕರೆ, ಪ್ರದೇಶಗಳಲ್ಲಿನ ಜಲ ಮೂಲಗಳಿರುವ ಕಡೆ ಈ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿವೆ.
ಕ್ರೀಡಾ ಮೀನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ರಾಜ್ಯದ ನದಿ, ಹೊಳೆ, ಕೆರೆಗಳ ಪೈಕಿ ಸಾಧ್ಯವಿರುವ ಕಡೆ ಗಾಳ ಹಾಕಿ ಮೀನು ಹಿಡಿಯಲು ಹಾಗೂ ಸ್ಪರ್ಧೆಗಳ ಆಯೋಜನೆಗೆ ಅವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದೆ. ಬೆಂಗಳೂರಿನ ಸ್ಯಾಂಕಿ ಕೆರೆ, ಹಲಸೂರು ಕೆರೆ ಸೇರಿದಂತೆ ಆಯ್ದ ಕೆರೆಗಳು ಹಾಗೂ ರಾಜ್ಯದ ಇತರೆಡೆಯೂ ಅವಕಾಶ ಕಲ್ಪಿಸಲು ಚಿಂತಿಸಲಾಗಿದ್ದು, ಸದ್ಯದಲ್ಲೇ ಇದಕ್ಕೆ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು. ಸದ್ಯದಲ್ಲೇ ಪ್ರಾಯೋಗಿಕವಾಗಿ ಸ್ಯಾಂಕಿ ಕೆರೆಯಲ್ಲಿ ಚಾಲನೆ ನೀಡಲು ಚಿಂತಿಸಲಾಗಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಚಿವ