Advertisement
ಕಳೆದ 5-6 ವರ್ಷಗಳಿಂದಲೂ ನಿರಂತರವಾಗಿ ಮಳೆ ಕೈಕೊಟ್ಟು ಬರ ಆವರಿಸಿದೆ. ಹೇಗೋ ಜೀವನ ಸಾಗಿಸಲು ಅನುವಾಗುತ್ತಿದ್ದ ತೋಟಗಾರಿಕಾ ಬೆಳೆಗಳೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಕಡೆಗಳಲ್ಲಿ ಅಂತರ್ಜಲ ಕುಸಿದಿದೆ. ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುತ್ತಿದ್ದಾರೆ.
Related Articles
Advertisement
128 ಗ್ರಾಮಗಳಲ್ಲಿ ಟ್ಯಾಂಕರ್ ನೀರು : ಜಿಲ್ಲೆಯಲ್ಲಿ ಮೇ ತಿಂಗಳ ಆರಂಭದಲ್ಲಿಯೇ 128 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ ಲಾಗುತ್ತಿದೆ. ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಅತಿ ಹೆಚ್ಚು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ.
ತುಮಕೂರು ತಾಲೂಕಿನ 7 ಗ್ರಾಪಂ ವ್ಯಾಪ್ತಿಯ 7 ಗ್ರಾಮ, ಗುಬ್ಬಿ ತಾಲೂಕಿನ 12 ಗ್ರಾ.ಪಂ. 22 ಗ್ರಾಮ, ಚಿಕ್ಕನಾಯಕನಹಳ್ಳಿಯ 2 ಗ್ರಾ.ಪಂ. ವ್ಯಾಪ್ತಿಯ 2 ಗ್ರಾಮ, ಮಧುಗಿರಿ 9 ಗ್ರಾ.ಪಂ.ನ 12 ಗ್ರಾಮಗಳು, ಕುಣಿಗಲ್ನ 6 ಗ್ರಾ.ಪಂ.ನ 13 ಗ್ರಾಮಗಳು, ಕೊರಟ ಗೆರೆ 9 ಗ್ರಾ.ಪಂ.ನ 15 ಗ್ರಾಮಗಳು, ಪಾವಗಡ 12 ಗ್ರಾ.ಪಂ.23 ಗ್ರಾಮಗಳು, ತುರುವೇಕೆರೆ 5 ಗ್ರಾ.ಪಂ.ನ 11 ಗ್ರಾಮಗಳು, ಶಿರಾ, 9 ಗ್ರಾ.ಪಂ.ನ 11 ಗ್ರಾಮಗಳು ತಿಪಟೂರು 6 ಗ್ರಾ.ಪಂ. 7 ಗ್ರಾಮಗಳು ಸೇರಿದಂತೆ ಜಿಲ್ಲೆಯ 77 ಗ್ರಾಪಂ ವ್ಯಾಪ್ತಿಯ 128 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, 481 ಟ್ರಿಪ್‌ನಲ್ಲಿ ಕುಡಿಯುವ ನೀರನ್ನು ಟ್ಯಾಂಕ್ ಮೂಲಕ ಸರಬರಾಜು ಮಾಡಲಾಗುತ್ತಿದೆ.
ಬರ ನಿರ್ವಹಣೆಗೆ 5.33 ಕೋಟಿ ರೂ. ಬಿಡುಗಡೆ: ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಬರ ನಿರ್ವ ಹಣೆಗಾಗಿ ಸರ್ಕಾರದಿಂದ ಪ್ರತಿ ಕ್ಷೇತ್ರಕ್ಕೆ 1ಕೋಟಿ ಅನುದಾನ ನಿಗದಿಯಾಗಿದ್ದು, 5.33 ಕೋಟಿ ರೂ. ಬಿಡುಗಡೆ ಆಗಿದೆ. ಜಿಲ್ಲೆಯ 10 ತಾಲೂಕುಗಳು ಬರ ಪೀಡಿತ ತಾಲೂಕುಗಳಾಗಿದ್ದು, ಈಗಾಗಲೇ 24 ಕಡೆಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ.
ಜಿಲ್ಲೆಯ ಎಲ್ಲಾ ಕಡೆ ಕುಡಿಯವ ನೀರಿನ ಸಮಸ್ಯೆ ನಿವಾರಣೆ ಮಾಡಲು ಸರಕಾರ ಬಿಡುಗಡೆ ಮಾಡಿರುವ ಹಣದಲ್ಲಿ ಪ್ರತಿ ತಾಲೂಕಿಗೆ 50 ಲಕ್ಷ ರೂ.ದಂತೆ ವಿತರಣೆ ಮಾಡಲಾಗಿದೆ. ಈ ಹಣದಲ್ಲಿ ಕೊಳವೆ ಬಾವಿ ದುರಸ್ತಿ, ಪಂಪು ಮೋಟಾರ್, ಪೈಪ್ ಲೈನ್ ಮಾಡಿಸಲು ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
● ಚಿ.ನಿ.ಪುರುಷೋತ್ತಮ್