Advertisement

ನಮ್ಮ ಮೆಟ್ರೋ ಸೇವೆ ಪುನಾರಂಭಕ್ಕೆ ಸಿದ್ಧತೆ

04:07 AM May 24, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ 4.0 ಮುಗಿಯುತ್ತಿದ್ದಂತೆ ‘ನಮ್ಮ ಮೆಟ್ರೋ’ ರೈಲು ಸೇವೆ ಪುನಾರಂಭಕ್ಕೆ ಸಿದ್ಧತೆ ನಡೆದಿದೆ. ಕೇಂದ್ರದ ಅನುಮತಿ ಸೇರಿದಂತೆ ಎಲ್ಲವೂ ಅಂದುಕೊಂಡಂತೆ ಆದರೆ, ಜೂನ್‌ 1ರಿಂದ ಮೆಟ್ರೋ ರೈಲು ಮತ್ತೆ  ಆರಂಭಗೊಳ್ಳಲಿದೆ. ಈ ಸಂಬಂಧ ಬೆಂಗಳೂರುಮೆಟ್ರೋ ರೈಲು ನಿಗಮದ (ಬಿಎಂ ಆರ್‌ಸಿಎಲ್‌) ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement

ಮೆಟ್ರೊ ರೈಲು ಸಂಚಾರ ಆರಂಭವಾದ ನಂತರ ಯಾವ ರೀತಿ  ಕಾರ್ಯ ನಿರ್ವಹಿಸಬೇಕು?  ಸಾಮಾಜಿಕ ಅಂತರ ಕಾಯ್ದುಕೊಳ್ಳುವು ದು, ರೈಲಿನಲ್ಲಿ ಮಾರ್ಕಿಂಗ್‌ ಸೇರಿದಂತೆ ಮತ್ತಿತರ ಅಂಶಗಳ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 60 ವರ್ಷ ಮೇಲ್ಪಟ್ಟವರು ಮತ್ತು  10 ವರ್ಷ ವಯಸ್ಸಿನ ಒಳಗಿನವರಿಗೆ ಮೆಟ್ರೋದಲ್ಲಿ ಸಂಚರಿಸಲು ಅವಕಾಶ ನೀಡ ಲಾಗುವುದಿಲ್ಲ. ಪ್ರಯಾಣಿಕರೆಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ನಿಲ್ದಾಣಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗುತ್ತದೆ.

ಸ್ಮಾರ್ಟ್‌  ರ್ಡ್‌  ಹೊಂದಿದವರಿಗೆ ಮಾತ್ರ ಅವಕಾಶ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದರು. “ಮೆಟ್ರೊ ರೈಲು ಸೇವೆ ಪುನಾರಂಭಕ್ಕೆ ಸಿದ್ಧತೆಯಂತೂ ನಡೆದಿದೆ. ಆದರೆ, ದಿನಾಂಕ ಇನ್ನೂ ಖಚಿತವಾಗಿಲ್ಲ. ಇದಕ್ಕಾಗಿ ಕೇಂದ್ರದ ಸೂಚನೆಯನ್ನು  ಎದುರುನೋಡುತ್ತಿದ್ದೇವೆ. ಸದ್ಯಕ್ಕೆ ಮೇ 31ರವರೆಗೆ ಮೆಟ್ರೋ ಸೇವೆ ನಿಷೇಧಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next