Advertisement
ಏಕೆಂದರೆ, ಪ್ರತಿ ಬಾರಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಹಣದ ವಿಷಯವೇ ಗಲಾಟೆಗೆ ಕಾರಣವಾಗುತ್ತಿತ್ತು. ಈಗ ದೊಡ್ಡ ಮೊತ್ತದ ಬಾಕಿ ಉಳಿದಿಲ್ಲ. 2013-14ರಿಂದ 2015-16ರವರೆಗೆ ಎಲ್ಲ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ 87 ಕೋಟಿ ರೂ. ಮಾತ್ರ.
ಬೆಳೆಗಾರರ ಸಂಘದ ಒತ್ತಾಯ. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿಗೆ ಶೇ.9.5ರಷ್ಟು ಇಳುವರಿ ಇರುವ ಪ್ರತಿ ಟನ್ ಕಬ್ಬಿಗೆ 2,550 ರೂ. ಎಫ್ಆರ್‌ಪಿ ನಿಗದಿಪಡಿಸಿದೆ. ರಾಜ್ಯದ ಸರಾಸರಿ ಇಳುವರಿ ಶೇ.10.3 ಆಗಿರುವುದರಿಂದ ರೈತರಿಗೆ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ. ಸಿಗಲಿದೆ ಎಂದು ಅಂದಾಜಿಸಲಾಗಿದೆ. ಇದರ ಮೇಲೆ ಸಕ್ಕರೆ ಕಾರ್ಖಾನೆ ನೀಡಬೇಕಾದ ಹೆಚ್ಚುವರಿ ದರವನ್ನು ರಾಜ್ಯ ಸರ್ಕಾರ ನಿರ್ಧರಿಸಬೇಕು. ಅದರಂತೆ, ಎಫ್ಆರ್‌ಪಿ ದರದ ಮೇಲೆ ಪ್ರತಿ ರೂ. ಕೊಡಲು ಉತ್ತರ ಕರ್ನಾಟಕ ಸಕ್ಕರೆ ಕಾರ್ಖಾನೆ ಮಾಲೀಕರು ಮುಂದೆರೆ. ಆದರೆ, ದಕ್ಷಿಣ ಕರ್ನಾಟಕ ಭಾಗದ ಕಾರ್ಖಾನೆ ಮಾಲೀಕರು ಈ ಬಗ್ಗೆ ಇನ್ನೂಮ ತೀರ್ಮಾನಕ್ಕೆ ಬಂದಿಲ್ಲ. ಇದಕ್ಕಾಗಿ ಸರ್ಕಾರ ಏಳು ದಿನಗಳ ಗಡುವು ನೀಡಿದೆ. ರಾಜ್ಯ ಸರ್ಕಾರವೇ ಏಕಪ್ರಕಾರವಾಗಿರ ನಿಗದಿಪಡಿಸಬೇಕು ಎನ್ನುವುದು ರೈತರ ವಾದ.
Related Articles
Advertisement
ಈ ಮಧ್ಯೆ, ಕಬ್ಬಿನ ವಿಚಾರದಲ್ಲಿ ಅಧಿವೇಶನದಲ್ಲಿ ಯಾವ ನೀತಿ ಅನುಸರಿಸಬೇಕು ಅನ್ನುವ ಬಗ್ಗೆ ಪ್ರತಿಪಕ್ಷಗಳು ಇನ್ನೂ ತೀರ್ಮಾನಿಸಿಲ್ಲ.
ಜೊತೆಗೆ ಯಾವ ವಿಷಯ ಮುಂದಿಟ್ಟುಕೊಂಡು ಹೋರಾಟ ಮಾಡಬೇಕು ಅನ್ನುವ ಬಗ್ಗೆ ಕಬ್ಬು ಬೆಳೆಗಾರರಲ್ಲಿ ಸ್ಪಷ್ಟತೆ ಇಲ್ಲ. ಬಾಕಿ ಹಣಕ್ಕಿಂತ ಹೆಚ್ಚಾಗಿ ಪ್ರಸಕ್ತ ಸಾಲಿನ ದರ ನಿಗದಿ ವಿಚಾರ ಇಟ್ಟುಕೊಂಡು ಹೋರಾಡುವ ಮಾತುಗಳು ಕಬ್ಬು ಬೆಳೆಗಾರರಲ್ಲಿ ಕೇಳಿ ಬರುತ್ತಿವೆ .
3 ಕೋಟಿ ಮೆಟ್ರಿಕ್ ಟನ್ ಕಬ್ಬು ಅರೆಯುವ ನಿರೀಕ್ಷೆ ಮೂರು ವರ್ಷಗಳಲ್ಲಿ ಕಬ್ಬು ಅರೆದ ಕಾರ್ಖಾನೆಗಳು, ಅರೆದ ಕಬ್ಬಿನ ಪ್ರಮಾಣ, ಪಾವತಿಸಬೇಕಾಗದ ಹಣ, ಪಾವತಿಸಿರುವ ಮೊತ್ತ ಹಾಗೂ ಬಾಕಿ ಉಳಿಸಿಕೊಂಡಿರುವುದು ಇಂತಿದೆ. 2017-18ರಲ್ಲಿ ಈವರೆಗೆ 16 ಕಾರ್ಖಾನೆಗಳು ಕಬ್ಬು ಅರೆಯುವುದನ್ನು ಪ್ರಾರಂಭಿಸಿದ್ದು, ಅಕ್ಟೋಬರ್ 31ರವರೆಗೆ 2.5 ಕೋಟಿ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ. ಈ ಹಂಗಾಮಿನಲ್ಲಿ ಒಟ್ಟು 3 ಕೋಟಿ ಮೆಟ್ರಿಕ್ ಟನ್ ಕಬ್ಬು ಅರೆಯುವ ನಿರೀಕ್ಷೆಯಿದೆ.
ರಾಜ್ಯ ಸರ್ಕಾರ ದರ ನಿಗದಿಪಡಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಕೇಂದ್ರ ಸರ್ಕಾರದ ಎಫ್ಆರ್‌ಪಿ ದರ ನ್ಯಾಯಸಮ್ಮತವಾಗಿಲ್ಲ. ಉತ್ತರ ಪ್ರದೇಶದಲ್ಲಿ ಅಲ್ಲಿನ ಸರ್ಕಾರದ ಪ್ರತಿ ಟನ್ ಕಬ್ಬಿಗೆ 3,250 ರೂ. ಇದೆ. ಗುಜರಾತಿನಲ್ಲಿ 4 ಸಾವಿರ ರೂ. ಇದೆ. ಮಹಾರಾಷ್ಟ್ರದಲ್ಲಿ ಎಫ್ಆರ್‌ಪಿ ದರದ ಮೇಲೆ 200 ರೂ. ನಿಗದಿಪಡಿಸಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ರಾಜ್ಯ ಸರ್ಕಾರ ನಿಗದಿ ಮಾಡುತ್ತಿಲ್ಲ. ಕೇಂದ್ರದ ಎಫ್ಆರ್‌ಪಿ ಮೇಲೆ ಉತ್ತರಕರ್ನಾಟಕದ ಕಾರ್ಖಾನೆಗಳು ಪ್ರತಿ ಟನ್‌ಗೆ 200 ರೂ. ಕೊಡಬೇಕು ಎಂದು ಸರ್ಕಾರ ಹೇಳಿದೆ. ಆದರೆ, ಹೈದರಾಬಾದ್ ಕರ್ನಾಟಕ ಭಾಗದ ಕಾರ್ಖಾನೆಗಳು ಇದನ್ನು ಒಪ್ಪಿಲ್ಲ. ದಕ್ಷಿಣ ಕರ್ನಾಟಕ ಕಾರ್ಖಾನೆಗಳು ಇನ್ನೂ ನಿರ್ಧಾರವೇ ಮಾಡಿಲ್ಲ. ಶುಕ್ರವಾರ (ನ.10ರಂದು) ಹುಬ್ಬಳ್ಳಿಯಲ್ಲಿ ಸಭೆ ಕರೆಯಲಾಗಿದ್ದು, ಅಧಿವೇಶನದ ವೇಳೆ ಯಾವ ರೀತಿ ಹೋರಾಡಬೇಕೆಂಬ ಬಗ್ಗೆ ತೀರ್ಮಾನಿಸಲಾಗುವುದು.
– ಕುರುಬೂರು ಶಾಂತಕುಮಾರ್,
ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ – ರಫೀಕ್ ಅಹಮದ್