Advertisement
ಪಟ್ಟಣದ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ಕನ್ನಡ ನುಡಿ ಸಂಭ್ರಮ-29ರ ವಿಶೇಷ ಸಾಂಸ್ಕೃತಿಕ ಸಮಾರಂಭ ಡಿ. 12ರಿಂದ ಡಿ. 14ರ ವರೆಗೆ ಮೂರು ದಿನ ವೈಶಿಷ್ಟéಪೂರ್ಣವಾಗಿ ನೆರವೇರಲಿದ್ದು, ಸಮಾರಂಭದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಕನ್ನಡ ನುಡಿ ಸಂಭ್ರಮಕ್ಕೆ ದಿನಗಣನೆ ಆರಂಭಗೊಂಡಿರುವಂತೆಯೇ ಪಟ್ಟಣ ಕನ್ನಡಮಯವಾಗುತ್ತಿದೆ. ಸಮಾರಂಭಕ್ಕೆ ಶುಭ ಹಾರೈಸುವ ಕಟೌಟ್ ಗಳು, ಫ್ಲೆಕ್ಸ್‌ಗಳು, ಕನ್ನಡದ ಧ್ವಜಗಳು, ಕನ್ನಡ ಬಾವುಟದ ಕಮಾನುಗಳು, ಬಂಟಿಂಗ್ಸ್‌ಗಳ ಕಲರವ ಪಟ್ಟಣದ ಎಲ್ಲೆಡೆ ಕಂಡುಬರುತ್ತಿದೆ. ಮನೆ–ಮನಗಳ ಹಬ್ಬವಾಗುತ್ತಿರುವ ಕನ್ನಡ ನುಡಿ ಸಂಭ್ರಮ ಸಮಾರಂಭವನ್ನು ಒಂದೆಡೆ ಸಾಹಿತ್ಯಾಸಕ್ತ ಬಳಗ ಉತ್ಸಾಹದಿಂದ ಎದುರು ನೋಡುತ್ತಿದ್ದರೇ, ಇತ್ತ ಮನೆಯಂಗಳವನ್ನು ಕನ್ನಡಮಯಗೊಳಿಸುತ್ತಿರುವ ಕನ್ನಡಿಗರ ಕನ್ನಡ ಪ್ರೀತಿಗೆ ಪಾರವೇ ಇಲ್ಲದಂತಾಗಿದೆ.
Related Articles
Advertisement
-ಪ್ರವೀಣಕುಮಾರ ಶಿ.ಅಪ್ಪಾಜಿ