ತಿಪಟೂರು: ತಾಲೂಕಾದ್ಯಂತ ಈಗಾಗಲೇ ಗ್ರಾಪಂ ಚುನಾವಣೆಗೆ ತಯಾರಿ ನಡೆಯು ತ್ತಿದ್ದು ತಿಪಟೂರು ತಾಲೂಕು 2ನೇ ಹಂತದ ಚುನಾವಣೆಗೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆಎಂದು ತಹಶೀಲ್ದಾರ್‌ಚಂದ್ರಶೇಖರ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿಡಿ.27ರಂದುಚುನಾವಣೆನಡೆಯಲಿದ್ದು, ನಾಮಪತ್ರ ಸಲ್ಲಿಸಲು ಡಿ.16 ಕೊನೆ ದಿನವಾಗಿದ್ದು, ರಜೆ ದಿನ ಹೊರತುಪಡಿಸಿ ಬೆಳಗ್ಗೆ 10.30ರಿಂದ 3 ಗಂಟೆಯೊಳಗೆ ಸಲ್ಲಿಸ ಬಹುದಾಗಿದೆ. 17ಕ್ಕೆ ನಾಮಪತ್ರಗಳ ಪರಿಶೀಲನೆ, ಡಿ.19ರ 3ಗಂಟೆಯೊಳಗೆ ನಾಮಪತ್ರ ವಾಪಸ್ ಪಡೆಯಬಹುದಾಗಿದೆ.
ನಾಮಪತ್ರ ಹಿಂಪಡೆಯಲು ಡಿ.19 ಕೊನೆಯ ದಿನವಾಗಿದೆ. ತಾಲೂಕಿನಲ್ಲಿಒಟ್ಟು 26 ಗ್ರಾಪಂಗಳಿದ್ದು, 202ಮತಗಟ್ಟಿಗಳ ಪೈಕಿ 188 ಮೂಲಮತಗಟ್ಟೆಗಳಿದ್ದು ಹೆಚ್ಚುವರಿಯಾಗಿ14 ಮತಗಟ್ಟೆಗಳನ್ನು ಮತದಾರರ ಅನುಕೂಲಕ್ಕಾಗಿ ಸ್ಥಾಪಿಸಲಾಗಿದೆ. ಅದರಲ್ಲಿ 25 ಸೂಕ್ಷ್ಮ ಮತಗಟ್ಟೆ, 28 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಮತದಾರರು ಡಿ.15 ರೊಳಗೆ ತಮ್ಮ ವ್ಯಾಪ್ತಿಯ ಬಿಎಲ್‌ಒಗಳನ್ನು ಅಥವಾ ಚುನಾವಣಾ ಶಾಖೆಯನ್ನು ಸಂಪರ್ಕಿಸಿ ಮತಪಟ್ಟಿಗೆ ಸೇರ್ಪಡೆಯಾಗಬಹುದು.
ದೂರುಗಳಿದ್ದಲ್ಲಿ ಕಂಟ್ರೋಲ್ ರೂಂ08134- 251039 ಅಥವಾ ಮದ್ಯ ಮಾರಾಟ ಸಂಬಂಧ ಅಬಕಾರಿ ಇಲಾಖೆ ದೂ.08134- 254574 ಸಂಪರ್ಕಿಸಬಹುದು. ಅಲ್ಲದೆ ತಹಶೀಲ್ದಾರ್ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದ್ದು, ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರಿದ್ದು ಅವರೂ ಕಾರ್ಯನಿರ್ವಹಿಸಲಿದ್ದಾರೆ.
5 ಜನ ಮಾತ್ರ ಕೋವಿಡ್ ಮಾರ್ಗಸೂಚಿ ಅನುಸರಿಸಿ ಪ್ರಚಾರದಲ್ಲಿ ತೊಡಗಬೇಕು. ಮತಗಟ್ಟೆಗಳಲ್ಲಿ ಶೌಚಾಲಯ, ವಿದ್ಯುತ್, ನೀರು ಸೇರಿದಂತೆ ಎಲ್ಲಾ ವ್ಯವಸ್ಥೆಮಾಡಲಾಗಿದ್ದು, ಗ್ರಾಪಂ ಚುನಾವಣೆಯು ಶಾಂತಿಯುತವಾಗಿ ನಡೆಯಲು ಕ್ರಮಕೈಗೊಳ್ಳಲಾಗಿದೆ.
– ಸುದರ್ಶನ್, ತಾಪಂಇಒ