ಚನ್ನಪಟ್ಟಣ: ಕೋವಿಡ್ ವೈರಸ್ ನಿಯಂತ್ರಣಕ್ಕೆ ಲಸಿಕೆಯ ಮುನ್ಸೂಚನೆ ನೀಡಲಾಗಿದ್ದು, ಮೊದಲೆನೆ ಹಂತದಲ್ಲಿಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಹಾಗೂ ಕೋವಿಡ್ ವಾರಿಯರ್ಸ್‌ಗಳಿಗೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಾಲೂಕು ದಂಡಾಧಿಕಾರಿ ನಾಗೇಶ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್ ವೈರಸ್ ಲಸಿಕೆಯ ಸಿದ್ಧತಾ ಪಟ್ಟಿ ಹಾಗೂ ಪಲ್ಸ್‌ಪೋಲಿಯೋ ಲಸಿಕೆ ನಿರ್ಮೂಲನ ಆಂದೋಲನಾ ಸಭೆಯಲ್ಲಿ ಮಾತನಾಡಿದರು.
ಮನುಕುಲದ ಮಹಾಮಾರಿಯಾಗಿ ಪರಿಣಮಿಸಿ, ಪ್ರತಿಯೊಬ್ಬರಿಗೂ ಮಾರಕವಾದಕೊರೊನಾವೈರಸ್‌ಗೆಲಸಿಕೆಯನ್ನುನೀಡಲು ಮೊದಲ ಹಂತದಲ್ಲಿ ಯಾರಿಗೆ ಲಸಿಕೆಯನ್ನು ನೀಡಬೇಕು ಎಂದು ಸರ್ಕಾರಿ ಸುತ್ತೋಲೆಯಂತೆ ಸಿದ್ಧತಾ ಪಟ್ಟಿ ತಯಾರಿಸಲಾಗುತ್ತಿದೆ ಹಾಗೂ 2021ರಜನವರಿ ತಿಂಗಳ 17ರ ಭಾನುವಾರ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ತಮ್ಮ ಪ್ರಾಣದ ಹಂಗನ್ನು ತೊರೆದು ದಿನದ 24 ತಾಸುಗಳು ಕಾಲ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ ಅಧಿಕಾರಿವರ್ಗಹಾಗೂಸ್ವಯಂಸೇವಕರಿಗೆಮೊದಲಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಸರ್ಕಾರಿ ಆದೇಶದಂತೆ ಪಟ್ಟಿಯನ್ನು ಪಡಿಸಿ ನೀಡಲಾಗುತ್ತಿದೆ ಎಂದು ತಿಳಿಸಿದರು.
2021ರ ಜ.17ರ ಭಾನುವಾರದೇಶಾದ್ಯಂತ ಪಲ್ಸ್‌ಪೋಲಿಯೋ ಲಸಿಕೆ ಹಾಕುವ ಬೃಹತ್ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಎಲ್ಲಾ ಇಲಾಖೆಗಳುಆದರಲ್ಲೂ ಆರೋಗ್ಯ ಇಲಾಖೆ ಪಾಲ್ಗೊಳ್ಳುವ ಈ ಕಾರ್ಯ ಕ್ರಮವನ್ನು ಪ್ರತಿ ಯೊಬ್ಬರುಸಹಕರಿಸಿಪಲ್ಸ್‌ಪೋಲಿಯೋ ಕಾರ್ಯಕ್ರಮಯಶಸ್ವಿಗೊಳಿಸಬೇಕೆಂದುಮನವಿ ಮಾಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ಧಲಿಂಗಯ್ಯ, ತಾಲೂಕು ಆರೋಗ್ಯಾಧಿಕಾರಿ ಟಿ.ರಾಜು, ತಾ. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ಇದ್ದರು.