ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಬಗೆಯ ವಾಹನಗಳಿಗೆ “ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್’ (ಗರಿಷ್ಠ ಭದ್ರತೆ ಫಲಕ) ಅಳವಡಿ ಸುವ ಯೋಜನೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಸುಪ್ರೀಂಕೋರ್ಟ್ ತೀರ್ಪು ಹಾಗೂ ಕೇಂದ್ರ ಸರ್ಕಾರ ಆದೇಶವಿದ್ದರೂ ಕರ್ನಾಟಕದಲ್ಲಿ “ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್’ ಅಳವಡಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿ ವಕೀಲ ಕೆ.ಬಿ. ವಿಜಯಕುಮಾರ್ ಸಲ್ಲಿಸಿದ್ದ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀ ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಸರ್ಕಾರಿ ವಕೀಲ ವಿ. ಶ್ರೀನಿಧಿಯವರು ಪ್ರಮಾಣಪತ್ರ ಸಲ್ಲಿಸಿ, ಎಲ್ಲಾ ಬಗೆಯ ವಾಹನ ಗಳಿಗೆ “ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್’ (ಗರಿಷ್ಠ ಭದ್ರತೆಯ ನೋಂದಣಿ ಫಲಕ) ಅಳವಡಿಸುವ ಯೋಜನೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ . ರಾಜ್ಯ ಸರ್ಕಾರ 2018ರ ಏಪ್ರಿಲ್‌ನಿಂದ 2019ರ ಆಗಸ್ಟ್‌ವರೆಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸದ ಒಟ್ಟು 20,487 ವಾಹನಗಳಿಂದ 4.6 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ಒದಗಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಕೇಂದ್ರ ಮೋಟಾರು ವಾಹನ ಕಾಯ್ದೆ-1989ರ ಸೆಕ್ಷನ್ 50 ಮತ್ತು 51ರ ಅಡಿಯಲ್ಲಿ ನಿಗದಿತ ನಮೂನೆಯಲ್ಲಿ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸದ ಖಾಸಗಿ ಹಾಗೂ ವಾಣಿಜ್ಯ ಸೇರಿದಂತೆ ಎಲ್ಲಾ ಬಗೆಯ ವಾಹನಗಳ ವಿರುದ್ಧ ವಿಶೇಷ ಕಾರ್ಯಾ ಚರಣೆ ನಡೆಸಿ ದಂಡ ವಿಧಿಸಬೇಕು. ಜತೆಗೆ, ಈ ಕುರಿತಂತೆ ಕೈಗೊಂಡ ಕ್ರಮಗಳ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಸರ್ಕಾರ ಹೇಳಿದ್ದಿಷ್ಟು: “ಮೋಟಾರು ವಾಹನ ಕಾಯ್ದೆ-1989’ರ ಸೆಕ್ಷನ್ 50 ಮತ್ತು 51ರಂತೆ ಎಲ್ಲ ವಾಹನಗಳಿಗೆ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಗರಿಷ್ಠ ಭದ್ರತೆಯ (ಹೈ ಸೆಕ್ಯೂರಿಟಿ) ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕು. ಈ ಬಗ್ಗೆ 2018ರಲ್ಲಿ ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರ ಆದೇಶ ಹೊರಡಿಸಿವೆ. ಎಲ್ಲ ರಾಜ್ಯಗಳಲ್ಲಿ 2019ರ ಏ.1ರಿಂದ “ಎಚ್‌ಎಸ್‌ಆರ್‌ಪಿ’ (ಗರಿಷ್ಠ ಭದ್ರತೆಯ ಫಲಕ) ಜಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
2018ರ ಏಪ್ರಿಲ್‌ನಿಂದ 2019ರ ಆಗಸ್ಟ್‌ವರೆಗೆ ರಾಜ್ಯಾದ್ಯಂತ 5,85,830 ವಾಹನ ತಪಸಾಣೆ ನಡೆಸಿ, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸದ 20,487 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2019ರ ಏ.1ರ ನಂತರ ನಿರ್ಮಾಣವಾದ ವಾಹನಗಳಿಗೆ ಆಯಾ ತಯಾರಿಕಾ ಸಂಸ್ಥೆಗಳಿಂದಲೇ ಸೆಕ್ಯೂರಿಟಿ ನಂಬರ್ ಅಳವಡಿಕೆ ಜವಾಬ್ದಾರಿ ಹೊಂದಿವೆ ಎಂದು ಸರ್ಕಾರ ಕೋರ್ಟ್‌ಗೆ ಭರವಸೆ ನೀಡಿದೆ.