Advertisement
ಡಿ.11ರಂದು ಅಧಿಸೂಚನೆ ಹೊರಡಿಸಿದ ದಿನದಿಂದ ಇಲ್ಲಿಯವರೆಗೆ ಸಾಮಾನ್ಯ 637, ಮಹಿಳಾ ಕ್ಷೇತ್ರ 457 ಸೇರಿ ಒಟ್ಟು1094ನಾಮಪತ್ರ ಸಲ್ಲಿಕೆಯಾಗಿದ್ದುಚುನಾವಣೆಗೆಸಿದ್ಧತೆಗಳು ಭರದಿಂದ ಸಾಗಿವೆ.
Related Articles
Advertisement
ದೊಡ್ಡಬಳ್ಳಾಪುರ: ಡಿ.27ರಂದು 2ನೇ ಹಂತದಲ್ಲಿ ನಡೆಯಲಿರುವ ತಾಲೂಕಿನ 25 ಗ್ರಾಪಂಗಳ 443 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಬಿರುಸಾಗಿ ನಡೆದಿದ್ದು ಗ್ರಾಮಗಳಲ್ಲಿ ಚುನಾವಣೆ ಕಾವು ಏರತೊಡಗಿದೆ.
ಡಿ.11ರಂದು ಅಧಿಸೂಚನೆ ಹೊರಡಿಸಿದ ದಿನದಿಂದ ಇಲ್ಲಿಯವರೆಗೆ ಸಾಮಾನ್ಯ 637, ಮಹಿಳಾ ಕ್ಷೇತ್ರ 457 ಸೇರಿ ಒಟ್ಟು1094ನಾಮಪತ್ರ ಸಲ್ಲಿಕೆಯಾಗಿದ್ದುಚುನಾವಣೆಗೆಸಿದ್ಧತೆಗಳು ಭರದಿಂದ ಸಾಗಿವೆ.
ಡಿ.16 ರಂದು ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿದೆ. ಡಿ.17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.19 ರಂದುಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೇ ದಿನವಾಗಿದೆ ಎಂದು ಚುನಾವಣಾ ಶಿರಸ್ತೇದಾರ್ ಕೆ.ಕಿರಣ್‌ಕುಮಾರ್ ತಿಳಿಸಿದ್ದಾರೆ.
ಪಕ್ಷ ರಹಿತ ಚುನಾವಣೆ: ಗ್ರಾಪಂಗಳ ಚುನಾವಣೆಯನ್ನು ಪಕ್ಷ ರಹಿತವಾಗಿನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆ ಮಾತ್ರ ಹಂಚಿಕೆ ಮಾಡಲಾಗುತ್ತದೆ. ಪಕ್ಷ ರಹಿತಚುನಾವಣೆ ಯಶಸ್ವಿಗೊಳಿಸಲು ರಾಜಕೀಯ ಪಕ್ಷಗಳು ಸಭೆ-ಸಮಾರಂಭ ಏರ್ಪಡಿಸಿ, ವೇದಿಕೆ ಮೇಲೆ ಪಕ್ಷದ ಬಾವುಟ, ಬ್ಯಾನರ್ ಬಳಸುವಂತಿಲ್ಲ. ಸ್ಫರ್ಧಿಸುವ ಅಭ್ಯರ್ಥಿಗಳು ತಮ್ಮ ಪಕ್ಷದ ಅಥವಾ ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು, ಅವರ ಪರವಾಗಿ ಮತ ನೀಡಲು ಮತದಾರರನ್ನುಕೋರುವಂತಿಲ್ಲ.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ರಾಜಕೀಯ ಮುಖಂಡರ ಭಾವಚಿತ್ರ ಅಥವಾ ಪಕ್ಷದ ಚಿಹ್ನೆ ಇರುವ ಕರಪತ್ರ ಮುದ್ರಿಸುವುದು, ಹಂಚುವುದು ಮಾಡುವಂತಿಲ್ಲ. ರಾಜಕೀಯ ಮುಖಂಡರ ಭಾವಚಿತ್ರ ರಾಜಕೀಯ ಪಕ್ಷಗಳ ಚಿಹ್ನೆ ಇರುವ ಕರಪತ್ರ, ಕಟೌಟ್, ಬ್ಯಾನರ್ ಮತ್ತು ಬಂಟಿಂಗ್‌ಗಳ ಮೂಲಕ ಪ್ರಚಾರ ಮಾಡುವಂತಿಲ್ಲ ಹಾಗೂ ಚುನಾವಣೆಗೆ ಸ್ಫರ್ಧಿಸಿರುವ ಅಭ್ಯರ್ಥಿಗಳು, ಟಿ.ವಿ.ಮಾಧ್ಯಮ, ಪತ್ರಿಕೆ ಮೂಲಕ ರಾಜಕೀಯ ಮುಖಂಡರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆ ಬಳಸಿ ಜಾಹೀರಾತು ನೀಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.