Advertisement

ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಭರದ ಸಿದ್ಧತೆ

03:07 PM Mar 28, 2017 | |

ಮುಳ್ಳೇರಿಯಾ: ಮುಳ್ಳೇರಿಯಾದ ತುಳುನಾಡು ಕಬ್ಬಡಿ ಅಕಾಡೆಮಿ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾಟ ಎ.2 ರಿಂದ 6ರ ವರೆಗೆ ಮುಳ್ಳೇರಿಯಾದ ಪೂವಡ್ಕದಲ್ಲಿರುವ ಗ್ರಾ.ಪಂ. ಮೈದಾನದಲ್ಲಿ ನಡೆಯಲಿದೆ.ರಾಷ್ಟ್ರೀಯ ಮಟ್ಟದ ಆಯ್ದ 12 ಪ್ರಖ್ಯಾತ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದು, ಇದರ ಸಿದ್ಧತೆ ಭರದಿಂದ ಸಾಗುತ್ತಿದೆಯೆಂದು ತುಳು ನಾಡು  ಕಬಡ್ಡಿ ಅಕಾಡೆಮಿ ಅಧ್ಯಕ್ಷ ಸಿಜಿ ಮ್ಯಾಥ್ಯೂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಕಬಡ್ಡಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತುಳುನಾಡು ಕಬಡ್ಡಿ ಅಕಾಡೆಮಿ ಸ್ಥಾಪಿಸಲಾಗಿದೆ. ಯುವಜನರಲ್ಲಿ ಕಬಡ್ಡಿ ಬಗ್ಗೆ ಅರಿವು, ಆಸಕ್ತಿ ಮೂಡಿಸುವುದು, ಹೊಸ ಕ್ರೀಡಾಳುಗಳನ್ನು ಸೃಷ್ಟಿಸು ವುದು  ಅಕಾಡೆಮಿಯ ಗುರಿಯಾ ಗಿದ್ದು, ಇದರ ಆರಂಭಿಕ ಹಂತವಾಗಿ ಈ ರಾಷ್ಟ್ರೀಯ ಮಟ್ಟದ ಪಂದ್ಯಾಟ ಆಯೋಜಿಸಲಾಗುತ್ತಿದೆ. ಮುಂದಿನ ದಿನ ಗಳಲ್ಲಿ  ಖ್ಯಾತ   ಹಿರಿಯ ಕಬಡ್ಡಿ ಪಟು ಗಳಿಂದ ಆಸಕ್ತ ಯುವ ಕ್ರೀಡಾಳು ಗಳಿಗೆ ತರಬೇತಿ- ಮಾರ್ಗ ದರ್ಶನ ವನ್ನು ಕೇರಳ ನ್ಪೋರ್ಟ್ಸ್ ಕೌನ್ಸಿಲ್‌ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದೆಂದು ಮಾಹಿತಿ ನೀಡಿದರು.

ಎ. 2ರಿಂದ 6ರ ವರೆಗೆ ನಡೆಯಲಿರುವ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ವೆತ್ತ ವಿಜಯ ಬ್ಯಾಂಕ್‌, ಬಿ.ಎಸ್‌.ಎಫ್‌, ಇಂಡಿಯನ್‌ ಆರ್ಮಿ, ಇಂಡಿಯನ್‌ ಏರ್‌ವೆàಸ್‌, ಏರ್‌ ಇಂಡಿಯಾ ಸಹಿತ ವಿವಿಧ ತಂಡಗಳು ಭಾಗವಹಿಸಲಿವೆ. ಪಂದ್ಯಾಟ ವೀಕ್ಷಣೆಗೆ 6 ಸಾವಿರ ಮಂದಿ ಕುಳಿತು ವೀಕ್ಷಿಸುವ ಸೌಕರ್ಯ ಏರ್ಪಡಿಸಲಾಗುತ್ತಿದೆ. ವಿಜೇತ ತಂಡಕ್ಕೆ ಪ್ರಥಮ 2 ಲಕ್ಷ ರೂ, ದ್ವಿತೀಯ ಒಂದೂವರೆ ಲಕ್ಷ ರೂ. ಸಹಿತ ಶಾಶ್ವತ ಫಲಕ ನೀಡಲಾಗುವುದು. 35 ಲ. ರೂ.ಗಳ ಅಂದಾಜು ಖರ್ಚು ನಿರೀಕ್ಷಿಸ ಲಾಗಿದೆ. ಸಂಜೆ 6ರಿಂದ ರಾತ್ರಿ 12 ಗಂಟೆಗಳ ವರೆಗೆ ಪಂದ್ಯಾಟ ನಡೆಯ ಲಿದ್ದು, ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳ ಲಾಗುವುದೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಶಂಕರನ್‌ ಕೆ., ನಾಸರ್‌ ಆದೂರು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next