Advertisement

ನೀವೇ ತಯಾರಿಸಿ ಶ್ಯಾಂಪೂ

06:00 AM Sep 28, 2018 | |

ಅಣ್ಣ-ಅತ್ತಿಗೆ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಅವರ ಮಗಳಿಗೆ ತಲೆಗೂದಲ ಬಗ್ಗೆ ಎಲ್ಲಿಲ್ಲದ ಕಾಳಜಿ. ಪ್ರತಿ ಬಾರಿ ಅಜ್ಜನ ಮನೆಗೆ ಬಂದಾಗಲೂ ಅಲೋವೇರಾ, ಮೆಹಂದಿ ಸೊಪ್ಪಿನ ಪೇಸ್ಟ್‌ ತಲೆಗೆ ಹಚ್ಚಿ , ಕಡ³ದಂಜಿ ಕೋಲಿನಿಂದ ತಾನೇ ತಯಾರಿಸಿದ ಗೊಂಪಿನಲ್ಲಿ ಸ್ನಾನ ಮಾಡಿ ಆರೈಕೆ ಮಾಡುವುದೆಂದರೆ ಅವಳಿಗೆ ಅಚ್ಚುಮೆಚ್ಚು. ಅಜ್ಜನ ಮನೆಯಿಂದ ಯಾರೇ ಬರುವುದಿದ್ದರೂ ಅವಳ ಮೊದಲ ಬೇಡಿಕೆ “ಗೊಂಪಿನ ಕೋಲು’. ಅವಳನ್ನು ನೋಡಿದರೆ ಅಬ್ಟಾ ಈ ಹುಡುಗಿ, ಮಾಡರ್ನ್ ಯುಗದಲ್ಲಿ ನೈಸರ್ಗಿಕವಾಗಿ ದೊರೆಯುವ ಗೊಂಪಿಗೆ ಇಷ್ಟು ಮರುಳಾಗಿದ್ದಾಳಲ್ಲ’ ಎಂದು ಹೆಮ್ಮೆಯಾಗುತ್ತದೆ.

Advertisement

ಅಜ್ಜಿ , ಮುತ್ತಜ್ಜಿಯ ಕಾಲದ ನೈಸರ್ಗಿಕ ಶ್ಯಾಂಪೂ
ಹೆಣ್ಣಿನ ಅಂದಚಂದ ಹೆಚ್ಚಿಸುವಲ್ಲಿ ತಲೆಗೂದಲ ಪಾತ್ರ ಬಹು ದೊಡ್ಡದು. ನೀಳವಾಗಿರಲಿ ಅಥವಾ ಚಿಕ್ಕದಿರಲಿ ಅಂದವಾಗಿ, ಸಿಲ್ಕಿà ಹೇರ್‌ ಬೇಕೆಂಬುದು ಎಲ್ಲ ಹೆಣ್ಣುಮಕ್ಕಳ ಬಯಕೆ. ಅದಕ್ಕಾಗಿಯೇ ಹೇರ್‌ ಸ್ಟ್ರೇಯrನಿಂಗ್‌, ಹೇರ್‌ ಕಂಡೀಷನರ್‌ ಮುಂತಾದ ಕಸರತ್ತು ನಡೆಸುತ್ತೇವೆ. ಅದಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸಲೂ ಹಿಂದೆಮುಂದೆ ನೋಡುವುದಿಲ್ಲ.

ಹಿಂದೆಲ್ಲ ಈಗಿನಂತೆ ಶ್ಯಾಂಪೂ, ಹೇರ್‌ ಕಂಡೀಷನರ್‌ ಇರಲಿಲ್ಲ. ಬ್ಯೂಟಿಪಾರ್ಲರ್‌ಗೆ ಹೋಗುತ್ತಿದ್ದವರ ಸಂಖ್ಯೆಯೂ ವಿರಳ. ಬದಲಾಗಿ ಮನೆಯಲ್ಲೇ ಗೊಂಪು ತಯಾರಿಸಿ ಅದರಿಂದ ತಲೆಗೂದಲನ್ನು ತೊಳೆದು ಆರೈಕೆ ಮಾಡುತ್ತಿದ್ದರು. ಇದು ಕೂದಲನ್ನು ಆರೋಗ್ಯವಾಗಿ, ನೀಳವಾಗಿ ಕಾಂತಿಯುಕ್ತವಾಗಿರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ, ಕಾಲ ಸರಿದಂತೆ ನಮ್ಮ ಅಜ್ಜಿ, ಮುತ್ತಜ್ಜಿಯ ಕಾಲದಲ್ಲಿ ಬಳಸುತ್ತಿದ್ದ ಗೊಂಪು ತೆರೆಮರೆಗೆ ಸರಿದಿದೆ.

ಏನಿದು ಗೊಂಪು?
ಕಡ³ದಂಜಿ, ಬಣು³ , ಇರುಪ್ಪೆ (ಎರಪ್ಪೆ) ಮುಂತಾದ ಸಸ್ಯಗಳಿಂದ ಇದನ್ನು ತಯಾರಿಸಲಾಗುತ್ತದೆ. ಹೆಚ್ಚಾಗಿ ಎಲ್ಲ ಮನೆಗಳಲ್ಲೂ ಇರುವ ದಾಸವಾಳ ಗಿಡದ ಎಲೆಗಳಿಂದಲೂ ಗೊಂಪು ತಯಾರಿಸಬಹುದು. ಕಡ³ದಂಜಿಯಿಂದ ಗೊಂಪು ತಯಾರಿಸಲು ಮೊದಲು ಈ ಸಸ್ಯದ ಕೋಲಿನ ತೊಗಟೆಯನ್ನು ತೆಗೆಯಬೇಕು. ಸಲೀಸಾಗಿ ತೆಗೆಯಬಹುದಾದ ಈ ತೊಗಟೆಯನ್ನು ಚೆನ್ನಾಗಿ ಜಜ್ಜಿ ನೀರಲ್ಲಿ ಎರಡದಿಂದ ಮೂರು ಗಂಟೆ ನೆನೆಸಿಟ್ಟರೆ ಗೊಂಪು ತಯಾರಾಗುತ್ತದೆ. ಲೋಳೆಯಂತೆ ಇರುವ ಈ ದ್ರಾವಣವನ್ನು ಬಿಸಿ ನೀರಿನೊಂದಿಗೆ ಸೇರಿಸಿ ತಲೆಗೆ ಸ್ನಾನ ಮಾಡಬೇಕು. ಬಣು³ , ಇರುಪ್ಪೆ ಸಸ್ಯಗಳ ಎಲೆಗಳಿಂದಲೂ ಇದೇ ಮಾದರಿಯಲ್ಲಿ ಗೊಂಪು ತಯಾರಿಸಬಹುದು.

.ನೈಸರ್ಗಿಕವಾದ ಈ ಗೊಂಪು ಆರೋಗ್ಯದ ದೃಷ್ಟಿಯಿಂದ ಬಲು ಉಪಕಾರಿ. ನಿಯಮಿತವಾಗಿ ಗೊಂಪನ್ನು ಬಳಸಿ ಸ್ನಾನ ಮಾಡುವುದರಿಂದ ಡ್ಯಾಂಡ್ರಫ್, ಸೀಳುಗೂದಲು ಮುಂತಾದ ತೊಂದರೆಗಳನ್ನು ತಡೆಯಬಹುದು.

Advertisement

.ಶರೀರದಲ್ಲಿನ ಉಷ್ಣತೆಯನ್ನು ನಿವಾರಿಸುತ್ತದೆ. ಕಣ್ಣಿನ ಆರೋಗ್ಯಕ್ಕೂ ಬಲು ಸಹಕಾರಿ ಈ ಗೊಂಪು.

.ಬಾಣಂತಿಯರು ಗುಂಪು ಬಳಸಿ ತಲೆಗೆ ಸ್ನಾನ ಮಾಡುವುದರಿಂದ ಉಷ್ಣದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

.ಕಫ‌, ಶೀತ ದೇಹ ಪ್ರವೃತ್ತಿಯವರು ಗೊಂಪನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಗೊಂಪು ಉಷ್ಣತೆಯನ್ನು ನಿವಾರಿಸಿ ಶರೀರವನ್ನು ತಂಪು ಮಾಡುತ್ತದೆ. ಹಾಗಾಗಿ ಇಂಥವರಿಗೆ ಬಹುಬೇಗ ಶೀತವಾದೀತು.

.ಚಿಕ್ಕ ಮಕ್ಕಳು ದೊಡ್ಡವರು ಉಪಯೋಗಿಸುವ ಗೊಂಪು ಬಳಸಿದರೆ ಶೀತವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಅವರಿಗೆ ಬೆಳ್ಳಂಜೆ ಸೊಪ್ಪಿನ ಗೊಂಪನ್ನು ಬಳಸಬಹುದು. ಇದು ಹೆಚ್ಚು ಲೋಳೆಯಾಗುವುದಿಲ್ಲ.

ವಂದನಾ ಕೇವಳ

Advertisement

Udayavani is now on Telegram. Click here to join our channel and stay updated with the latest news.

Next