Advertisement

‘ಶಂಭೋ ಶಿವ ಶಂಕರ’ತೆರೆಗೆ ಸಿದ್ದ

03:01 PM Oct 16, 2022 | Team Udayavani |

ಹೊಸಬರ “ಶಂಭೋ ಶಿವ ಶಂಕರ’ ಚಿತ್ರ ಸೆನ್ಸಾರ್‌ ಪಾಸಾಗಿದೆ. ಚಿತ್ರಕ್ಕೆ “ಯು/ಎ’ ಪ್ರಮಾಣ ಪತ್ರ ದೊರಕಿದೆ. ಅಘನ್ಯ ಪಿಕ್ಚರ್ ಮೂಲಕ ವರ್ತೂರು ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಶಂಕರ್‌ ಕೋನಮಾನಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಅಭಯ್‌ ಪುನೀತ್‌ ನಾಯಕರಾಗಿ ನಟಿಸಿದ್ದಾರೆ. ಇವರಿಗೆ ಸೋನಾಲ್‌ ಮೊಂತೆರೋ ನಾಯಕಿ.

Advertisement

ಎಲ್ಲಾ ಓಕೆ, “ಶಂಭೋ ಶಿವ ಶಂಕರ’ ಎಂದರೆ ಏನು, ಟೈಟಲ್‌ಗ‌ೂ ಕಥೆಗೂ ಯಾವ ರೀತಿ ಲಿಂಕ್‌ ಆಗುತ್ತದೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇದು ಮೂವರು ಹುಡುಗರ ಸುತ್ತ ನಡೆಯುವ ಕಥೆ. ನಾಯಕ ಹಾಗೂ ಆತನ ಇಬ್ಬರು ಸ್ನೇಹಿತರ ಸುತ್ತ ನಡೆಯುವ ಕಥೆಯಾಗಿದ್ದು, ಆ ಮೂವರು ಹುಡುಗರ ಹೆಸರನ್ನೇ ಚಿತ್ರದ ಟೈಟಲ್‌ ಆಗಿ ಇಡಲಾಗಿದೆ.

ನಾಯಕ ಅಭಯ್‌ ಜೊತೆ ರೋಹಿತ್‌ ಹಾಗೂ ರಕ್ಷಕ್‌ ಕಾಣಿಸಿಕೊಳ್ಳುತ್ತಿದ್ದಾರೆ. “ಇದೊಂದು ಔಟ್‌ ಅಂಡ್‌ ಔಟ್‌ ಸಿನಿಮಾ. ಇಂದಿನ ಟ್ರೆಂಡ್‌ ಅನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಈಗಾಗಲೇ 52 ದಿನಗಳ ಚಿತ್ರೀಕರಣ ಪೂರೈಸಿದೆ. ಸಿನಿಮಾ ಮೂಡಿಬಂದಿರುವ ರೀತಿ ಇಡೀ ನಮ್ಮ ತಂಡಕ್ಕೆ ಖುಷಿಕೊಟ್ಟಿದೆ’ ಎನ್ನುವ ನಿರ್ದೇಶಕರು, ನಿರ್ಮಾಪಕರ ಸಿನಿಮಾ ಪ್ರೀತಿಯ ಬಗ್ಗೆ ಹೇಳಲು ಮರೆಯುವುದಿಲ್ಲ. “ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕರ ಸಿನಿಮಾ ಪ್ರೀತಿ. ನಾವು ಅಂದುಕೊಂಡದ್ದಕ್ಕಿಂತ ಎರಡು ಪಟ್ಟು ಬಜೆಟ್‌ ಹೆಚ್ಚಾದರೂ ಯಾವುದೇ ಬೇಸರ ಮಾಡದೇ, ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ’ ಎನ್ನುತ್ತಾರೆ ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next