Advertisement

2019ರ ಚುನಾವಣೆಗೆ ಈಗ್ಲೆà ತಯಾರಾಗಿ: ಶಾ

03:45 AM Apr 07, 2017 | |

ನವದೆಹಲಿ: ವಿವಿಧ ಚುನಾವಣೆಗಳಲ್ಲಿ ಸತತ ಗೆಲುವಿನ ಮೂಲಕ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ  2019ರ ಚುನಾವಣೆಗೆ ಸಿದ್ಧತೆಗೆ ಮುಂದಾಗಿದೆ.  

Advertisement

ಈ ಹಿನ್ನೆಲೆಯಲ್ಲಿ ಹಿಂದಿನ 2014ರ ಚುನಾವಣೆಯ ಗೆಲುವಿನಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳದೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಕ್ಷವನ್ನು ಗೆಲ್ಲಿಸಲು ಈಗಿಂದಲೇ ತಯಾರಾಗಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿ ಸಂಸ್ಥಾಪನಾ ದಿನದಂದು ಸಂಸದೀಯ ಸಭೆಯನ್ನು ದ್ದೇಶಿಸಿ ಮಾತನಾಡಿದ ಅವರು, ಸಂಸದರು, ರಾಜ್ಯಗಳಲ್ಲಿ ಪಕ್ಷದ ಬಲವರ್ಧನೆಗೆ ಕೆಲಸ ಮಾಡುವಂತೆ ಆದೇಶಿಸಿದ್ದಾರೆ.

ಬಡವರಿಗಾಗಿ ಕೆಲಸ ಮುಂದುವರೆಸುತ್ತೇವೆ: ಬಿಜೆಪಿ ಸಂಸ್ಥಾ ಪನಾ ದಿನದಂದು ಪ್ರಧಾನಿ ಮೋದಿ ಅವರು ಟ್ವೀಟ್‌ ಮಾಡಿದ್ದು ಕಾರ್ಯಕರ್ತರಿಗೆ ಶುಭಾಶಯ ಕೋರಿದ್ದಾರೆ. ಜೊತೆಗೆ ಭಾರತಕ್ಕಾಗಿ ಕೆಲಸ ಮಾಡುತ್ತೇವೆ. ವಿಶೇಷವಾಗಿ ಮತ್ತಷ್ಟು ಹುರುಪಿನಿಂದ ಬಡವರಿಗಾಗಿ ತಮ್ಮ ಸೇವೆ ಮುಂದುವರಿಸು ವುದಾಗಿ ಹೇಳಿದ್ದಾರೆ. ಜಾರ್ಖಂಡ್‌ನ‌ಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಬೇಕಿದ್ದಕಾರಣ ಅವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ. 
 

Advertisement

Udayavani is now on Telegram. Click here to join our channel and stay updated with the latest news.

Next